
ಭಟ್ಕಳ: ಧರ್ಮಸ್ಥಳದ ಶ್ರೀರಾಮ ಕ್ಷೇತ್ರದಲ್ಲಿ ನಾಳೆ (ಜುಲೈ ೨೪) ಗುರುಪೂರ್ಣಿಮೆ ಹಾಗೂ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಚಾತುರ್ಮಾಸ ಕಾರ್ಯಕ್ರಮ ನಡೆಯಲಿದ್ದು ತಾಲೂಕಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ನಿಚ್ಚಲಮಕ್ಕಿ ಗುರುಮಠ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣಾ ನಾಯ್ಕ ಹೇಳಿದರು.
ಅವರು ದೇವಸ್ಥಾನದದಲ್ಲಿ ಗುರುಪೂರ್ಣೆಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿ ನಮ್ಮದೇ ಸಮಾಜದ ಕುಲಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಪೀಠಕ್ಕೆ ಬಂದ ೧೨ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಗಳು ಕಂಡು ಇಂದು ಸ್ವಾಮೀಜಿಗಳು ದೇಶದ ಉದ್ದಗಲದಲ್ಲಿ ಹಲವು ಮಠಗಳನ್ನು ಸ್ಥಾಪಿಸಿ ಹಿಂದುಳಿದ ವರ್ಗಗಳಲ್ಲಿ ಧಾರ್ಮಿಕ ಭಾವನೆಗಳನ್ನು ಹೆಚ್ಚಿಸಿದ್ದಾರೆ. ಈಗ ಸತತ ೨ ನೇ ವರ್ಷ ಚಾತುರ್ಮಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದು ಸಮಾಜಕ್ಕೆ ಉತ್ತಮ ಧಾರ್ಮಿಕ ಸಂದೇಶ ನೀಡುತ್ತಿದ್ದಾರೆ. ೪೦ ದಿನಗಳ ಚಾತುರ್ಮಾಸ ವೃತದಲ್ಲಿ ಇದ್ದು ತಾಲೂಕಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಚಾತುರ್ಮಾಸ ವೃತದ ಸಂದರ್ಭದಲ್ಲಿ ಪಾಲ್ಗೊಳ್ಳಬೇಕೆಂದರು.
ದೇವಸ್ಥಾನದ ಮಾಜಿ ಅಧ್ಯಕ್ಷರಾದ ಡಿ.ಬಿ. ನಾಯ್ಕ, ನಮ್ಮ ಕುಲಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಇತರ ಎಲ್ಲ ಹಿಂದುಳಿದ ವರ್ಗಗಳಿಗೂ ಗುರುಗಳಾಗಿದ್ದಾರೆ.ಎಂದರು
ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಜೆ.ಡಿ.ನಾಯ್ಕ, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಭವಾನಿಶಂಕರ ನಾಯ್ಕ, ಎಂ..ಕೆ.ನಾಯ್ಕ, ರಾಘವೇಂದ್ರ ನಾಯ್ಕ ಶಿವರಾಮ ನಾಯ್ಕ, ಸುರೇಶ ನಾಯ್ಕ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ವಿನಾಯಕ ನಾಯ್ಕ ಕೆ.ಆರ್. ನಾಯ್ಕಗಣಪತಿ ನಾಯ್ಕಜಾಲಿ, ಮಾಸ್ತಪ್ಪ ಶಾಂತಾರಾಮ ನಾಯ್ಕ ಇದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ