ಹೊನ್ನಾವರ : ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ತಾಲ್ಲೂಕಿನಾದ್ಯಂತ ಒಟ್ಟು ೨೬ ಕಂಟೈನ್ಮೆoಟ ಜೋನ್‌ಗಳನ್ನು ಮಾಡಲಾಗಿದ್ದು ತಾಲ್ಲೂಕಾಡಳಿತಕ್ಕೆ ತಲೆನೋವಾಗಿ ಪರಣಮಿಸಿದೆ. ರವಿವಾರ ೬೨ ಸೋಂಕಿತರು ಪತ್ತೆಯಾಗಿದ್ದು ಸಕ್ರೀಯ ಸೋಂಕಿತರ ಸಂಖೈ ೭೫೦ಕ್ಕೇರಿದ್ದು ಮೂರು ಸಾವು ಸಂಭವಿಸಿದೆ.
ಪ್ರಾರಂಭದ ದಿನಗಳಲ್ಲಿ ಪಟ್ಟಣದಲ್ಲಿ ಹೆಚ್ಚಿನ ಸೋಂಕಿತರಿದ್ದು ಆನಂತರ ಗ್ರಾಮೀಣ ಭಾಗದಲ್ಲು ಸೋಂಕು ಹರಡಲಾರಂಭಿಸಿತು. ನಾಗರೀಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿರ್ಲಕ್ಷವಹಿಸಿದ್ದು ಅಲ್ಲದೇ ವಿವಾಹ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದಿದ್ದು ಕರೋನಾ ಮಹಾಮಾರಿ ಉಲ್ಬಣಕ್ಕೆ ಕಾರಣವಾಗಿದೆ.
ಹೊನ್ನಾವರ ಪಟ್ಟಣದ ಕೆಳಗಿನ ಪಾಳ್ಯ ವಿಶೇಷ ಕಂಟೈನ್‌ಮೆAಟಜೋನ್ ಎಂದು ಗುರುತಿಸಲಾಗಿದ್ದು ಕಮಟೆ ಹಿತ್ತಲ್, ದುರ್ಗಾಕೇರಿ, ರಾಯಲಕೇರಿ,ರಜತಗಿರಿ ಕೆಎಚಬಿ ಕಾಲೋನಿ, ಗಾಂಧಿನಗರ,ಜೋಗಮಠ, ಬಾಂದೇಗದ್ದೆ, ಮೈಕ್ರೋ ಕಂಟೈನ್ಮೆAಟ್‌ಗಳಾಗಿ ಗುರುತಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಹಳದೀಪುರ,ಅಗ್ರಹಾರ, ವಂದೂರು, ಕೆಳಗಿನ ಇಡಗುಂಜಿ, ಮೇಲಿನ ಇಡಗುಂಜಿ, ಗುಂಡಬಾಳ, ಬೇರಂಕಿ,ಸಾಲಕೋಡ,ಕೊAಡದಕುಳಿ,ಕುದ್ರಿಗಿ,ಹೇರAಗಡಿ ಗ್ರಾಮಗಳಲ್ಲಿ ಕಂಟೈನ್‌ಮೆoಟೆಜೋನ್‌ಗಳನ್ನು ಗುರುತಿಸಲಾಗಿದೆ. ಒಟ್ಟು ೭೫೦ ಸಕ್ರೀಯ ಸೋಂಕಿತರಲ್ಲಿ ೬೫೬ ಮನೆಗಳಲ್ಲಿ, ೧೯ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ,೫೩ಮಂದಿ ಇತರೆ ಆಸ್ಪತ್ರೆಗಳಲ್ಲಿ ಹಾಗೂ ೨೨ಮಂದಿ ಕೋವಿಡ್ ಕೇರ್‌ಸೇಂಟರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಕೆ ಹಾಗೂ ಮರಣ ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಹಶೀಲ್ದಾರ ವಿವೇಕ ಶೇಣ್ವಿಯವರು ತಾಲ್ಲೂಕಿನ ಜನತೆಯಿಂದ ಕರೋನಾ ಮಹಾಮಾರಿ ನಿಯಂತ್ರಣಕ್ಕೆ ಹೆಚ್ಚಿನ ಸಹಕಾರ ಬಯಸಿದ್ದಾರೆ. ಪಟ್ಟಣ ಪಂಚಾಯತ, ತಾಲ್ಲೂಕು ಪಂಚಾಯತ, ಪೋಲೀಸ ಇಲಾಖೆ ಹಾಗೂ ಆರೋಗ್ಯ ಇಲಾಖೆಯವರು ಧ್ವನಿವರ್ಧಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಜಾಗ್ರತೆ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಕಟ್ಟುನಿಟ್ಟಿನ ಲಾಕಡೌನ್‌ನಿಂದ ಸೋಂಕಿತರ ಸಂಖ್ಯೆ ಸ್ವಲ್ಪ ಮಟ್ಟಿಗೆ ಇಳಿಮುಖವಾಗುತ್ತಿದ್ದರು ಸಾವಿನ ಸಂಖ್ಕೆ ಹೆಚ್ಚಾಗುತ್ತಿರುವುದು ತಾಲ್ಲೂಕಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಇನ್ನು ಕೆಲವು ದಿನಗಳ ಕಾಲ ಅಧಿಕಾರಿಗಳು ಇದೇ ರೀತಿ ಕ್ರಮಕೈಗೊಳ್ಳಬೇಕೆಂದು ಹೆಚ್ಚಿನವರ ಅಭಿಪ್ರಾಯವಾಗಿದೆ.
ಜಿಲ್ಲೆಯಲ್ಲಿ ಸೋಮವಾರದಿಂದ ಗುರುವಾರದವರೆಗೆ ಬೆಳಿಗ್ಗೆ ೮ ಂಟೆ ವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟರು ಹೊನ್ನಾವರದಲ್ಲಿ ಜೂನ್ ೭ರವರೆಗೆ ಅವಕಾಶ ನೀಡದೆ ಮನೆಮನೆಗೆ ಸಾಮಾನುಗಳನ್ನು ಸಾಗಿಸಲು ಅವಕಾಶ ಮಾಡಿಕೊಡಲಾಗಿತ್ತು. ಇ ಬಗ್ಗೆ ತಹಶೀಲ್ದಾರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಕೂಡ ನೀಡಿದ್ದರು. ಈ ಬಗ್ಗೆ ಧ್ವನಿವರ್ಧಕಗಳಲ್ಲು ಪ್ರಚಾರ ಮಾಡಲಾಗಿತ್ತು. ಆದರೆ ಸಂಜೆ ಸಾಮಾಜಿ ಜಾಲತಾಣದಲ್ಲಿ ಹರಿದು ಬಂದ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರರವರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲು ಒಂದೇ ಕಾನೂನು ಎಂಬ ಹೇಳಿಕೆ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಹೊನ್ನಾವರದ ತಾಲ್ಲೂಕಿನಲ್ಲಿ ಕರೋನಾ ಮಹಾಮಾರಿ ಆರ್ಭಟ ಹೆಚ್ಚಾಗುತ್ತಿದ್ದರು ನಾಗರೀಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯವಹರಿಸುತ್ತಿರುವುದು ಕಂಡು ಬರುತ್ತಿದೆ. ಬಜಾರ ರಸ್ತೆಯ ಅಂಗಡಿಗಳಲ್ಲಿ ಖರೀದುಸುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಜಿಲ್ಲಾಡಳಿತ ಯಾವದೇ ಕಾನೂನು ಮಾಡಿದರು ನಮ್ಮ ಆರೋಗ್ಯ ರಕ್ಷಣೆಗೆ ನಾವು ಜವಾಬ್ದಾರಿಯಾಗಬೇಕಾಗಿದೆ, ಆಗ ಮಾತ್ರ ರೋಗ ನಿಯಂತ್ರಣ ಬರಲು ಸಾಧ್ಯ,
ಸರಕಾರ ಆದ್ಯತೆಯ ಮೇರೆಗೆ ಲಸಿಕೆ ನೀಡುತ್ತಿದ್ದು ರವಿವಾರ ಅರಣ್ಯ ಇಲಾಖೆ ಸಿಬ್ಬಂದಿಗಳು, ನ್ಯಾಯವಾದಿಗಳು ಹಾಗೂ ಟೆಲಿಪೋನ್ ಇಲಾಕೆಯವರು ಒಟ್ಟು ೩೧೩ಮನಂದಿ ಲಸಿಕೆಯನ್ನು ಪಡೆದಿದ್ದಾರೆ.
ಹೊನ್ನಾವರದಲ್ಲಿ ರೋಗ ನಿಯಂತ್ರಣಕ್ಕೆ ಬರಲು ನಾಗರೀಕರು ಹೆಚ್ಚಿನ ಸಹಕಾರ ನೀಡಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸರಕಾರದ ಆದೇಶ ಪಾಲನೆ ಮಾಡಿ ಆಧಿಕಾರಿಗಳಿಗೆ ಸಹಕಾರ ನೀಡಬೇಕಾಗಿದೆ. ಕಟ್ಟುನಿಟ್ಟಿನ ಲಾಕಡೌನ್‌ನಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು ಇನ್ನೂ ಸ್ವಲ್ಪದಿನ ಸಹಕಾರ ನೀಡಬೇಕಾಗಿದೆ ಎಂದು ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿಯವರು ಅಭಿಪ್ರಾಯ ಪಡುತ್ತಾರೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ