
ಅoಕೋಲಾ– ಮಾದನಗೇರಿ ಮಾರ್ಗವಾಗಿ ಶಿವಪುರ-ಕೆಂಕಣಿ ಬಸ್ಸ್ ಸಂಚಾರ ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿತ್ತು. ಈ ಮಾರ್ಗವಾಗಿ ಬಸ್ಸ್ ಸಂಚರಿಸಲು ಈ ಮೊದಲು ಪ್ರಯತ್ನಿಸಿ ಸಫಲರಾದವರು ಸಾಮಾಜಿಕ ಹೋರಾಟಗಾರಾದ ಹೊಸಬಣ್ಣ ಕೃಷ್ಣ ನಾಯಕ ಹಿರೇಗುತ್ತಿ ಆಂದ್ಲೆ, ಈಗ ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ಬಸ್ಸ್ ಸಂಚಾರ ವ್ಯವಸ್ಥೆ ಪುನಃ ಆರಂಭಿಸಲು ಸಹಕರಿಸಿದ ಶಿರಸಿ ವಿಭಾಗದ ಏSಖಖಿಅ ಅಧಿಕಾರಿಗಳಿಗೆ ಹಾಗೂ ಅಂಕೋಲಾ ಡಿಪೋ ಏSಖಖಿಅ ಅಧಿಕಾರಿಗಳಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿ ಹೊಸಬಣ್ಣ ನಾಯಕ ಮಾತನಾಡಿದರು. ಮುಂದಿನ ದಿನಗಳಲ್ಲಿ ಈ ಬಸ್ಸನ್ನು ಖಂಡಗಾರ-ಹುಳಸೆ ವರೆಗೂ ವಿಸ್ತರಿಸಲಾಗುವುದು ಎಂದರು. ನಾರಾಯಣ ನಾಯಕ ಕೆಂಕಣಿ, ಫ್ರಾನ್ಸಿಸ್ ಫರ್ನಾಂಡೀಸ್, ಲಕ್ಷಿö್ಮÃಧರ ನಾರಾಯಣ ನಾಯಕ, ಶಾಂತಾರಾಮ ನಾಯಕ ಸಗಡಗೇರಿ, ಮೋಹನ ನಾಯಕ, ವೆಂಕಟ್ರಾಯ ನಾಯಕ, ನೀಲಕಂಠ ನಾಯಕ ಬಸ್ಸ್ ನಿರ್ವಾಹಕರು, ಕೆಂಕಣಿ-ಶಿವಪುರ ಊರ ನಾಗರಿಕರು ಉಪಸ್ಥಿತರಿದ್ದರು.

More Stories
ಕಾವ್ಯ ಕಟ್ಟುವುದಲ್ಲ-ಬದಲಿಗೆ ಹುಟ್ಟುವುದು: ಮಂಜುನಾಥ ಗಾಂವಕರ, ಬರ್ಗಿ
೧೮ ವರ್ಷದ ಯುವಕ ರವೀಶ್ ಹರಿಕಾಂತ್ನ ಕಲಾ ಪ್ರೌಢಿಮೆ
“ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ -ವೈಶಾಲಿ ಹೆಗಡೆ