May 17, 2024

Bhavana Tv

Its Your Channel

ಭಟ್ಕಳ ಕುಂಟವಾಣಿ ಮಹಿಳೆ ಮೇಲೆ ಆಸ್ತಿ, ಹಣದ ವಿಚಾರವಾಗಿ ಮಹಿಳೆ ನಾದಿನಿಯಿಂದ ಮಾರಣಾಂತಿಕ ಹಿಂಸೆ, ಗೃಹ ಬಂಧನದಲ್ಲಿದ್ದ ಮಹಿಳೆಯನ್ನು ರಕ್ಷಿಸಿ ಭಟ್ಕಳಕ್ಕೆ ಕರೆತಂದ ಮಹಿಳೆ ಸಂಬOಧಿಕರು’

ಭಟ್ಕಳ: ತನ್ನ ಅಣ್ಣನ ದುಡಿಮೆ ಹಾಗೂ ವರದಕ್ಷಿಣೆ ಹಣ ನೀಡಿಲ್ಲ ಎಂಬ ಉದ್ದೇಶದಿಂದ ಆತನ ಪತ್ನಿಯನ್ನು ಗ್ರಹಬಂಧನದಲ್ಲಿಟ್ಟುಕೊAಡು ಚಿತ್ರ ಹಿಂಸೆ ನೀಡಿದ್ದು ಮಹಿಳೆಯನ್ನು ತೀವ್ರತರವಾಗಿ ದೈಹಿಕ ಹಲ್ಲೆಯ ಮಾಡಿದ್ದು, ಸದ್ಯ ಮಹಿಳೆ ಸಂಬAಧಿಕರಿAದ ಆಕೆಯನ್ನು ಬೆಂಗಳೂರಿನಿAದ ಭಟ್ಕಳಕ್ಕೆ ಕರೆತಂದು ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ವರದಿಯಾಗಿದೆ.

ತನ್ನ ಗಂಡನ ತಂಗಿಯಿAದ ತೀವೃತರವಾಗಿ ದೈಹಿಕ, ಮಾನಸಿಕ ಹಿಂಸೆ, ಹಲ್ಲೆಗೊಳಗಾದ ಮಹಿಳೆ ತಾಲೂಕಿನ ಕುಂಟವಾಣಿ ನಿವಾಸಿ ಸುಧಾ ನರಸಿಂಹ ಗಾಣಿಗಾ (೩೧) ಎಂದು ತಿಳಿದು ಬಂದಿದೆ.

ಕಳೆದ ೬ ವರ್ಷದ ಹಿಂದೆ ಮಹಿಳೆಯನ್ನು ಪಕ್ಕದ ಕುಂದಾಪುರದ ಬಡಾಕೆರೆ ನಿವಾಸಿ ಆರೋಪಿ ನರಸಿಂಹ ಗಾಣಿಗಾ ನಿಗೆ ಮದುವೆ ಮಾಡಿಕೊಟ್ಟಿದ್ದರು. ಸುಂದರ ಜೀವನ ಸಾಗಿಸುತ್ತಿದ್ದ ಇವರು ೨ ವರ್ಷದ ಹಿಂದೆ ಬೆಂಗಳೂರಿಗೆ ತೆರಳಿ ಅಲ್ಲಿ ತನ್ನ ಸಂಸಾರ ನಡೆಸುತ್ತಿದ್ದರು. ಮಹಿಳೆಯ ಪತಿಯ ಜೊತೆಗೆ ಆತನ ತಂಗಿ ಆರೋಪಿ ನೇತ್ರಾವತಿ ಹಾಗೂ ಆಕೆಯ ೧೨ ವರ್ಷದ ಮಗಳು ವಾಸವಿದ್ದರು.

ನರಸಿಂಹ ಹಾಗೂ ಸುಧಾ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಪತಿ ಬೆಂಗಳೂರಿನ ಹೋಟೆಲವೊಂದರಲ್ಲಿ ಅಡುಗೆ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದು, ಕೈತುಂಬ ಸಂಬಳ ಪಡೆಯುತ್ತಿದ್ದು ಹಾಗೂ ಆತನಿಗೆ ಪಿತ್ರಾರ್ಜಿತ ಆಸ್ತಿಯು ಬಹಳಷ್ಟಿದ್ದವು ಎಂದು ತಿಳಿದು ಬಂದಿದೆ.

ಮಹಿಳೆಯ ಪತಿಯ ಆಸ್ತಿಯ ಆಸೆಗೆ ಆತನ ತಂಗಿ ಆತನ ಪತ್ನಿಯನ್ನು ಗೃಹ ಬಂಧನದಲ್ಲಿರಿಸಿದ್ದಳು. ಸತತ ತಿಂಗಳಿಗೂ ಹೆಚ್ಚು ಕಾಲ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ, ಚಿತ್ರಹಿಂಸೆ ನೀಡಿದ್ದಲ್ಲದೇ ಆಕೆಯ ತಾಯಿ ಮನೆಗೆ ವಿಚಾರ ತಿಳಿಯದಂತೆ ಅವರ ಸಂಪರ್ಕಕ್ಕೂ ಸಿಗದಂತೆ ಮಹಿಳೆಯ ಮೊಬೈಲ್ ಪೋನನನ್ನು ಎತ್ತಿಟ್ಟುಕೊಂಡಿದ್ದರು.

ಈ ಹಲ್ಲೆ ಚಿತ್ರಹಿಂಸೆಯಲ್ಲಿ ಮಹಿಳೆಯ ಪತಿ ಸಹ ಶ್ಯಾಮಿಲಿದ್ದು ತಂಗಿಯ ಈ ಕುಕ್ರತ್ಯ ತಡೆಯುವ ಬದಲು ತನ್ನ ಕಣ್ಣ ಮುಂದೆಯೇ ಪತ್ನಿಗೆ ಹೊಡೆಯುತ್ತಿದ್ದರು ಸಹ ಮೌನಕ್ಕೆ ಶರಣಾಗಿದ್ದು ತಂಗಿಯ ಕುಕ್ರತ್ಯಕ್ಕೆ ಸಾಥ್ ನೀಡಿದಂತಾಗಿದೆ. ಮಹಿಳೆಯ ಜೊತೆಗೆ ಆಕೆಯ ಹಿರಿಯ ಮಗಳಿಗೆ ಮಾತ್ರೆಯನ್ನು ನೀಡಿ ಮಾನಸಿಕವಾಗಿ ಕುಗ್ಗಿಸುವಲ್ಲಿ ಸಹ ಆರೋಪಿ ನೇತ್ರಾವತಿ ಅಮಾನವೀಯ ಕೆಲಸ ಮಾಡಿದ್ದಾಳೆ.

ಮಹಿಳೆ ಸತತ ಹಲ್ಲೆ ಚಿತ್ರಹಿಂಸೆಯಿAದ ಅಸ್ವಸ್ಥತೆಗೊಂಡಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆ ಹೇಗೋ ಮನೆಯಿಂದ ತಪ್ಪಿಸಿಕೊಂಡು ರಸ್ತೆಗೆ ಬಂದಿದ್ದು ಆಕೆಯನ್ನು ಕಂಡ ಅಕ್ಕಪಕ್ಕದ ಮನೆಯವರು, ಸಾರ್ವಜನಿಕರು ಅಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಅಲ್ಲಿನ ಸಿಬ್ಬಂದಿಯೋರ್ವರು ದೂರದ ಭಟ್ಕಳದ ಮಹಿಳೆಯ ಅಣ್ಣನ ಪತ್ನಿಗೆ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಮಹಿಳೆಯ ಪೋಟೋ ಕಳುಹಿಸಿದ್ದಾರೆ.

ತಕ್ಷಣ ಮಹಿಳೆಯ ದೂರದ ಸಂಬAಧಿಯಾದ ಬೈಂದೂರು ನಾಗೇಂದ್ರ ಗಾಣಿಗಾ ಹಾಗೂ ಮಹಿಳೆಯ ತಾಯಿ ಬೆಂಗಳೂರಿನ ಸರಕಾರಿ ಆಸ್ಪತ್ರೆಗೆ ತೆರಳಿ ಮಹಿಳೆಯ ಸ್ಥಿತಿ ಕಂಡು ಮರುಗಿದ್ದಾರೆ. ಆ ತಕ್ಷಣಕ್ಕೆ ಮಹಿಳೆಯಿಂದ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಹಲ್ಲೆಗೊಳಗಾದ ಮಹಿಳೆ ತಾಯಿ ಮಾತನಾಡಿ ೨೦೧೫ ರಲ್ಲಿ ನನ್ನ ಮಗಳನ್ನು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಡಾಕೆರೆಯ ನನ್ನ ಪತಿಯ ತಂಗಿಯ ಮಗನಿಗೆ ನರಸಿಂಹ ಗಾಣಿಗನ ಜೊತೆ ಮದುವೆ ಮಾಡಿದ್ದು, ಮದುವೆ ಮಾತುಕತೆ ಸಮಯದಲ್ಲಿ ಹುಡುಗನ ಕಡೆಯಿಂದ ವರದಕ್ಷಿಣೆಯಾಗಿ ಚಿನ್ನದ ಆಭರಣಕ್ಕೆ ಬೇಡಿಕೆ ಇಟ್ಟಿದ್ದು, ಅವರ ಬೇಡಿಕೆಯಂತೆ ಹುಡುಗನಿಗೆ ೨೦ ಗ್ರಾಂ ಚಿನ್ನದ ಆಭರಣ ನನ್ನ ಮಗಳಿಗೆ ೫೦ ಗ್ರಾಂ ಚಿನ್ನದ ಆಭರಣವನ್ನು ನೀಡಿ ನಮ್ಮ ಸಂಪ್ರದಾಯದAತೆ ವಿವಾಹ ಮಾಡಿಕೊಟ್ಟಿದ್ದು ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಬೆಂಗಳೂರಿನಲ್ಲಿ ಮನೆ ಮಾಡಲು ಹಣ ನೀಡುವಂತೆ ನನ್ನ ಅಳಿಯ ನರಸಿಂಹ ಕೇಳುತ್ತಿದ್ದು ಅದಕ್ಕೆ ನಾನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ನನ್ನ ಮಗಳಿಗೆ ಬೈಯುವುದು, ಹೊಡೆಯುವುದು ಮಾಡುತ್ತಾ ದೈಹಿಕ ಹಿಂಸೆ ನೀಡುತ್ತಿದ್ದರು. ಈಗ್ಗೆ ಸುಮಾರು ೩ ವರ್ಷಗಳ ಹಿಂದೆ ನನ್ನ ಮಗಳನ್ನು ಹಾಗೂ ಮೊಮ್ಮಕಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ, ತನ್ನ ತಂಗಿಯಾದ ನೇತ್ರಾವತಿ ರವರೊಂದಿಗೆ ವಾಸವಾಗಿದ್ದುಕೊಂಡಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ನನ್ನ ಮಗಳ ಜೊತೆ ಮಾತನಾಡಲು ಕರೆ ಮಾಡಿದರೂ ಸಹ ಸರಿಯಾಗಿ ಉತ್ತರಿಸದೇ ನನ್ನ ಮಗಳನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟಿರಲಿಲ್ಲ. ನನ್ನ ಸೊಸೆ ಮೊಬೈಲ್ ಗೆ ವಾಟ್ಸ್ ಆಪ್ ಬಂದಿದ್ದ ಫೋಟೋ ತೋರಿಸಿ ಇದು ನಮ್ಮ ಸುಧಾ ಎಂದು ತೋರಿಸಿದ್ದು, ಅದನ್ನು ನೋಡಿದಾಗ ನನ್ನ ಮಗಳಿಗೆ ಮುಖ, ಕೈಕಾಲು ದೇಹದ ಮೇಲೆಲಾ. ಸುಟ್ಟ ಗಾಯಗಳಾಗಿರುವುದು ಕಂಡುಬAದು ವಿಚಾರ ಮಾಡಲಾಗಿ ನನ್ನ ಮಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯ ತಿಳಿದು ಕೂಡಲೆ ನಾವು ಊರಿನಿಂದ ಹೊರಟು ಬೆಂಗಳೂರಿಗೆ ಬಂದು ನನ್ನ ಅಳಿಯ ವಾಸವಿದ್ದ ಕೊಟ್ಟಗೆಪಾಳ್ಯದ ಸಪಾಳ್ವೆ ಮನೆಗೆ ಹೋಗಿ ನೋಡಲಾಗಿ ಮಗಳನ್ನು ವಿಚಾರ ಮಾಡಿದ್ದು ತನ್ನ ಗಂಡ ಹಾಗೂ ಆತನ ತಂಗಿ ಇಬ್ಬರೂ ಸೇರಿ ಹಿಂಸೆ ನೀಡಿ ದೇಹದ ಭಾಗಗಳಿಗೆ ಸುಟ್ಟು ಚಿತ್ರಹಿಂಸೆ ನೀಡಿರುತ್ತಾರೆಂದು ತಿಳಿಸಿದರು. ನನ್ನ ಮಗಳಿಗೆ ಮಾತನಾಡುವ ಶಕ್ತಿ ಸಹ ಇಲ್ಲದೆ ತುಂಬಾ ನಿಶಕ್ತಳಾಗಿರುತ್ತಾಳೆ, ನನ್ನ ಮಗಳಿಗೆ ವರದಕ್ಷಿಣೆ ಹಣ ನೀಡಿಲ್ಲ ಎಂದು ಸರಿಯಾಗಿ ಊಟ ನೀಡದೆ ಮೈಕೈ ದೇಹದ ಮೇಲೆ ಸುಟ್ಟು ಚಿತ್ರಹಿಂಸೆ ನೀಡಿ ಸರಿಯಾಗಿ ಚಿಕಿತ್ಸೆ ಕೊಡಿಸದೆ ಸಾಯಿಸಲು ಪ್ರಯತ್ನಿಸಿರುವುದು. ಆದ್ದರಿಂದ ನನ್ನ ಮಗಳಿಗೆ ಚಿತ್ರಹಿಂಸೆ ನೀಡಿ ವರದಕ್ಷಿಣೆ ಹಣಕ್ಕಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವ ಅಳಿಯ ನರಸಿಂಹ ಗಾಣಿಗ ಹಾಗೂ ಆತನ ತಂಗಿ ನೇತ್ರಾವತಿ ಇಬ್ಬರು ವಿರುದ್ಧ ಪೋಲಿಸರಿಗೆ ದೂರು ನೀಡಿದ್ದಾರೆ.

ನಂತರ ತನಿಖೆ ಕೈಗೊಂಡ ಅಲ್ಲಿನ ಪೊಲೀಸರು ಮಹಿಳೆಯ ಪತಿ ನರಸಿಂಹ ಹಾಗೂ ಆತನ ತಂಗಿ ನೇತ್ರಾವತಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಸದ್ಯ ಮಹಿಳೆಯನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಮುಂದುವರೆಸಿದ್ದಾರೆ.

error: