March 15, 2025

Bhavana Tv

Its Your Channel

ಮುಂಡಳ್ಳಿಯ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯಿOದ ಸಿಪಿಐ ದಿವಾಕರ ದಂಪತಿಗೆ ಸನ್ಮಾನ

ಭಟ್ಕಳ ಮುಂಡಳ್ಳಿಯ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯಿoದ ಸಿಪಿಐ ದಿವಾಕರ ದಂಪತಿ ಸನ್ಮಾನಿಸಲಾಯಿತು.

ಕಳೆದ ವರ್ಷ ನವರಾತ್ರಿ ವೇಳೆ ದೇವರ ಚಿನ್ನಾಭರಣ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ಸಿಪಿಐ ದಿವಾಕರ ಹಾಗೂ ಅವರ ತಂಡ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಹಿನ್ನೆಲೆಯಲ್ಲಿ ಪ್ರಸಕ್ತ ನವರಾತ್ರಿಯ ಸಂದರ್ಭದಲ್ಲಿ ದುರ್ಗಾದೇವಿಗೆ ದೀಪಾರಾಧನೆ ನೆರವೇರಿಸಿ ಸಿಪಿಐ ದಿವಾಕರ ದಂಪತಿ ಹಾಗೂ ಗ್ರಾಮೀಣ ಠಾಣೆಯ ಎ.ಎಸ್.ಐ ಮಂಜುನಾಥ ಗೌಡರ, ಸೇರಿದಂತೆ ತಂಡದವರಿಗೆ ದೇವಸ್ಥಾನದ ಆಡಳಿತ ಮಂಡಳಿ ಸನ್ಮಾನಿಸಿತು.
ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹೇಮಂತ ಮೊಗೇರ, ದೇವಸ್ಥಾನದ ಪ್ರಧಾನ ಅರ್ಚಕನಾಗರಾಜ ಭಟ್ಟ, ಗ್ರಾಪಂ ಸದಸ್ಯ ರಾಜು ನಾಯ್ಕ, ವಸಂತ ನಾಯ್ಕ, ವಿನೋದ ಮೊಗೇರ ಇದ್ದರು.

error: