July 26, 2021

Bhavana Tv

Its Your Channel

ಗಣಪತಿ ಮೂರ್ತಿ ತಯಾರಿಕೆಯಲ್ಲಿ ಹೆಸರುಗಳಿಸಿದ ವಸಂತ ಮಹಾಲೆಯವರಿಗೆ ಕಾಕರಮಠದಲ್ಲಿ ಸನ್ಮಾನ

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕು ಗಣಪತಿ ಮೂರ್ತಿ ತಯಾರಿಕೆಯಲ್ಲಿ ದೇಶದಲ್ಲಿ ಹೆಸರುಗಳಿಸಿದೆ. ಅವರಲ್ಲಿ ಅಂಕೋಲಾ ಪಟ್ಟಣದ ಕಾಕರಮಠದಲ್ಲಿರುವ ವಸಂತ ಮಹಾಲೆ ಒಬ್ಬರು. ಅವರು ತಮ್ಮ ಮನೆಯಲ್ಲಿ ಹಲವು ವರ್ಷಗಳಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮೂಲಕ ಪರಿಚಿತರಾದವರು . ಅವರು ಸಾಹಿತ್ಯ ಕೃಷಿಯಲ್ಲಿ ಸಣ್ಣ ಕತೆ , ಹಾಸ್ಯ ಲೇಖನ , ನಾಟಕ ರಚನೆ , ನಟನೆಗಳಲ್ಲಿ ತಮ್ಮ ಛಾಪನ್ನು ಮೂಡಿಸುವ ಮೂಲಕ ನಮಗೆ ಮಾದರಿಯಾಗಿದ್ದಾರೆ ಎಂದು ಯಕ್ಷಗಾನ ಕಲಾವಿದ ನಿವೃತ್ತ ಪ್ರಾಚಾರ್ಯ ರಾಮಕೃಷ್ಣ ಗುಂದಿ ಹೇಳಿದರು . ಕಾಕರಮಠದಲ್ಲಿ ಮಿತ್ರ ಸಂಗಮದವರು ಆಯೋಜಿಸಿದ ಸರಳ ಕಾರ್ಯಕ್ರಮದಲ್ಲಿ ವಸಂತ ಮಹಾಲೆಯವರು ಎಂಬತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು . ಸಾಹಿತಿ ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ನಾಯಕ ಮಾತನಾಡಿ ವಸಂತ ಮಹಾಲೆಯವರದ್ದು ಬಹುರೂಪಿ ವ್ಯಕ್ತಿತ್ವ ಸರಳ ಹಾಗೂ ಆಡಂಬರವಿಲ್ಲದ ಬದುಕು ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದರು .
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಮೋಹನ ಹಬ್ಬು, ವಿ.ಆರ್.ವೆರ್ಣೇಕರ, ಲೇಖಕ ಮಹಾಂತೇಶ ರೇವಡಿ ಮಾತನಾಡಿದರು . ಈ ಸಂದರ್ಭದಲ್ಲಿ ಶಿಕ್ಷಕ ರಾಘವೇಂದ್ರ ಮಹಾಲೆ, ಪ್ರಮುಖರಾದ ಬಿ.ಕೃಷ್ಣಾನಂದ, ಗಜಾನನ ಶೆಟ್ಟಿ ಇದ್ದರು

error: