May 18, 2024

Bhavana Tv

Its Your Channel

ಭಟ್ಕಳ ಪತ್ರಕರ್ತರ ಸಂಘದಿoದ ಪತ್ರಿಕಾ ದಿನಾಚರಣೆ ನಿಮಿತ್ತ ಪರಿಸರ ಜಾಗ್ರತಿ ಕಾರ್ಯಕ್ರಮ.

ಭಟ್ಕಳ: ಪತ್ರಿಕಾ ದಿನಾಚರಣೆಯ ನಿಮಿತ್ತ ಭಟ್ಕಳ ಪತ್ರಕರ್ತರ ಸಂಘ ಹಾಗೂ ಸಿಧ್ದಾರ್ಥ ಎಜುಕೇಶನ್ ಟ್ರಸ್ಟ,ಭಟ್ಕಳ ಇವರ ಸಹಯೋಗದೊಂದಿಗೆ ಪರಿಸರ ಜಾಗ್ರತಿ ಕಾರ್ಯಕ್ರಮ ಭಟ್ಕಳ ಸೋನಾರಕೇರಿಯ ಸಿಧ್ದಾರ್ಥ ಕಾಲೇಜಿನ ಮೈದಾನದಲ್ಲಿ ನಡೆಯಿತು.

ಸಿಧ್ಧಾರ್ಥ ಕಾಲೇಜಿನ ಮುಖ್ಯಸ್ಥರಾದ ಅರ್ಚನಾ .ಯು. ಗಿಡ ನೆಡುವುದರರ ಮೂಲಕ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ದಿನದ ೨೪ ಗಂಟೆಯೂ ಒತ್ತಡದಿಂದ ಕೆಲಸ ಮಾಡುವ ಪತ್ರಕರ್ತರು ಪರಿಸರ ಜಾಗ್ರತಿ ಕ್ರಾರ್ಯಕ್ರಮ ಹಮ್ಮಿಕೊಂಡು ಗಿಡ ನೆಡುವುದರ ಮೂಲಕ ಸಮಾಜಕ್ಕೆ ಪರಿಸರದ ಪ್ರಾಮುಖ್ಯತೆ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂದು ಪಟ್ಟಣದಲ್ಲಿ ಕೇವಲ ತುಳಸಿ ಗಿಡಗಳನ್ನಷ್ಟೇ ನಾವು ಕಾಣಬಹುದಾಗಿದ್ದು ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಗಿಡಮರಗಳನ್ನು ಬೆಳೆಸುವುದರ ಬಗ್ಗೆ ಅರಿವು ಉಂಟಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಮಧಾರಿ ಸಮಾಜದ ಮುಖಂಡರಾದ ಎಂ.ಆರ್. ನಾಯ್ಕ ಮಾತನಾಡಿ ದಿನದಿಂದ ದಿನಕ್ಕೆ ಕಾಡು ನಾಶವಾದ ಪರಿಣಾಮ ನಮ್ಮ ಭೂಮಿಯಲ್ಲಿ ಉಷ್ಣತೆಯು ಹೆಚ್ಚಾಗಿ ಅನೇಕ ರೀತಿಯ ನೈಸರ್ಗಿಕ ವಿಕೋಪಗಳು ಉಂಟಾಗುತ್ತಿದೆ. ಆದ್ದರಿಂದ ನಾವು ಗಿಡಮರಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಿ ನಮ್ಮ ಪರಿಸರವನ್ನು ಉಳಿಸುವ ಕಾರ್ಯ ಮಾಡಬೇPಗಿದೆ ಎಂದರು.
ಕಾರ್ಯಕ್ರಮದಲ್ಲಿದ್ದ ಭಟ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಮಣ್ಯ ದಾಸನಕುಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಿಕಾ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ಭಟ್ಕಳ ಪತ್ರಕರ್ತರ ಸಂಘದಿAದ ವಿವಿಧ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಇಂದು ಪರಿಸರದ ಪ್ರಾಮುಖ್ಯತೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಾದ ಅನಿವಾರ್ಯತೆ ಇದೆ. ದಿನನಿತ್ಯ ನಾವು ಪರಿಸರವನ್ನು ನಾಶಮಾಡುತ್ತಿದ್ದರೆ ಮುಂದಿನ ದಿನ ನಾವು ಉಸಿರಾಡಲು ಬೇಕಾದ ಆಮ್ಲಜನಕವನ್ನು ಮಾರುಕಟ್ಟೆಯಲ್ಲಿ ಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ ಯೂನಿಯನ್ ನ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ, ಸಿಧ್ದಾರ್ಥ ಕಾಲೇಜಿನ ಉಪನ್ಯಾಸಕರಾದ ಶ್ರೀನಿವಾಸ ನಾಯ್ಕ, ಪತ್ರಕರ್ತರಾದ ವಿಷ್ಣು ದೇವಾಡಿಗ, ವಸಂತ ದೇವಾಡಿಗ, ನಸಿಮುಲ್ಲಾ ಘನಿ, ರಾಮಚಂದ್ರ ಕಿಣಿ, ಎನ್.ಡಿ.ಶಾನುಭಾಗ, ಶಂಕರ ನಾಯ್ಕ, ಜಾವೇದ್ ಅಹಮ್ಮದ್, ಸ್ಥಳೀಯರಾದ ಸದಾನಂದ ಶೇಟ, ಕಾರ್ತಿಕ ನಾಯ್ಕ ,ಇದ್ದರು.

error: