December 22, 2024

Bhavana Tv

Its Your Channel

ಹಿರೇಗುತ್ತಿ ಸರಕಾರಿ ಆಸ್ಪತ್ರೆಗೆ ಶಾಂತಾ ನಾಯಕ ರಿಂದ ವೈದ್ಯಕೀಯ ಸಾಮಗ್ರಿಗಳ ದೇಣಿಗೆ

ಹಿರೇಗುತ್ತಿ: ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಗುತ್ತಿಯ ವೈದ್ಯರು ಹಾಗೂ ಸಿಬ್ಬಂದಿಯವರಿಗೆ ಕೊರೋನಾದ ಸಂಕಷ್ಟದ ಸಮಯದಲ್ಲಿ ಅತೀ ಅವಶ್ಯಕವಾಗಿರುವ ೧೦.೦೦೦ ರೂ ಮೊತ್ತದ ಎನ್.೯೫ ಮಾಸ್ಕ್. ಟ್ರಿಪಲ್ ಲೇಯರ್ ಮಾಸ್ಕ್. ಸೆನೀಟೈಸರ್. ಫೇಸ್ ಶಿಲ್ಡ್ ಹಾಗೂ ಇನ್ನಿತರ ಅವಶ್ಯಕವಾಗಿರುವ ಸಾಮಗ್ರಿಗಳನ್ನು ದೇಣಿಗೆಯಾಗಿ ವೈದ್ಯಾಧಿಕಾರಿ ಡಾ.ಗಿರೀಶ ನಾಯ್ಕರವರಿಗೆ ಗ್ರಾ ಪಂ ಉಪಾಧ್ಯಕ್ಷರಾದ ಶಾಂತಾ ನಾರಾಯಣ ನಾಯಕ ನೀಡಿದರು.
ಅವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಗುತ್ತಿಯ ಡಾಕ್ಟರ್ ಗಿರೀಶ ನಾಯ್ಕ ಹಾಗೂ ಸಿಬ್ಬಂದಿ ವರ್ಗದವರು ಬ್ರಹ್ಮಜಟಕ ಯುವಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ.ಗಿರೀಶ ನಾಯಕ. ಶಾಂತಾ ನಾಯಕ. ವೆಂಕಟ್ರಾಯ ನಾಯಕ. ಗ್ರಾ ಪಂ ಹಿರೇಗುತ್ತಿ ಪಿ.ಡಿ.ಓ ಮಿಥಿನಾ ನಾಯಕ. ಕಾರ್ಯದರ್ಶಿ ಸಂಧ್ಯಾ ಗಾಂವಕರ. ಬಸ್ತೇಂವಾ ಫರ್ನಾಂಡೀಸ್ ಉಪಸ್ಥಿತರಿದ್ದರು.
ವರದಿ ; ಎನ್ ,ರಾಮೂ ಹಿರೇಗುತ್ತಿ

error: