
ಭಟ್ಕಳದ ಮುಖ್ಯ ರಸ್ತೆಯಲ್ಲಿರುವ ಐಶಾ ಪ್ಲಾಜಾದಲ್ಲಿ ಕಳೆದ ೨೫ ವರ್ಷಗಳಿಂದ ಚಿನ್ನದ ವ್ಯಾಪಾರ ಮಾಡುತ್ತಾ ಬಂದಿರುವ ಚಿನ್ನದ ಮಳಿಗೆ ಗೋಲ್ಡನ್ ಜುವೆಲ್ಲರ್ ತನ್ನ ಗ್ರಾಹಕರಿಗಾಗಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ನಡೆಸಿಕೊಟ್ಟ, ವಿಜಯಾ ಬ್ಯಾಂಕ್, ನಿವೃತ್ತ ಮುಖ್ಯ ವ್ಯವಸ್ಥಾಪಕ ಹಾಗೂ ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಎಂ. ಆರ್. ನಾಯ್ಕ ಅವರು ಯಾವುದೇ ಒಂದು ಸಂಸ್ಥೆಯಲ್ಲಿ ಮಾಲೀಕರು ಹಾಗೂ ನೌಕರರು ಪರಸ್ಪರ ಹೊಂದಾಣಿಕೆಯಿAದ ಕೆಲಸ ಮಾಡಿದಾಗ ಮಾತ್ರ ಸಂಸ್ಥೆಯು ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುವುದು. ಇಲ್ಲಿ ಕಳೆದ ೨೫ ವರ್ಷಗಳ ಹಿಂದೆ ಅನ್ಸಾರ್ ಕೋಲಾ ಅವರು ವಿದೇಶದಲ್ಲಿರುವ ಕೆಲಸವನ್ನು ಬಿಟ್ಟು ಬಂದು ಚಿನ್ನದ ಮಳಿಗೆಯನ್ನು ತೆರೆಯುವಾಗ ಅವರಿಗೆ ಸಂಪೂರ್ಣ ಸಹಕಾರ ನೀಡಿ ಅವರೊಂದಿಗೆ ಇದ್ದವರು ರಾಜು ಪಾಲನಕರ್ ಹಾಗೂ ಸತೀಶ್ ಶೇಟ್ ಅವರು, ಕಳೆದ ೨೫ ವರ್ಷಗಳಿಂದ ಅವರೊಂದಿಗೆ ಇದು ಅವರಿಗೆ ಎಲ್ಲ ತರಹ ಸಹಕಾರ ನೀಡುತ್ತಿರುವುದು ಮಾಲೀಕರು ಹಾಗೂ ನೌಕರರ ಪರಸ್ಪರ ಸಹಕಾರದ ಅರಿವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ತಮ್ಮ ಮಳಿಗೆಯ ಬೆಳ್ಳಿಹಬ್ಬದ ಸವಿನೆನಪಿಗಾಗಿ ಕಳೆದ ೨೫ ವರ್ಷಗಳಿಂದ ಇವರೊಂದಿಗೆ ಸಹಕರಿಸಿದ ರಾಜು ಪಾಲನಕರ್ ಹಾಗೂ ಸತೀಶ್ ಶೇಟ್ ಇವರನ್ನು ಸಂಸ್ಥೆಯ ಮಾಲಕ ಅನ್ಸಾರ್ ಕೋಲಾ ಅವರು ಸನ್ಮಾನಿಸಿ, ಗೌರವಿಸಿದರು. ಗ್ರಾಹಕರಾದ ಹಲ್ಯಾಣಿಯ ಪರಮೇಶ್ವರ ಹಾಗೂ ಶಿರಸಿಯ ಝಫುಲ್ಲಾ ಎ ಖಾನ್ ಅವರಿಗೆ ಚೀಟಿ ಎತ್ತುವ ಮೂಲಕ ಮೋಟಾರ್ ಬೈಕ್ ಗಳನ್ನು ನೀಡಲಾಯಿತು.
ಉಳಿದಂತೆ ಮಳಿಗೆಯ ಹಿರಿಯ ಗ್ರಾಹಕರಿಗೆ ವಿವಿಧ ಬಹುಮಾನಗಳನ್ನು ಪ್ರಾಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತ್ ಕೋಲಾ, ಪ್ರಮುಖರಾದ ರಾಜು ಪಾಲನಕರ್, ಸತೀಶ್ ಶೇಟ್, ಎಂ.ಬಿ.ನಾಯ್ಡ ಶಿರಾಲಿ, ಶನಿಯಾರ ನಾಯ್ಕ, ವೆಂಕಟೇಶ ನಾಯಕ, ಲೋಕೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ