May 8, 2024

Bhavana Tv

Its Your Channel

“ಅಮೇರಿಕಾದ ಕ್ಯಾಲಿಫೋರ್ನಿಯಾ ಬಾರ್ ಕೌನ್ಸಿಲ್ ಅಟಾರ್ನಿಯಾಗಿ ಉತ್ತರ ಕನ್ನಡ ಕುಮಟಾದ ದಿಶಾ ಭಾಗವತ”

ಕುಮಟಾ: ಕುಮಟಾ ತಾಲೂಕಿನ ಕಡೇಕೋಡಿಯ ದಿಶಾ ಎಂಟರಪ್ರೈಸಸ್ ಮಾಲಿಕರಾದ ಮಂಜುನಾಥ ಹಾಗೂ ಶ್ರೀಮತಿ ಲಲಿತಾ ಭಾಗವತರ ಮಗಳಾದ ದಿಶಾ ಭಾಗವತ ಅಮೇರಿಕಾದ ಕ್ಯಾಲಿಫೋರ್ನಿಯಾದ ಬಾರ್ ಕೌನ್ಸಿಲ್ ನಲ್ಲಿ ಅಟರ್ನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬೆಂಗಳೂರಿನ ಕ್ರೈಸ್ತ ಕಾಲೇಜಿನಲ್ಲಿ ಎಲ್. ಎಲ್ ಬಿ ಮುಗಿಸಿ, ಅಮೇರಿಕಾದಲ್ಲಿ ಯು.ಸ್. ಸಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಕ್ಯಾಲಿಫೋರ್ನಿಯಾ ಬಾರ್ ಕೌನ್ಸಿಲ್ ನವರು ನಡೆಸುವ ಕಠಿಣ ಪರೀಕ್ಷೆಯಲ್ಲಿ ಪಾಸ ಆಗಿದ್ದಾರೆ. ಈ ಮೊದಲು ಅಮೇರಿಕಾದ ಸಿಟಿ ಅಟರ್ನಿ ಕಛೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ ಇವಳು ಕರಾಟೆಯಲ್ಲಿ ಬ್ಲಾಕ್ ಬೆಲ್ಟ ಪಡೆದಿದ್ದಾರೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಬಂಗಾರದ ಪದಕ ಪಡೆದಿದ್ದಾಳೆ. ಮಿಸ್ ಕರ್ನಾಟಕ ಪ್ರಶಸ್ತಿ ವಿಜೇತರಾಗಿರುವ ಭಾವನಾ ಭಾಗವತರ ಸಹೋದರಿಯಾಗಿದ್ದಾರೆ. ಇವಳ ಸಾಧನೆಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ, ಆರ್.ವಿ ದೇಶಪಾಂಡೆ,ಕುಮಟಾ ಶಾಸಕರಾದ ದಿನಕರ ಶೆಟ್ಟಿ, ಯಲ್ಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಮದ್ಗುಣಿ ಅಭಿನಂದಿಸಿದ್ದಾರೆ.

error: