
ಅಂಕೋಲಾ: ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದ ನಿವಾಸಿಯಾಗಿದ್ದು ೨೦ ವರ್ಷ ಗಳಿಂದ ಮಂಗಳೂರಿನ ಕೆ.ಎಸ್.ಆರ್.ಪಿ. ೭ನೆ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈಶ್ವರ ಹರಿಕಾಂತ ಹಾಗೂ ಆರತಿ ಹರಿಕಾಂತ ದಂಪತಿಯ ಮಗಳಾದ ವಿನಂತಿ ಇವಳು ಚಿಕ್ಕ ವಯಸ್ಸಿನಲ್ಲಿಯೇ ಯೋಗಾಸನದಲ್ಲಿ ಆಸಕ್ತಿ ಹೊಂದಿದ್ದು ೧೦೦ ಕ್ಕೂ ಹೆಚ್ಚು ಯೋಗಾಸನ ಭಂಗಿಗಳನ್ನು ಸರಾಗವಾಗಿ ಮಾಡುವ ಇವಳು “ಉಷ್ಟ್ರಾಸನ ಭಂಗಿ”ಯಲ್ಲಿ ದೀರ್ಘ ಕಾಲದ ವರೆಗೆ (೫ ನಿಮಿಷ, ೧೩ ಸೆಕೆಂಡ್) ತಟಸ್ಥವಾಗಿ ಹಿಡಿದು ಸಾಧನೆ ಮಾಡಿದ್ದಾಳೆ.
ಪುಟಾಣಿ ವಿನಂತಿ ಹರಿಕಾಂತ ಇವಳು ಪುಟ್ಟ ವಯಸ್ಸಿನಲ್ಲಿ ಯೋಗಾಸನದಲ್ಲಿ ಅದ್ಭುತ ಸಾಧನೆಯನ್ನು ಮಾಡಿದ್ದಾಳೆ. ಈಕೆಯು ವಿಶೇಷ ಕೌಶಲ್ಯಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಪ್ರಶಸ್ತಿ ಲಭಿಸಿದೆ.


ಕೋರೋನಾ ಸಂದರ್ಭದಲ್ಲಿ ಶಾಲೆಯ ಮೆಟ್ಟಿಲನ್ನೆರದೆ ಕೇವಲ ಯೋಗಾಸನದಲ್ಲಿ ಅಷ್ಟೇ ಅಲ್ಲದೇ ಆನ್ ಲೈನ್ ಮೂಲಕ ವಿವಿಧ ೩೦ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ತನ್ನ ಅಭಿನಯಕ್ಕೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನದೊಂದಿಗೆ “ಮ್ಯಾಕ್ಸ್ ಟಾಪ್ ಕಿಡ್ಸ್ ಕಂಟೆಸ್ಟ್ ನಲ್ಲಿ ” ದ ರೈಸಿಂಗ್ ಬೇಬಿ ಸ್ಟಾರ್ ” ಎಂಬ ಬಿರುದು ಸಹ ಈಕೆಗೆ ಲಭಿಸಿದೆ.

More Stories
ಕಾವ್ಯ ಕಟ್ಟುವುದಲ್ಲ-ಬದಲಿಗೆ ಹುಟ್ಟುವುದು: ಮಂಜುನಾಥ ಗಾಂವಕರ, ಬರ್ಗಿ
೧೮ ವರ್ಷದ ಯುವಕ ರವೀಶ್ ಹರಿಕಾಂತ್ನ ಕಲಾ ಪ್ರೌಢಿಮೆ
“ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ -ವೈಶಾಲಿ ಹೆಗಡೆ