
ವರದಿ: ವೇಣುಗೋಪಾಲ ಮದ್ಗುಣಿ
ಅಂಕೋಲಾ : ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ 2018-20ನೇ ಸಾಲಿನ ಬಿ.ಇಡಿ. ಪರೀಕ್ಷೆಯ ರ‍್ಯಾಂಕ್ ನ್ನು ಈಗ ಪ್ರಕಟಿಸಿದ್ದು ಸ್ಥಳೀಯ ಕೆ.ಎಲ್.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಸತತ ಏಳು ವರ್ಷಗಳಿಂದ ವಿಶ್ವವಿದ್ಯಾಲಯದ ರ‍್ಯಾಂಕ್ ಗಳಿಸುತ್ತಾ ಬಂದಿದೆ.
ಕಾಲೀಜಿನ ವಿದ್ಯಾರ್ಥಿಗಳಾದ ಕುಮಾರ ತಿಲಕ ಗಣಪತಿ ನಾಯ್ಕ 93.38% ಅಂಕಗಳಿಸಿ 3ನೇ ರ‍್ಯಾಂಕ್, ಕುಮಾರಿ ದೀಪಾ ಕೃಷ್ಣ ನಾಯ್ಕ 93.33% ಅಂಕಗಳಿಸಿ 4ನೇ ರ‍್ಯಾಂಕ್ ಹಾಗೂ ಕುಮಾರಿ ತೃಪ್ತಿ ಜಿ. 92.42% ಅಂಕಗಳಿಸಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 10ನೇ ರ‍್ಯಾಂಕ್ ಗಳಿಸಿ ಉನ್ನತ ಸಾಧನೆ ಮಾಡಿದ್ದಾರೆ.
ಇವರ ಸಾಧನೆ ಹಾಗೂ ಶಿಕ್ಷಣ ಮಹಾವಿದ್ಯಾಲಯದ ಸತತ ಸಾಧನೆಗೆ ಕೆ.ಎಲ್.ಇ. ಸಂಸ್ಥೆ ಬೆಳಗಾವಿಯ ಕಾರ್ಯಾಧ್ಯಕ್ಷರಾದ ಡಾ|| ಪ್ರಭಾಕರ ಕೋರೆ, ಡಿ.ಇಡಿ., ಬಿ.ಇಡಿ. ವಿಭಾಗದ ಅಧ್ಯಕ್ಷರಾದ ಶ್ರೀ ಜಯಾನಂದ ಎಂ. ಮುನವಳ್ಳಿ, ಸದಸ್ಯ ಕಾರ್ಯದರ್ಶಿಗಳಾದ ಮಹಾದೇವ ಬಳಿಗಾರ, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಡಾ|| ಡಿ.ಎಲ್.ಭಟ್ಕಳ, ಸಂಯೋಜಕರಾದ ಆರ್ ನಟರಾಜ, ಸದಸ್ಯರಾದ ಡಾ|| ಮೀನಲ್ ನಾರ್ವೇಕರ ಪ್ರಾಚಾರ್ಯರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

More Stories
ಕಾವ್ಯ ಕಟ್ಟುವುದಲ್ಲ-ಬದಲಿಗೆ ಹುಟ್ಟುವುದು: ಮಂಜುನಾಥ ಗಾಂವಕರ, ಬರ್ಗಿ
೧೮ ವರ್ಷದ ಯುವಕ ರವೀಶ್ ಹರಿಕಾಂತ್ನ ಕಲಾ ಪ್ರೌಢಿಮೆ
“ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ -ವೈಶಾಲಿ ಹೆಗಡೆ