
ಭಟ್ಕಳ: ತಾಲೂಕಿನ ಡೀಪ್ ಸೀ ಬೋಟ್ ಚಾಲಕರ ಸಂಘದ ವತಿಯಿಂದ ರಾಷ್ಟ್ರೀಯ ಮೀನುಗಾರ ಸಂಘಟನೆಯ ರಾಜ್ಯಾಧ್ಯಕ್ಷ ರಾಮಾ ಮೊಗೇರ ಅವರನ್ನು ಇಲ್ಲಿನ ವೆಂಕಟಾಪರ ಶ್ರೀ ಶ್ರೀನಿವಾಸ ಸಭಾಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಮಾ ಮೊಗೇರ ಮಾತನಾಡಿದರು. ಡೀಪ್ ಸೀ ಬೋಟ್ ಚಾಲಕರ ಸಂಘದ ಅಧ್ಯಕ್ಷ ಸದಾನಂದ ಮೊಗೇರ ಸಣಬಾವಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘದ ಉಪಾಧ್ಯಕ್ಷ ಶಂಕರ ಮೊಗೇರ, ಶ್ರೀಧರ ಮೊಗೇರ, ಮಾದೇವ ಮೊಗೇರ, ಮೋಹನ ಮೊಗೇರ, ಹನುಮಂತ ಮೊಗೇರ, ಸುರೇಶ ಜನ್ಮಾ ಮೊಗೇರ, ರಾಮಾ ಸಪ್ಪುಮನೆ, ಗಣಪತಿ ಮೊಗೇರ ಕರಿಕಲ್, ಉಮೇಶ ಮೊಗೇರ ಮುಂಡಳ್ಳಿ, ಬಾಬು ಮೊಗೇರ ಬೈಲೂರು, ಕುಮಾರ ಮೊಗೇರ ಮಾವಳ್ಳಿ, ಈಶ್ವರ ಕೈಕಿಣಿ, ಜನ್ನಾ ಯಂಕಜ್ಜಿಮನೆ, ನಾರಾಯಣ ಮುಂಡಳ್ಳಿ, ಲೋಕೇಶ ಬೆಳ್ಳಿ ಉಪಸ್ಥಿತರಿದ್ದರು. ಗೋಪಾಲ ಸಣ್ಣಯ್ಯನಮನೆ ಸ್ವಾಗತಿಸಿ, ನಿರೂಪಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ