
ಭಟ್ಕಳ: ನೀರು ನಿಂತು ಕೃತಕ ಕೆರೆ ಸೃಷ್ಟಿಯಾಗಿದ್ದ ಬಸ್ ನಿಲ್ದಾಣಕ್ಕೆ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಎಸ್ ಭೇಟಿ ನೀಡಿ ಅಲ್ಲಿನ ಡೀಪೋ ಮ್ಯಾನೆಜರ್ ಜ.ದಿವಾಕರ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ಜರುಗಿತು.
ಭಟ್ಕಳದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಬಸ್ ನಿಲ್ದಾಣದ ಎದುರು ಕೃತಕ ಕೆರೆ ಸೃಷ್ಟಿಯಾಗಿತ್ತು. ಅದರಲ್ಲಿ ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಹಿರಿಯ ನಾಗರಿಕರು ಬಿದ್ದು ಮೈಯೆಲ್ಲಾ ಕೆಸರು ಮಾಡಿಕೊಂಡಿದ್ದರು. ಅಂತವರನ್ನು ಪಕ್ಕದಲ್ಲೆ ಇದ್ದ ರಿಕ್ಷಾ ಚಾಲಕರು ಸುರಕ್ಷಿತವಾಗಿ ಉಚಿತವಾಗಿ ಮನೆಗೆ ಬಿಟ್ಟು ಬರುತ್ತಿದ್ದರು. ಅಂತಹ ಸಂದರ್ಬದಲ್ಲೂ ಮಾನವೀಯ ನೆಲೆಯಲ್ಲೂ ಕರಾರ ಸಂಸ್ಥೆಯ ಸಿಬ್ಬಂದಿ ಅವರ ನೆರೆವಿಗೆ ಬರುತ್ತಿರಲಿಲ್ಲಾ ಎಂದು ಸಾರ್ವಜನಿಕರಿಂದ ದೂರು ಕೇಳಿ ಬರುತಿತ್ತು. ವಿದ್ಯಾರ್ಥಿನಿಯೊರ್ವಳು ಕೆಸರಿನಲ್ಲಿ ಬಿದ್ದು ಅವಳು ಬಸ್‌ಗೆಂದು ತಂದ ಹಣವನ್ನು ಕೆಸರು ನೀರಿನಲ್ಲಿ ಬಿಳಿಸಿಕೊಂಡಿದ್ದಳು. ಮೈಗೆ ಕೆಸರು ಮೆತ್ತಿಕೊಂಡಿತ್ತು. ಇದು ಅಟೋ ಚಾಲಕರ ಗಮನಕ್ಕೆ ಬರುತ್ತಿರುವಂತೆ ವಿದ್ಯಾರ್ಥಿನಿಯನ್ನು ಉಚಿತವಾಗಿ ಮನೆಗೆ ಬಿಟ್ಟು ಬಂದಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಬಸ್ ನಿಲ್ದಾಣಕ್ಕೆ ಬರಲು ದೋಣಿಯ ವ್ಯವಸ್ಥೆ ಮಾಡಿಸಿ ಎಂದು ಟ್ರೋಲ್ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಉಪವಿಭಾಗಾಧಿಕಾರಿ ಸ್ಥಳಕ್ಕೆ ಬಂದಿದ್ದಾರೆ. ತಹಸೀಲ್ದಾರ ರವಿಚಂದ್ರ ಎಸ್, ಪುರಸಭೆ ಮುಖ್ಯಾಧಿಕಾರಿ ರಾಧಿಕಾ ಎಸ್., ಹಿರಿಯ ಅಧಿಕಾರಿಗಳಾದ ಸುಜಿಯಾ ಸೋಮನ್, ಉಮೇಶ ಮಡಿವಾಳ, ವೇಣುಗೋಪಾಲ ಶಾಸ್ತಿç, ಡೀಪೋ ಮ್ಯಾನೆಜರ್ ಅವರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಮೊದಲು ಅಲ್ಲಿನ ನೀರು ಹೊರಹೋಗಲು ವ್ಯವಸ್ಥೆ ಕಲ್ಪಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಾತ್ಕಾಲಿಕವಾಗಿ ಮೊದಲು ಒಳಬರುವ ದಾರಿಯನ್ನು ಬದಲಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದ್ದಾರೆ. ಈ ಸಂದರ್ಬದಲ್ಲಿ ಸ್ಥಳಕ್ಕೆ ಬಂದ ಅಟೋ ಚಾಲಕರು ಕೂಡು ವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ