
ಭಟ್ಕಳ ತಾಲೂಕಿನಲ್ಲಿ ಶನಿವಾರ ತಡ ರಾತ್ರಿಯಿಂದ ಸುರಿದ ಬಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಶನಿವಾರ ಬೆಳಿಗ್ಗೆಯಿಂದ ರವಿವಾರ ಬೆಳಿಗ್ಗೆಯವರೆಗೆ ತಾಲೂಕಿನಲ್ಲಿ ೨೦೯ಮಿಮೀ ಮಳೆ ದಾಖಲಾಗಿದ್ದು,ಒಟ್ಟೂ ಮಳೆಯ ಪ್ರಮಾಣ ೧೨೧೭ಮಿಮೀ.ಗೆ ಏರಿಕೆ ಕಂಡಿದ್ದು.ರಾಷ್ಟ್ರೀಯ ಹೆದ್ದಾರಿ ಸಹಿತ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ.
ಬಾರಿ ಮಳೆಯಿಂದಾಗಿ ಇಲ್ಲಿನ ಚೌಥನಿ ಹೊಳೆ ಸೇರಿದಂತೆ ಮೂಡಭಟ್ಕಳ ಶರಾಬಿ ಹೊಳೆ ತುಂಬಿ ಹರಿದ ಪರಿಣಾಮ ಅಲ್ಲಿನ ತಗ್ಗು ಪ್ರದೇಶಗಳು ಜಲಾವೃತಗೊಂಡು ಮನೆಗೆ ನುಗ್ಗಿದ್ದು ಪರಿಣಾಮ ಹಲವೆಡೆ ನೆರೆ ಹಾವಳಿಯ ಆತಂಕ ಸೃಷ್ಟಿಯಾಗಿದ್ದು ಪೂರ್ವ ನಿಯೋಜಿತವಾಗಿ ಮುಟ್ಟಳ್ಳಿ ಮುಂಡಳ್ಳಿ ಪುರವರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ .ಚೌಥನಿ ಕುದುರೆ ಬೀರಪ್ಪ ದೇವಸ್ಥಾನ ಮತ್ತು ಮೂಡಭಟ್ಕಳ ಬೃಂದಾವನ ದೇವಸ್ಥಾನ ನೀರಿನಿಂದ ಜಲಾವೃತಗೊಂಡಿವೆ. ಮುಟ್ಟಳ್ಳಿ ಪಂಚಾಯಿತಿ, ಮೂಡಭಟ್ಕಳ ಸೇತುವೆ ಜಲಾವೃತಗೊಂಡಿದ್ದು ಇಲ್ಲಿನ ಮಾರುತಿ ಮೋಟಾರ್ಸ್ ಗ್ಯಾರೇಜ್‌ಗೆ ನೀರು ನುಗ್ಗಿದ ಪರಿಣಾಮ ಗ್ಯಾರೇಜಿನಲ್ಲಿದ್ದ ವಸ್ತುಗಳು ನೀರುಪಾಲಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
ಇನ್ನೂ ಇಲ್ಲಿನ ಶಿರಾಲಿಯ ಜನತಾ ವಿದ್ಯಾಲಯದ ಎದುರಿನ ರಾಷ್ಟ್ರಿಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಪ್ರತಿವರ್ಷ ಈ ಭಾಗದಲ್ಲಿ ಸಣ್ಣ ಮಳೆ ಬಂದರು ನೀರು ನಿಲ್ಲುತ್ತಿದ್ದು. ಇಂದಿನ ಬಾರಿ ಮಳೆಯಿಂದ ರಸ್ತೆ ಜಲಾವೃತಗೊಂಡ ಪರಿಣಾಮ ಈ ಭಾಗದ ಸ್ಥಳೀಯರು ರಸ್ತೆಗೆ ಗಾಳ ಹಾಕಿ ಮೀನು ಹಿಡಿಯುವಂತೆ ಪ್ರತಿಭಟನೆ ಮಾಡಿದ್ದು ಕಂಡುಬAತು ಹಾಗೂ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಆಜಾಜ್ ನಗರ ೭ ನೇ ಕ್ರಾಸ್ ಅಬುಹನೀಫಾ ಸ್ಟ್ರೀಟ್ ನಲ್ಲಿ ರಸ್ತೆ ಪಕ್ಕದಲ್ಲಿ ಚರಂಡಿ ಇಲ್ಲದ ಪರಿಣಾಮ ಮಳೆಯ ನೀರು ರಸ್ತೆಯ ಮೇಲೆ ಹರಿದು ಬಂದಿರುವುದರಿAದ ನೀರಿನ ರಭಸಕ್ಕೆ ಕಂಪೌAಡ್ ಕುಸಿದು ಬಿದ್ದು ಮನೆಗಳಿಗೆ ನೀರು ನುಗ್ಗಿದೆ ಇಲ್ಲಿನ ಸ್ಥಳೀಯರು ಪಟ್ಟಣ ಪಂಚಾಯಿತಿಗೆ ರಸ್ತೆ ಪಕ್ಕ ಚರಂಡಿ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿಕೊಂಡರೂ ಗಮನ ಹರಿಸದೇ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ.ಈ ಸಂದರ್ಭದಲ್ಲಿ ಮೂಡಭಟ್ಕಳ,ಮುಂಡಳ್ಳಿಯ ಜಲಾವೃತಗೊಂಡ ಪ್ರದೇಶದ ಕ್ಕೆ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್ ತೆರಳಿ ಪರಿಶೀಲನೆ ಮಾಡಿದ್ದಾರೆ.


More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ