
ಕಾರ್ಕಳ: ಮಠಕ್ಕೆ ಮುಸ್ಲಿಂ ದೊರೆ ಜಾಗ ನೀಡಿದ್ದ ಎಂಬ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆಯನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಮುತಾಲಿಕ್, ಸಾವಿರಾರು ವರ್ಷಗಳಿಂದ ಶ್ರೀಕೃಷ್ಣಮಠದಲ್ಲಿ ಪೂಜೆ ಪುನಸ್ಕಾರಗಳು ನಡೆದುಕೊಂಡು ಬರುತ್ತವೆ. ಆದರೆ ವಿವಾದ ಎಬ್ಬಿಸಿ ಮುಸ್ಲಿಮ್ ಮತ ಸಂಪಾದಿಸಲು ಇಂತಹ ಅಸಹ್ಯ ಹೇಳಿಕೆ ನೀಡಲಾಗಿದೆ. ಇಂತಹ ಅಸಹ್ಯ ಕೃತ್ಯವನ್ನು ಮಾಡಿರುವ ಮಿಥುನ್ ರೈ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಮಠದ ಕುರಿತು ನೀವು ನೀಡಿದ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.
ಕೇವಲ ಮುಸ್ಲಿಂ ಮತಗಳಿಗಾಗಿ ನೀವು ಈ ಕೃತ್ಯ ಮಾಡಿದ್ದರೆ ಕೃಷ್ಣಭಕ್ತರು ಮತ್ತು ಹಿಂದೂಗಳು ನಿಮಗೆ ಮತ ಹಾಕುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಇದು ಯಾಕೆ ಬೇಕಿತ್ತು? ಇದರ ಅವಶ್ಯಕತೆ ಇರಲಿಲ್ಲ. ಇಂತಹ ಹೇಳಿಕೆಗಳ ಮೂಲಕವೇ ಇಂದು ನಿಮ್ಮ ಸ್ಥಿತಿ ದೇಶದಲ್ಲಿ ಹೇಗಿದೆ ಅಂತ ಅವಲೋಕನ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ವರದಿ: ಅರುಣ ಭಟ್ ಕಾರ್ಕಳ

More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ