May 10, 2024

Bhavana Tv

Its Your Channel

ಮಾಜಿ ಶಾಸಕಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರ ನೇತೃತ್ವದಲ್ಲಿ ಕುಮಟಾದಲ್ಲಿ ಪ್ರತಿಭಟನೆ.

ಕುಮಟಾ ; ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಸ್ತಿಕಟ್ಟೆ ಸರ್ಕಲ್ ಬಳಿಯ ವಿ.ಪಿ.ಪ್ರಭು ಪಟ್ರೋಲ್ ಪಂಪ್ ಹತ್ತಿರ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಶಾಸಕಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪೆಟ್ರೋಲ್ ಬೆಲೆ ೧೦೦ ಗಡಿ ದಾಟಿದ್ದರಿಂದ ಪೆಟ್ರೋಲ್ ಬಂಕ್ ಗೆ ಹೂವಿನ ಹಾರ ಹಾಕಿ, ಕ್ರಿಕೆಟ್ ಬ್ಯಾಟ್ ಹಿಡಿದು ಶತಕ ಬಾರಿಸಿದ ರೀತಿಯಲ್ಲಿ ಕಾರ್ಯಕರ್ತರು ಪ್ರತಿಭಟಿಸಿ, ಕೇಂದ್ರ ಸರ್ಕಾರ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಬೆಲೆ ಏರಿಕೆ ಖಂಡಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ” ಮೋದಿ ಸರ್ಕಾರ ಅಚ್ಛೇ ದಿನ ತರುತ್ತೇವೆ ಎಂದು ಹೇಳಿ ಪೆಟ್ರೋಲ್ ಡಿಸೇಲ್ ದರವನ್ನು ಶತಕಕ್ಕೆ ಮುಟ್ಟಿಸಿದ್ದಾರೆ. ಅದೇ ರೀತಿ ತಿನ್ನೋ ಎಣ್ಣೆ ದ್ವಿಶತಕ್ಕೆ ಹಾಗೂ ಅಡುಗೆ ಅನಿಲ ಸಾವಿರಕ್ಕೆ ಸನಿಹಕ್ಕೆ ಬಂದಿದ್ದರೂ ಮೋದಿಯವರು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು
ಮಾಜಿ ಶಾಸಕಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮಾತನಾಡಿ, “ಇಂದು ಪಟ್ರೋಲ್ ದರ ಶತಕವನ್ನು ಬಾರಿಸಿದೆ. ಜನರು ಕಳೆದ ವರ್ಷದಿಂದ ಕರೋನ ಸಂಕಷ್ಟದಲ್ಲಿಯೇ ಇದ್ದಾರೆ, ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲಗಳ ದರ ಏರಿಸಿ ಜನರ ಸಾಮಾನ್ಯರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಹಿಂದಿನ ಪ್ರಧಾನಮಂತ್ರಿಗಳಾದ ಮನಮೋಹನ್ ಸಿಂಗ್ ಅವರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಏರಿಕೆಯಾದಾಗ ನಮ್ಮ ದೇಶದಲ್ಲಿ ತೈಲಬೆಲೆ ನಿಯಂತ್ರಣದಲ್ಲಿಟ್ಟಿದ್ದರು. ಆದರೆ ಅಂದು ಅದನ್ನೇ ಬೆಲೆ ಏರಿಕೆ ಎಂದು ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕರು ಇಂದು ನಾಪತ್ತೆಯಾಗಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ನಾನು ನೋಡಿಯೇ ಇಲ್ಲ. ಇಂದು ಕೊರೋನ ಪರಿಸ್ಥಿತಿ ಇರುವುದರಿಂದ ನಮ್ಮ ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದಂತೆ ಚಿಕ್ಕ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ, ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದೇ ರೀತಿ ಮುಂದುವರಿದರೆ ನಾವು ಹೆಚ್ಚಿನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾದ ಆರ್.ಹೆಚ್.ನಾಯ್ಕ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ನಾಯ್ಕ ಅವರು ಮಾತನಾಡಿ ಪಟ್ರೋಲ್ ಡೀಸೆಲ್ ದರ ಏರಿಕೆಗೆ ಕಾರಣರಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ.ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ಮುಖಂಡರಾದ ರವಿಕುಮಾರ್ ಎಂ.ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪರಸ್ಮಾಲ್ ಜೈನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೊನ್ನಪ್ಪ ನಾಯಕ, ನಾಗೇಶ್ ನಾಯ್ಕ, ಸುರೇಖಾ ವಾರೇಕರ್,ಮುಜಾಫರ್ ಸಾಬ್, ಶಶಿಕಾಂತ ನಾಯ್ಕ, ಗಜಾನನ ನಾಯ್ಕ, ಅಶೋಕ್ ಗೌಡ, ಚಂದ್ರಹಾಸ ನಾಯಕ, ಆನಂದು ನಾಯಕ, ಎಂ.ಟಿ.ನಾಯ್ಕ, ವಿನಯಾ ಜಾರ್ಜ್, ಮುಂತಾದವರು ಹಾಜರಿದ್ದರು.
ವರದು ; ನಟರಾಜ ಗದ್ದೆಮನೆ, ಕುಮಟಾ

error: