May 18, 2024

Bhavana Tv

Its Your Channel

ವಲಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ

ಭಟ್ಕಳ : ನಗರದ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದ ಘಟಕವಾದ ಭಟ್ಕಳದ ರೋಟರಾಕ್ಟ್ ಕ್ಲಬ್‌ನ ಆಯೋಜಕತ್ವದಲ್ಲಿ ೨೦೨೦ – ೨೧ ನೇ ಸಾಲಿನ ವಲಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಜೂಮ್ ಡಿಜಿಟಲ್ ವೇದಿಕೆಯಲ್ಲಿ ಜರುಗಿತು. ಕರ‍್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ರೋಟರಾಕ್ಟ್ ಜಿಲ್ಲೆ ೩೧೭೦ಯ ನಿಕಟಪರ‍್ವ ಜಿಲ್ಲಾ ಪ್ರತಿನಿಧಿ ಸಾಹಿಲ್ ಗಾಂಧಿ ಮಾತನಾಡಿ “ಕ್ಲಬ್‌ನ ಚಟುವಟಿಕೆಗಳು ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಒಂದು ಉತ್ತಮವಾದ ಅವಕಾಶವಾಗಿದ್ದು ದೇಶದ ಯುವಜನತೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು” ಎಂದರು. ಕರ‍್ಯಕ್ರಮದ ಗೌರವಾನ್ವಿತ ಅತಿಥಿ ರೋಟರಾಕ್ಟ್ ೩೧೭೦ನ ಜಿಲ್ಲಾ ಪ್ರತಿನಿಧಿ ವಿಶಾಖಾ ಪೆಡ್ನೇಕರ್ ಮಾತನಾಡಿ, “೨೦೨೧ – ೨೨ ನೇ ಸಾಲಿನಲ್ಲಿ ಕ್ಲಬ್ ಸಮಾಜದ ರ‍್ವತೋಮುಖ ಬೆಳವಣಿಗೆಗೆ ತನ್ನದೆಯಾದ ಯೋಜನೆಗಳನ್ನು ರೂಪಿಸಿದ್ದು ಶೀಘ್ರವೇ ಅವುಗಳನ್ನು ಕರ‍್ಯರೂಪಕ್ಕೆ ತರಲಾಗುವುದು” ಎಂದರು. ಕರ‍್ಯಕ್ರಮದ ಮತ್ತರ‍್ವ ಗೌರವಾನ್ವಿತ ಅತಿಥಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ, ಶ್ರೀನಾಥ್ ಪೈ “ಮುಂದಿನ ರೋಟರಾಕ್ಟ್ ರ‍್ಷದಲ್ಲಿ ಕ್ಲಬ್‌ಗಳು ಉತ್ತಮವಾಗಿ ಕರ‍್ಯನರ‍್ವಹಿಸುವಂತಾಗಲಿ” ಎಂದು ವಿದ್ಯರ‍್ಥಿಗಳಿಗೆ ಶುಭ ಹಾರೈಸಿದರು.

ರೋಟರಾಕ್ಟ್ ೨೦೨೦ – ೨೧ನೇ ಸಾಲಿನ ಸಮುದಾಯ ಸೇವೆ, ಕೋವಿಡ್ – ೧೯ ಪರಿಹಾರ ಯೋಜನೆ ಮತ್ತು ಅತ್ಯುತ್ತಮ ಆನ್‌ಲೈನ್ ಯೋಜನೆಗಳ ವಿಭಾಗದಲ್ಲಿ ರೋಟರಾಕ್ಟ್ ಕ್ಲಬ್ ಕುಮಟಾ ತಲಾ ಮೂರು ಪ್ರಶಸ್ತಿಗಳನ್ನು, ಹಾಗೂ ವೃತ್ತಿಪರ ಸೇವಾ ಯೋಜನೆ, ಅಂತರಾಷ್ಟಿçÃಯ ಸೇವಾ ಯೋಜನೆಗಳ ವಿಭಾಗದಲ್ಲಿ ರೋಟರಾಕ್ಟ್ ಕ್ಲಬ್ ಕಾರವಾರ ತಲಾ ಎರಡು ಪ್ರಶಸ್ತಿಗಳನ್ನು ಮತ್ತು ಕ್ಲಬ್ ಸೇವಾ ಯೋಜನೆಗಳ ವಿಭಾಗದಲ್ಲಿ ಭಟ್ಕಳದ ರೋಟರಾಕ್ಟ್ ಕ್ಲಬ್ ತಲಾ ಒಂದು ಪ್ರಶಸ್ತಿಯನ್ನು ಪಡೆಯಿತು. ಇದರ ಜೊತೆಗೆ, ೨೦೨೦ – ೨೧ ನೇ ಸಾಲಿನ ಅತ್ಯುತ್ತಮ ಸಂಸ್ಥೆ ಆಧಾರಿತ ಕ್ಲಬ್ ಪ್ರಶಸ್ತಿಯನ್ನು ಭಟ್ಕಳದ ರೋಟರಾಕ್ಟ್ ಕ್ಲಬ್ ಪಡೆದರೆ, ಅತ್ಯುತ್ತಮ ಸಮುದಾಯ ಆಧಾರಿತ ಕ್ಲಬ್ ಪ್ರಶಸ್ತಿಯನ್ನು ಕುಮಟಾ ಕ್ಲಬ್ ಪಡೆಯಿತು ಮತ್ತು ಅತ್ಯುತ್ತಮ ಕ್ಲಬ್ ಪ್ರಶಸ್ತಿಯು ಕಾರವಾರದ ರೋಟರಾಕ್ಟ್ ಕ್ಲಬ್‌ಗೆ ದೊರೆಯಿತು.

ರೋಟರಾಕ್ಟ್ ಜಿಲ್ಲಾ ಕುಮಟಾ ವಲಯದ ಪ್ರತಿನಿಧಿ ಜುನೈದ್ ಸೈಯದ್ ಪ್ರಶಸ್ತಿಗಳನ್ನು ವಿತರಿಸಿದರು. ಕ್ಲಬ್ ಅಧ್ಯಕ್ಷೆ ನಾಗಶ್ರೀ ನಾಯ್ಕ್ ಸ್ವಾಗತಿಸಿದರು, ಮನಿಷಾ ಮೇಸ್ತ ನಿರೂಪಿಸಿದರು ಮತ್ತು ಕರ‍್ಯರ‍್ಶಿ ರಶ್ಮಿ ಮಹಾಲೆ ವಂದಿಸಿದರು. ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ ಮತ್ತು ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: