
ವರದಿ: ವೇಣುಗೋಪಾಲ ಮದ್ಗುಣಿ
ಅಂಕೋಲಾ: ಡಾ. ಪ್ರಭಾಕರ ಬಸವಪ್ರಭು ಕೋರೆಯವರ ಅಮೃತ ಮಹೋತ್ಸವ ನಿಮಿತ್ತ ಆಯೋಜಿಸಲಾಗಿದ್ದು, ಅಂತರ ಕೆ.ಎಲ್.ಇ. ಸಂಸ್ಥೆ ಬೆಳಗಾವಿಯಲ್ಲಿ ನಡೆದ ಸ್ಪರ್ಧೆಗಳ ಪೈನಲ್ ನಲ್ಲಿ ಅಂಕೋಲಾ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಾನಪದ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿ ಸಾಧನೆ ಮಾಡಿದ್ದಾರೆ.
ವಿಶೇಷವೆಂದರೆ ಚುಟುಕುಬ್ರಹ್ಮ ದಿನಕರ ದೇಸಾಯಿಯವರ ಒಂದು ಕಡೆ ಕಡಲು ಹಾಡಿಗೆ ಅಂಕೋಲಾದ ಜಾನಪದ ಸುಗ್ಗಿ ಹಾಗೂ ಹಾಲಕ್ಕಿ ಸಾಂಸ್ಕೃತಿಕ ವೈಭವವನ್ನು ಸೇರಿಸಿ ಮಾಡಿದ ನೃತ್ಯ ಬೆಳಗಾವಿಯಲ್ಲಿ ಸಾವಿರಾರು ಜನರ ಮುಂದೆ ಜನಮನಗೆದ್ದ ಪ್ರಶಂಸೆಗಳಿಸಿತು. ನೃತ್ಯದಲ್ಲಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಉನ್ನತಿ ನಾಯಕ, ಪ್ರಿಯಾ ನಾಯ್ಕ, ಸಹನಾ ನಾಯ್ಕ, ನಮೃತಾ ಮಹಾಲೆ, ಸಂದ್ಯ ನಾಯಕ, ಬೃಂದಾ ಗಾವಡಿ, ರಕ್ಷಿತಾ ನಾಯ್ಕ, ಸಹನಾ ಎಸ್ ನಾಯ್ಕ, ಪ್ರಿಯಾ ಲಾಂಜೇಕರ, ಭಾರತಿ ಪಟಗಾರ ಪಾಲ್ಗೊಂಡಿದ್ದರು. ಉಪನ್ಯಾಸಕರಾದ ಪೂರ್ವಿ ಹಳ್ಗೇಕರ ಮಾರ್ಗದರ್ಶನ ಮಾಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಅಂಕೋಲಾ ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಕಾರ್ಯದರ್ಶಿಗಳಾದ ಡಾ|| ಡಿ.ಎಲ್.ಭಟ್ಕಳ, ಸಂಯೋಜಕರಾದ ಆರ್. ನಟರಾಜ, ಸದಸ್ಯರಾದ ಡಾ.ಮೀನಲ್ ನಾರ್ವೇಕರ ಹಾಗೂ ವಿವಿಧ ಅಂಗಸAಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

More Stories
ಕಾವ್ಯ ಕಟ್ಟುವುದಲ್ಲ-ಬದಲಿಗೆ ಹುಟ್ಟುವುದು: ಮಂಜುನಾಥ ಗಾಂವಕರ, ಬರ್ಗಿ
೧೮ ವರ್ಷದ ಯುವಕ ರವೀಶ್ ಹರಿಕಾಂತ್ನ ಕಲಾ ಪ್ರೌಢಿಮೆ
“ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ -ವೈಶಾಲಿ ಹೆಗಡೆ