
ವರದಿ: ವೇಣುಗೋಪಾಲ ಮದ್ಗುಣಿ
ಅಂಕೋಲಾ : ಕ್ರೀಡೆಗಳನ್ನು,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದಾಗ ನಮ್ಮ ಸಾಧನೆಗಳನ್ನು ತೋರಿಸಲು ನೆರವಾಗುತ್ತದೆ. ನಾನು ಸಹಕಾರ ಕ್ಷೇತ್ರದಲ್ಲಿ ಸಾಧಿಸಲು ಸಂಘಟನಾ ಮನೋಭಾವ ಕಾರಣ ಎಂದು ಸಹಕಾರಿ ರತ್ನ ಬೆಂಗಳೂರಿನ ಕರ್ನಾಟಕ ಹಾಲು ಮಹಾಮಂಡಲದ ಪಶುಸಂಗೋಪನಾ ವಿಭಾಗದ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಡಾ: ಡಿ ಎನ್
ಹೆಗಡೆ ಹಳವಳ್ಳಿ ಹೇಳಿದರು
ಅವರು ಅಂಕೋಲಾ ತಾಲೂಕಿನ ಹಳವಳ್ಳಿ ಯಲ್ಲಿ ಅಂಚೆಯಣ್ಣ ಕಾರ್ಯನಿರ್ವಹಿಸುತ್ತಿದ್ದ ಭಾಸ್ಕರ ಭಟ್ಟ ಸ್ಮರಣಾರ್ಥ ಕಿರಣ ಯುವಕ ಸಂಘ ಹಾಗೂ ಹಳವಳ್ಳಿ ಊರನಾಗರಿಕರ ಆಶ್ರಯದಲ್ಲಿ ನಡೆದ ಮುಕ್ತ ಕೇರಂ ಪಂದ್ಯಾವಳಿ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಉದ್ಘಾಟಕರರಾಗಿ ಆಗಮಿಸಿದ ಪ್ರಸಿದ್ದ ಗಾಯಕರು ಸಂಘಟನಕಾರರು ಆದ ಪ್ರಸನ್ನ ವೈದ್ಯ ಅವರು ಮಾತನಾಡಿ ಸಾಧನಾ ಸಭಾಭವನದಲ್ಲಿ ಸಾಧನ ಸಾಂಸ್ಕೃತಿಕ ನಿಕ್ಷೇಪದ ವ್ಯಕ್ತಿ, ಮಾಲಿಕನೋ ಅಥವಾ ಜವಾನನೋ ಉದ್ಘಾಟಿಸಿದ ಸಾಧಕನ ನೆನಪಿನ ಕಾರ್ಯಕ್ರಮ ಇದು “ಸಾಧನ” ಸಾಧಕ ಸಮಾವೇಶ ಎಂದು ಬಣ್ಣಿಸಿದರು.
ಪ್ರಾಯೋಜಕರಾದ ಪ್ರಕಾಶ ಹೆಗಡೆ ಡೋಂಗ್ರಿ ಗ್ರಾ,ಪಂ ಸದಸ್ಯರಾದ ನಿತ್ಯಾನಂದ ಭಟ್ಟ, ಡೋಂಗ್ರಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಲತಾ ನಾಯ್ಕ ಕಿರಣ ಯುವಕ ಸಂಘದ ಅಧ್ಯಕ್ಷ ವಿಶ್ವನಾಥ ಹೆಬ್ಬಾರ್ ,ಶುಭಹಾರೈಸಿದರು..
ಸಹಕಾರಿ ಕ್ಷೇತ್ರದಲ್ಲಿ ಸಾಧಿಸಿ ಸಹಕಾರಿ ರತ್ನ ರಾಗಿರುವ ಊರಿನ ಡಾ. ಡಿ ಎನ್ ಹೆಗಡೆ ,ಐ ಎಪ್ ಎಸ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನವೀನ ಹೆಗಡೆ ಹಬ್ಬಣಮನೆ ಅಚವೆ .ಎಸ್ ಎಸ್ ಎಲ್ ಸಿ ಯಲ್ಲಿ ಗಣನೀಯ ಸಾಧನೆ ಮಾಡಿದ ನರಸಿಂಹ ಹೆಗಡೆ ರಾಮ ಭಟ್ರಮನೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ನಂತರದಲ್ಲಿ ನಡೆದ ಕೇರಂ ಮುಕ್ತ ಡಬಲ್ಸ್ ಪಂದ್ಯದಲ್ಲಿ ದೂರದೂರದ ಊರಗಳಿಂದ ಆಗಮಿಸಿದ 26 ತಂಡಗಳಲ್ಲಿ ಸಿರ್ಸಿಯ ಮನು ಭಟ್ಟ ಹಾಗೂ ನಿಸಾರ್ ಜೋಡಿ ಪ್ರಥಮ ಹಾಗೂ ಸಿರ್ಸಿಯ ಫಾಸಿಲ್ ಹಾಗೂ ಅಣ್ಣಪ್ಪ ಜೋಡಿ ದ್ವಿತಿಯ ಸ್ಥಾನ ಪಡೆದರು.
More Stories
ಕಾವ್ಯ ಕಟ್ಟುವುದಲ್ಲ-ಬದಲಿಗೆ ಹುಟ್ಟುವುದು: ಮಂಜುನಾಥ ಗಾಂವಕರ, ಬರ್ಗಿ
೧೮ ವರ್ಷದ ಯುವಕ ರವೀಶ್ ಹರಿಕಾಂತ್ನ ಕಲಾ ಪ್ರೌಢಿಮೆ
“ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ -ವೈಶಾಲಿ ಹೆಗಡೆ