May 18, 2024

Bhavana Tv

Its Your Channel

ಭಟ್ಕಳದಲ್ಲಿ ಅಕ್ರಮವಾಗಿ ಬ್ರಹತ್ ಆಕಾರದ ೯ ಎತ್ತುಗಳ ಸಾಗಾಟ, ರಕ್ಷಣೆ ಮಾಡಿದ ಭಟ್ಕಳ ನಗರ ಠಾಣೆ ಪೊಲೀಸರು

ಭಟ್ಕಳ: ಹಿಂಸಾತ್ಮಕವಾಗಿ ೯ ಎತ್ತುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಭಾನವಾರ ಇಲ್ಲಿನ ಬಂದರ ರೋಡ ೬ನೇ ಕ್ರಾಸ್ ಸಮೀಪ ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ಈ ಕಾರ್ಯಾಚರಣೆಯಲ್ಲಿ ಆರೋಪಿ ಪರಾರಿಯಾಗಿದ್ದು ಆರೋಪಿಗಳನ್ನಾಗಿ ಮೋಹಿದ್ದೀನ್ ಪಾತೀಮಿ,ಹನೀಫ್ ಹಾಗೂ ವಾಹನದ ಚಾಲಕ ಎಂದು ಗುರುತಿಸಲಾಗಿದೆ.
ಇವರು ಇಚರ್ ವಾಹನದಲ್ಲಿ ವದೆ ಮಾಡುವ ಉದ್ದೇಶದಿಂದ ೬ ಲಕ್ಷಕ್ಕೂ ಅಧಿಕ ಮೌಲ್ಯದ ೯ ಬ್ರಹತ್ ಆಕಾರದ ಎತ್ತುಗಳನ್ನು ಪಾಸ್ ಪರವಾನಿಗೆ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡಿಕೊಂಡು ಹೋಗುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಭಟ್ಕಳ ನಗರ ಠಾಣೆ ಪೊಲೀಸರು ಬಂದರ ರೋಡ ೬ ನೇ ಕ್ರಾಸ ಸಮೀಪ ಮುಗ್ದುಮ್ ಕಾಲೊನಿಯಲ್ಲಿ ದಾಳಿ ಮಾಡಿ ವಾಹನ ಸಮೇತ ೯ ಎತ್ತುಗಳನ್ನು ರಕ್ಷಣೆ ಮಾಡಿದ್ದಾರೆ

ಈ ಕುರಿತು ಭಟ್ಕಳ ನಗರ ಠಾಣೆಯ ಪಿ.ಎಚ್.ಐ ಎಚ್.ಪಿ ಕುಡಗುಂಟಿ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿ.ಎಸೈ ಎಚ್.ಪಿಈ ಕುಡುಗುಂಟಿ, ಗ್ರಾಮೀಣ ಠಾಣೆ ಪಿ.ಎಸೈ ಭರತ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

error: