
ಭಟ್ಕಳ: ಕೊರೊನಾ ೩ನೇ ಅಲೆಯ ಆತಂಕ ಎಲ್ಲೆಡೆ ಕೇಳಿ ಬರುತ್ತಿರುವಂತೆಯೇ ಸಂಭಾವ್ಯ ಆತಂಕವನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧತೆಯಲ್ಲಿ ತೊಡಗಿದೆ. ಈಗಾಗಲೇ ಭಟ್ಕಳ ಸರಕಾರಿ ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಪ್ಲ್ಯಾಂಟ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಆಮ್ಲಜನಕ ಉತ್ಪಾದನಾ ಯಂತ್ರ ಭಟ್ಕಳ ಆಸ್ಪತ್ರೆಗೆ ಬಂದಿಳಿದಿದೆ.
ಕೇoದ್ರ ಸರಕಾರದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಕೊಯಂಬತ್ತೂರಿನಲ್ಲಿ ಜೋಡಣೆಗೊಂಡ ಈ ಯಂತ್ರವನ್ನು ಭಟ್ಕಳಕ್ಕೆ ರವಾನಿಸಿದೆ. ಈ ಯಂತ್ರವು ನೈಸರ್ಗಿಕವಾಗಿ ಸಿಗುವ ಗಾಳಿಯನ್ನು ಪಡೆದು, ಆಮ್ಲಜನಕ ಉತ್ಪಾದನೆ ಹಾಗೂ ಶೇಖರಣಾ ಕಾರ್ಯವನ್ನು ನಿರ್ವಹಿಸುತ್ತದೆ. ರೂ .೬೫ ಲಕ್ಷ ವೆಚ್ಚದ ಈ ಯಂತ್ರವು ೫೦೦೦ಲೀ ಪ್ರತಿ ನಿಮಿಷ ಸಾಮರ್ಥ್ಯವನ್ನು ಹೊಂದಿದೆ.
ಈಗಾಗಲೇ ಶಾಸಕರ ನಿಧಿಯಿಂದ ೭.೫ ಲಕ್ಷ ವೆಚ್ಚದ ಸಿವಿಲ್ ಕಾಮಗಾರಿಯನ್ನು ಮುಗಿಸಲಾಗಿದ್ದು, ಯಂತ್ರದ ಅಳವಡಿಕೆಯ ನಂತರ ಸದ್ಯದಲ್ಲಿಯೇ ಆಮ್ಲಜನಕ ಉತ್ಪಾದನಾ ಕಾರ್ಯ ಆರಂಭವಾಗುವ ನಿರೀಕ್ಷೆ ಇದೆ.
ವಿಶೇಷ ಎಂದರೆ ಭಟ್ಕಳಕ್ಕೆ ೬ ಕೆಎಲ್ ಸಾಮಥ್ರ‍್ಯದ ದ್ರವ ರೂಪದ ಆಮ್ಲಜನಕ ಉತ್ಪಾದನಾ ಘಟಕವೂ ಮಂಜೂರಾಗಿದ್ದು, ಇನ್ನಷ್ಟೇ ಸ್ಥಾಪನಾ ಪೂರ್ವ ಕೆಲಸ ಕಾರ್ಯಗಳು ನಡೆಯಬೇಕಿದೆ

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ