April 10, 2025

Bhavana Tv

Its Your Channel

ಬೀರಣ್ಣ ಮೊಗಟಾರವರ ಮಗನ ಮದುವೆಗೆ ಸಾಕ್ಷಿಯಾದ ಸಭಾಪತಿ ವಿಶ್ವೇಶ್ವರ ಹೆಗಡೆ

ವರದಿ: ವೇಣುಗೋಪಾಲ ಮದ್ಗುಣಿ

ಅಂಕೋಲಾ: ವಿಶ್ರಾಂತ ಪ್ರಾಂಶುಪಾಲರಾದ ಯಲ್ಲಾಪರದ ಬೀರಣ್ಣ ನಾಯಕ ಮೊಗಟಾರವರ ಮಗ, ಭಾರತೀಯ ವಾಯುಪಡೆಯ ಉದ್ಯೋಗಿ ಶಿವದೇವ ಮೊಗಟಾರ ವಿವಾಹ ತಳಗದ್ದೆಯ ಪಾರ್ವತಿ ನಾಯಕರ ಪುತ್ರಿ ನವ್ಯ ನಾಯಕರ ಜೊತೆ ಅಂಕೋಲಾದ ವಾಸುದೇವ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಶುಭ ಕಾರ್ಯಕ್ರಮಕ್ಕೆ ರಾಜ್ಯದ ವಿಧಾನ ಸಭೆಯ ಸಭಾಪತಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇ.ಎಂ.ಸಿ.ನಿರ್ದೇಶಕರಾದ ಡಾ.ಗಜಾನನ ನಾಯಕ, ಚಲನ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ವಿ.ಶ್ರೀನಿವಾಸ ಮೂರ್ತಿ, ಪ್ರಮೋದ ಹೆಗಡೆ, ಜಿಲ್ಲಾ ಕ.ಸಾ.ಪ.ಅಧ್ಯಕ್ಷರಾದ ಬಿ.ಎನ್.ವಾಸರೆ, ಮಾಜಿ ಅಧ್ಯಕ್ಷರಾದ ರೋಹಿದಾಸ ನಾಯಕ, ಪಟ್ಟಣ ಪಂಚಾಯತ ಅಧ್ಯಕ್ಷರಾದ ಶಾಂತಲಾ ನಾಡಕರ್ಣಿ, ಮಾಜಿ ಅಧ್ಯಕ್ಷರಾದ ಅರುಣ ನಾಡಕರ್ಣಿ, ಸೆಂಟಮಿಲಾಗ್ರಿಸ್ ಅಧ್ಯಕ್ಷರಾದ ಜೊರ್ಜ ಫರ್ನಾಂಡೀಸ್, ಅಂಕೋಲಾ ಅರ್ಬನ್ ಅಧ್ಯಕ್ಷರಾದ ಭಾಸ್ಕರ ನಾರ್ವೇಕರ, ಎಂ.ಡಿ.ರವೀAದ್ರ ವೈದ್ಯ, ಹೆಸರಾಂತ ಗುತ್ತಿಗೆದಾರರಾದ ಬಿ.ಎಸ್.ಗಾಂವಕರ, ರಾಜ್ಯದ ಹಿರಿಯ ಅಧಿಕಾರಿಗಳು, ಕಿರುತೆರೆಯ ನಟರು ಶ್ರೀರಾಮ, ಪರಿಸರದ ಅಧ್ಯಕ್ಷರಾದ ವಸಂತ ನಾಯಕ, ಕರಾವಳಿ ಮಂಜಾವು ಪತ್ರಿಕೆಯ ಸಂಪಾದಕರಾದ ಗಂಗಾಧರ ಹಿರೇಗುತ್ತಿ, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪತ್ರಿಕಾ ವಿಭಾಗದ ಛೇರ್ಮನ್ ವೇಣುಗೋಪಾಲ ಮದ್ಗುಣಿ, ಯಲ್ಲಾಪುರ ಪ.ಪಂ ಮಾಜಿ ಅಧ್ಯಕ್ಷರಾದ ರಾಮು ನಾಯ್ಕ,ಜಿ.ಆರ್ ಹೆಗಡೆ ಕುಂಬ್ರಿಗುಡ್ಡೆ,ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ ನಾಯಕ, ಉದ್ಯಮಿಗಳು, ಜನಪ್ರತಿನಿಧಿಗಳು,ಹಿರಿಯ ನ್ಯಾಯವಾದಿ ನಾಗರಾಜ ನಾಯಕ,ಶಾಸಕರು, ನಿವೃತ್ತ ಹಿರಿಯ ಅಧಿಕಾರಿಗಳು,ಸಾಮಾಜಿಕ ಕಾರ್ಯಕರ್ತರು ಮುಂತಾದವರು ಪಾಲ್ಗೊಂಡು ಶುಭ ಹಾರೈಸಿದರು.

error: