ಭಟ್ಕಳ ; ತಾಲೂಕಿನಲ್ಲಿ ವೈದ್ಯಕೀಯ ವಲಯಕ್ಕೆ ಮಹತ್ವ ನೀಡಲಾಗಿದ್ದು ನನ್ನ ಪ್ರಾದೇಶಿಕಾಭಿವೃದ್ಧಿ ನಿಧಿ ಯೋಜನೆಯಿಂದ ಭಟ್ಕಳ ಮತ್ತು ಹೊನ್ನಾವರ ತಾಲೂಕು ಆಸ್ಪತ್ರೆಗಳಿಗೆ ಒಟ್ಟೂ ೪೦ ಲಕ್ಷ ರೂಪಾಯಿ ವೆಚ್ಚದ ೨ ನೂತನ ಅಂಬ್ಯುಲೆನ್ಸ್ ನೀಡಲಾಗಿದ್ದು ಇದರ ಉಪಯೋಗ ಜನತೆಗೆ ಸಿಗಲಿ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಅವರು ಮಂಗಳವಾರ ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಎರಡು ಅಂಬ್ಯುಲೆನ್ಸ್ಗಳನ್ನು ಲೋಕಾರ್ಪಣೆಗೊಳಿಸಿದರು. ಶಿರಾಲಿ ಮತ್ತು ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ೨ ಆಂಬ್ಯುಲೆನ್ಸ್ ಗಳ ಖರೀದಿಗೆ ಅನುದಾನವನ್ನು ಈಗಾಗಲೇ ಒದಗಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಎರಡು ಆಂಬ್ಯುಲೆನ್ಸ್ ಗಳೊಂದಿಗೆ ಮತ್ತೆರಡು ಆಂಬ್ಯುಲೆನ್ಸ್ ಗಳು ನನ್ನ ಕ್ಷೇತ್ರದ ಜನರಿಗಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಇದಕ್ಕೂ ಪೂರ್ವದಲ್ಲಿ ಕಡವಿನಕಟ್ಟಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮತ್ತು ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ನೂತನ ಅಂಭ್ಯುಲೆನ್ಸ್ಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ದೇವಸ್ಥಾನದಿಂದ ಭಟ್ಕಳ ತಾಲೂಕು ಆಸ್ಪತ್ರೆಯವರೆಗೆ ಸ್ವತಃ ಶಾಸಕರೆ ಆಂಬ್ಯುಲೆನ್ಸ್ ನ್ನು ಚಲಾಯಿಸಿದ್ದರು. ಆಸ್ಪತ್ರೆಯ ಹಲವು ವರ್ಷಗಳ ಬೇಡಿಕೆಯಾದ್ದರಿಂದ, ಆಸ್ಪತ್ರೆಯ ವೈದ್ಯರು ಹಾಗೂ ಸಮಸ್ತ ಸಿಬ್ಬಂದಿ ನೂತನ ಆಂಬ್ಯುಲೆನ್ಸ ನ್ನು ಚಪ್ಪಾಳೆ ತಟ್ಟುವ ಮೂಲಕ ಬರಮಾಡಿಕೊಂಡರು.
ಈ ಸಂದರ್ಬದಲ್ಲಿ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಎಸ್, ತಹಸೀಲ್ದಾರ ಎಸ್ ರವಿಚಂದ್ರ, ಜಿಲ್ಲಾ ವೈದ್ಯಾಧಿಕಾರಿ ಶರತ ನಾಯಕ, ತಾಲೂಕಾ ವೈದ್ಯಾಧಿಕಾರಿ ಡಾ. ಮೂರ್ತಿರಾಜ್ ಭಟ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ, ಮಾಜಿ ಯೋಧ ಶ್ರೀಕಾಂತ ನಾಯ್ಕ ಸೇರಿ ಇತರರು ಇದ್ದರು.
ವರದಿ ; ಮಂಜು ಮುಟ್ಟಳ್ಳಿ, ಭಟ್ಕಳ
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ