ಭಟ್ಕಳ: ದೇಶದಲ್ಲಿಯೇ ಕೋರೊನಾ ಹಾಟ್ ಸ್ಪಾಟ್ ಎಂದು ಗುರುತಿಸಲ್ಪಟ್ಟಿರುವ ಪಟ್ಟಣದಲ್ಲಿ, ಹೋಮ್ ಕ್ವಾರಂಟೈನ್ ನಿಯಮಗಳನ್ನು ಅನೇಕರು ಗಾಳಿಗೆ ತೂರಿರುವುದು ಕಂಡುಬAದಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಎಲ್ಲರನ್ನೂ ಸರ್ಕಾರಿ ಕ್ವಾರಂಟೈನ್ ಮಾಡಲು ಮುಂದಾಗಿದೆ.
ಭಟ್ಕಳದಲ್ಲಿ ದಿನೇ ದಿನೇ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಭಟ್ಕಳದಲ್ಲೇ ೮+೧ ಕೊರೋನಾ ಪೀಡಿತರು ಪತ್ತೆಯಾಗಿರುವುದು ಆತಂಕಕ್ಕೆ ಈಡು ಮಾಡಿದೆ. ಈಗಾಗಲೇ ಪೀಡಿತರ ಸಂಬAಧಿಕರು, ನಿಕಟವರ್ತಿಗಳು, ಸಂಪರ್ಕಕ್ಕೆ ಬಂದವರಿಗೆ ಬೇರೆಯದೆ ವ್ಯವಸ್ಥೆ ಮಾಡಿದ್ದರೆ ಪರಿಣಾಮದ ತೀವ್ರತೆ ಕಡಿಮೆ ಇರುತ್ತಿತ್ತು ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಭಟ್ಕಳದಲ್ಲಿ ವಿದೇಶದಿಂದ ಬಂದವರ ಸಂಖ್ಯೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಒಂದು ಕಾರಣವಾದರೆ, ವಿದೇಶದಿಂದ ಆಗಮಿಸಿದವರು ಇತರರ ಕುರಿತು ಕಾಳಜಿ ತೆಗೆದುಕೊಳ್ಳದೇ ಇರುವುದು ಪರಿಣಾಮದ ಗಂಭೀರತೆಗೆ ಕಾರಣವಾಗಿದೆ.
ಹೋಮ್ ಕ್ವಾರಂಟೈನ್ ಮಾಡಿ ಮನೆಯಲ್ಲಿ ಇರಿ ಎಂದು ಹೇಳಿದರೂ ಸಹ ಅಂತಹ ಜನರು ಊರಿನ ತುಂಬಾ ತಿರುಗಾಡುತ್ತಾ ಇತರರಲ್ಲೂ ಭಯವನ್ನುಂಟು ಮಾಡುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದನ್ನು ತಡೆಯಲು ಆಡಳಿತ ಈ ಕ್ರಮ ಕೈಗೊಂಡಿದೆ. ಈಗಾಗಲೇ ಕೊರೋನಾ ಪೀಡಿತರಲ್ಲಿ ಬಹುತೇಕರು ಒಂದೇ ಕುಟುಂಬಕ್ಕೆ ಸಂಬAಧಪಟ್ಟವರೇ ಆಗಿದ್ದಾರೆ. ಮಂಗಳವಾರದAದು ಭಟ್ಕಳದ ಸುಮಾರು ೫೦ ಜನರಿಗೆ ಅಂಜುಮನ್ ಇಂಜಿನಿಯರಿAಗ್ ಕಾಲೇಜಿನ ಹಾಸ್ಟೆಲಿನಲ್ಲಿ ಇರಿಸಲಾಗಿದ್ದು, ಇದರ ಸಂಖೆ ಮತ್ತಷ್ಟು ಏರುವ ಸಂಭವನೀಯತೆ ಇದೆ. ಅದರಲ್ಲೇ ಇದ್ದ ವ್ಯಕ್ತಿಯೋರ್ವನಿಗೆ ಮಂಗಳವಾರದAದು ಪಾಸಿಟಿವ್ ಬಂದಿದೆ ಎನ್ನಲಾಗಿದ್ದು, ಇತರರ ಕುರಿತು ತೀವ್ರ ನಿಗಾ ವಹಿಸಲಾಗಿದೆ. ಅಂಜುಮನ್ ಕಾಲೇಜಿನ ಹಾಸ್ಟೆಲಿನ ಹೊರಗೆ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಾಲೂಕಾಡಳಿತ ತಿಳಿಸಿದೆ.
ಬೆಂಗಳೂರಿನಿAದ ಬಂದವರ ಮೇಲೂ ನಿಗಾ: ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾಗುತ್ತಿರುವಂತೆ ಕೆಲಸದ ನಿಮಿತ್ತ ಹೊರಗೆ ಹೋದವರು ತವರಿಗೆ ಮರಳಲು ಹರಸಾಹಸ ಪಡುತ್ತಿದ್ದಾರೆ. ಹೆಚ್ಚಿನವರು ಈಗಾಗಲೇ ಬಂದಿದ್ದು ಉಳಿದವರು ಜನಪ್ರತಿನಿಧಿಗಳ, ಅಧಿಕಾರಿಗಳ ಪ್ರಭಾವ ಬಳಸಿ ಬರುತ್ತಿದ್ದಾರೆ. ಭಟ್ಕಳದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿದಿನ ಹೀಗೆ ಹಲವರು ಬರುತ್ತಿದ್ದಾರೆ. ಇದನ್ನೂ ಕೂಡ ತಾಲೂಕಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಬೆಂಗಳೂರು ಅಥವಾ ಹೊರಗಿನಿಂದ ಬಂದವರಿಗೆ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ವಿಧಿಸುತ್ತಿದೆ. ಸೋಮವಾರ ಭಟ್ಕಳಕ್ಕೆ ಬಂದ ಸುಮಾರು ೧೫ ಜನರನ್ನು ತಾಲೂಕಾಡಳಿತವೇ ಖುದ್ದಾಗಿ ಹೋಮ್ ಕ್ವಾರಂಟಟೈನ್ ನಲ್ಲಿ ಇರಿಸಿದೆ. ದೇವರಾಜು ಅರಸು ಹಾಸ್ಟೆಲ್ ಅನ್ನು ಹೋಮ್ ಕ್ವಾರಂಟೈನ್ ಗಳಾಗಿ ಪರಿವರ್ತಿಸಿದ್ದು, ಹೊರಗಿನಿಂದ ಬಂದವರಿಗೆ ಯಾವುದೇ ಲಕ್ಷಣ ಕಂಡು ಬರದಿದ್ದರೂ ಅವರನ್ನು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತಿದೆ.
ಹೋಮ್ ಕ್ವಾರಂಟೈನ್‌ಗಳ ಬೇಡಿಕೆ ಹೆಚ್ಚು, ಕಿರಿಕಿರಿ: ಇನ್ನು ಬೆಂಗಳೂರಿನಿAದ ಬಂದವರನ್ನು ಹೋಮ್ ಕ್ವಾರಂಟೈನ್ ನಲ್ಲಿರಿಸಿದ್ದು, ಎಲ್ಲರೂ ಶ್ರೀಮಂತ ಕುಟುಂಬದವರಾಗಿದ್ದು, ದಿನದಿಂದ ದಿನಕ್ಕೆ ಇವರ ಬೇಡಿಕೆ ಹೆಚ್ಚಾಗಿದೆ. ಮೊದಲ ದಿನ ಸೋಪ್ ಬಳಸಿದ್ದ ಇವರಿಗೆ ಇಂದು ಹ್ಯಾಡ್ ವಾಶ್ ಲಿಕ್ವಿಡ್ ಬೇಕೆಂದು ಬೇಡಿಕೆ ಇಟ್ಟರೆ, ಮತ್ತೊಮ್ಮೆ ನಮಗೆ ಈ ರೀತಿಯ ಜೀವನ ಶೈಲಿ ರೂಢಿಯಿಲ್ಲ. ಸಮರ್ಪಕ ವ್ಯವಸ್ಥೆ ಮಾಡಿ ಎಂದು ಕಿರಿಕಿರಿ ನೀಡುತ್ತಿದ್ದಾರೆನ್ನಲಾಗಿದೆ. ಇದು ಸದ್ಯ ಹೋಮ್ ಕ್ವಾರಂಟೈನ್ ನೋಡಿಕೊಳ್ಳುತ್ತಿರುವವರಿಗೆ ಕಿರಿ ಕಿರಿ ಉಂಟಾಗಿದೆ. ಎಲ್ಲ ವ್ಯವಸ್ಥೆಯ ಮಧ್ಯೆಯೂ ಹೋಮ್ ಕ್ವಾರಂಟೈನ್‌ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಭಟ್ಕಳದಲ್ಲಿದ್ದಾರೆ ಒಟ್ಟು ೩೩೪ ಹೋಮ್ ಕ್ವಾರಂಟೈನ್: ಸದ್ಯ ಭಟ್ಕಳದಲ್ಲಿ ಸರಕಾರಿ ಆಸ್ಪತ್ರೆ ಎದುರಿನ ದೇವರಾಜ್ ಅರಸು ಹಾಸ್ಟೆಲ್, ಅಂಜುಮಾನ್ ಕಾಲೇಜು ಹಾಗೂ ಅವರ ಅವರ ಮನೆಯಲ್ಲಿ ಒಟ್ಟು ತಾಲೂಕಿನಲ್ಲಿ ೩೩೪ ಹೋಮ್ ಕ್ವಾರಂಟೈನಗಳಿದ್ದು, ಎಲ್ಲರ ಮೇಲೂ ಜಿಲ್ಲಾಡಳಿತ, ತಾಲೂಕಾಡಳಿತ ನಿಗಾ ಇರಿಸಿದೆ. ಇದರಿಂದ ಭಟ್ಕಳದಲ್ಲಿ ಕೋರೋನಾ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿದ್ದರೂ, ಸಾಕಷ್ಟು ಮಟ್ಟಿನ ಗಮನ ಅವಶ್ಯಕವಾಗಿದೆ.
source : nudijenu
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ