
ಅಂಕೋಲಾ : ಅಂಕೋಲಾ-ಮಾದನಗೇರಿ ಮಾರ್ಗವಾಗಿ ಶಿವಪುರ-ಕೆಂಕಣಿ ಬಸ್ಸ್ ಸಂಚಾರ ಸೆಡ್ಯೂಲ್ ಮಾಡದೇ ಇದ್ದ ಕಾರಣ ಸ್ಥಗಿತವಾಗಿತ್ತು. ಈಗ ಸಾಮಾಜಿಕ ಹೋರಾಟಗಾರಾದ ಹೊಸಬಣ್ಣ ಕೃಷ್ಣ ನಾಯಕ ಆಂದ್ಲೆ, ಇವರ ಪ್ರಯತ್ನದಿಂದ ಖಾಯಂ ಬಸ್ ಆಗಿ ಪರಿವರ್ತಿಸಿ ದಿನಾಂಕ 13-08-2022 ಶÀನಿವಾರ ಹೊಸದಾಗಿ ಬಸ್ಸ್ ಸಂಚಾರ ಅಂಕೋಲಾ – ಮಾದನಗೇರಿ – ಆಂದ್ಲೆ – ಶಿವಪುರ – ಕೆಂಕಣಿ – ಖಂಡಗಾರ-ಹುಳಸೆ ಈ ಮಾರ್ಗದ ಮೂಲಕ ಸಂಚಾರ ಆರಂಭಿಸಿದೆ. ಬೆಳಿಗ್ಗೆ 8 ಗಂಟೆಗೆ ಅಂಕೋಲಾದಿoದ ಹೊರಟು ಮಾದನಗೇರಿ ಮಾರ್ಗವಾಗಿ ಹುಳಸೆ 9 ಗಂಟೆಗೆ ತಲುಪುತ್ತದೆ. ಬಸ್ಸ್ ಸಂಚಾರ ಹೊಸದಾಗಿ ಆರಂಭವಾಗಲು ಪ್ರಯತ್ನಿಸಿದ ಸಾಮಾಜಿಕ ಹೋರಾಟಗಾರಾದ ಹೊಸಬಣ್ಣ ಕೃಷ್ಣ ನಾಯಕ ಆಂದ್ಲೆ, ಹಾಗೂ ಡಿವಿಷನಲ್ ಕಂಟ್ರೋಲರ್ ಶಿರಸಿ, ಡಿ.ಟಿ.ಓ ಸುರೇಶ ನಾಯ್ಕ, ಪ್ರವೀಣ ಶೇಟ್ ಹಾಗೂ ಅಂಕೋಲಾ ಡಿಪೋKSRTC ಅಧಿಕಾರಿಗಳಿಗೆ ಸಹಕರಿಸಿದ ಸರ್ವರಿಗೂ ಆಂದ್ಲೆ, ಶಿವಪುರ, ಕೆಂಕಣಿ, ಖಂಡಗಾರ, ಹುಳಸೆ ಗ್ರಾಮದ ಯುವಕ ಸಂಘದವರು ಹಾಗೂ ಊರನಾಗರಿಕರು ಅಭಿನಂದಿಸಿ ಹೊಸಬಣ್ಣ ಗಾಂವಕರರವರಿAದ ಇನ್ನೂ ಹೆಚ್ಚಿನ ಸಾಮಾಜಿಕ ಸೇವೆ ನಡೆಯಲಿ ಎಂದು ಶುಭ ಹಾರೈಸಿದರು.

More Stories
ಕಾವ್ಯ ಕಟ್ಟುವುದಲ್ಲ-ಬದಲಿಗೆ ಹುಟ್ಟುವುದು: ಮಂಜುನಾಥ ಗಾಂವಕರ, ಬರ್ಗಿ
೧೮ ವರ್ಷದ ಯುವಕ ರವೀಶ್ ಹರಿಕಾಂತ್ನ ಕಲಾ ಪ್ರೌಢಿಮೆ
“ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ -ವೈಶಾಲಿ ಹೆಗಡೆ