
ಕಾರ್ಕಳ: ಸುಮಾರು 6.50 ಕೋ.ರೂ ವೆಚ್ಚದಲ್ಲಿ ವಿವಿಧ ಅಭಿವೃದ್ದಿಗಳು, ರಸ್ತೆ ವಿಸ್ತರಣೆ ಜೊತೆಗೆ ಡಿವೈಡರುಗಳಲ್ಲಿ ಅಲಂಕಾರಿಕ ದೀಪಗಳು ಪೇಟೆಯ ಅಂದವನ್ನು ಹೆಚ್ಚಿಸಿದೆ. ಅಭಿವೃದ್ದಿ ಕಾಮಗಾರಿಯನ್ನು ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿ ಮೂಲಭೂತ ಸೌಕರ್ಯ ಈಡೇರಿಸುವಲ್ಲಿ ಮಹತ್ತರ ಸಾಧನೆಯನ್ನು ತಲುಪಿದ್ದೇವೆ. ದಶ ದಿಕ್ಕೂಗಳಿಗೂ ಹೋದರು ಅಲ್ಲಿಯ ರಸ್ತೆಗಳು ಸುಧಾರಣೆ ಕಂಡಿವೆ. ನಗರ ರಸ್ತೆ, ಪೇಟೆ ಸುಂದರ ರಸ್ತೆ, ನಗರಗಳಾಗಿ ಪರಿವರ್ತನೆಯಾಗಿವೆ.
ಮತ್ತೊಮ್ಮೆ ಅವಕಾಶ ನೀಡಿದಲ್ಲಿ ಮತ್ತೆ ಇದೆ ಮಾದರಿಯಲ್ಲಿ ಇತರ ಉಪ ಪೇಟೆಗಳನ್ನು ಸುಸಜ್ಜಿತಗೊಳಿಸಲಾಗುವುದು ಎಂದರು.
ಉದ್ಯಮಿ ಹಿರಿಯರಾದ ಅಣ್ಣಪ್ಪ ನಾಯಕ್ . ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಪೂರ್ಣಿಮಾ ಸಿಲ್ಕ್ಸ್ ನ ರವಿಪ್ರಕಾಶ್ ಪ್ರಭು, ಮಾತನಾಡಿದರು. ಕುಕ್ಕುಂದೂರು ಗ್ರಾ.ಪಂ ಅಧ್ಯಕ್ಷೆ ಶಶಿಮಣಿ, ಬಿಆರ್‌ಕೆ ಉದ್ಯಮಿ ನಾಗರಾಜ ಕಾಮತ್, ಉದ್ಯಮಿ ಬೋಳ ಶ್ರೀನಿವಾಸ ಕಾಮತ್, ರಾಜಾಪುರ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಪ್ರಭು, ಜಿ.ಪಂ ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು, ಪಿಡಬ್ಲುಡಿ ಇಲಾಖೆ ಎಡಬ್ಲುಇ ಭುವನೇಶ್ವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರವೀಂದ್ರ ಮಡಿವಾಳ ಪ್ರಸ್ತಾವನೆಗೈದರು. ಜ್ಯೋತಿರಮೇಶ್ ನಿರೂಪಿಸಿದರು. ಲೊಕೋಪಯೋಗಿ ಇಲಾಖೆಯ ಭುವನೇಶ್ವರ್ ಇಂಜಿನಿಯರ್ ಲಾಯ್ಡ್ ಅವರನ್ನು ಗೌರವಿಸಲಾಯಿತ ನಾಗರಿಕರ ಪರವಾಗಿ ಸಚಿವರನ್ನು ಸನ್ಮಾನಿಸಲಾಯಿತು
ವರದಿ: ಅರುಣ ಭಟ್ ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ