April 29, 2024

Bhavana Tv

Its Your Channel

ಪ್ರಸಿದ್ದ ದೇವಿಯ ದೇವಾಲಯ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಐದನೇ ದಿನವಾದ ಸೋಮವಾರದಂದು ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು

ಭಟ್ಕಳ: ಎರಡು ವರ್ಷಗಳ ನಂತರ ನವರಾತ್ರಿ ಉತ್ಸವಕ್ಕೆ ಹೊಸ ಹುಮ್ಮಸ್ಸು ಬಂದಿದೆ. ಭಟ್ಕಳ ತಾಲೂಕಿನೆಲ್ಲೆಡೆ ಸೇರಿ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಈಗ ಹಬ್ಬದ ವಾತಾವರಣ ಮನೆ ಮಾಡಿದೆ. ಶಕ್ತಿದಾತೆ, ಜಗನ್ಮಾತೆ, ಕಾತ್ಯಾಯಿನಿ,ಮಹಿಷಾಸುರ ಮರ್ದಿನಿ. ಎಂದೆಲ್ಲ ಕರೆಸಿಕೊಳ್ಳುವ ನವದುರ್ಗೆಯ ಪೂಜಾ ಕೈಂಕರ್ಯಗಳು ಸಂಭ್ರಮದಿoದ ನಡೆದಿವೆ.

ಭಟ್ಕಳ ತಾಲೂಕಿನ ಪ್ರಸಿದ್ದ ದೇವಿಯ ದೇವಾಲಯಗಳಲ್ಲಿ ಒಂದಾಗಿರುವ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಯೂ ಐದನೇ ದಿನವಾದ ಸೋಮವಾರದಂದು ನೂರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿ ದೇವಿಯ ಕ್ರಪೆಗೆ ಪಾತ್ರರಾದರು.

ದೇವಸ್ಥಾನದ ಆವರಣದಲ್ಲಿ ಸಾಕಷ್ಟು ಮಹಿಳೆಯರು ಸೇರಿದ್ದು, ಮಂಗಳರಾತಿ,ಕುAಕುಮಾರ್ಚನೆ, ಉಡಿ ಸೇವೆಯನ್ನು ದೇವಿಗೆ ಸಮರ್ಪಿಸಿ ಭಕ್ತಿಯನ್ನು ದೇವಿಯ ಮುಂದೆ ತೊರ್ಪಡಿಸಿಕೊಂಡರು.

ಒAಬತ್ತು ದಿನಗಳವರೆಗೂ ಒಂದೊoದು ದಿನ ವಿಭಿನ್ನ ಅಲಂಕಾರ ಮಾಡುವುದು ಈ ದೇವಿ ದೇವಸ್ಥಾನದ ವಿಶೇಷತೆ. ರಾಜ್ಯದ ಮೂಲೆ-ಮೂಲೆಗಳಿಂದ ಭಕ್ತರ ದಂಡು ಹರಿದುಬರುತ್ತಲಿದೆ. ಪ್ರತಿದಿನವೂ ಫಲ, ತಾಂಬೂಲ, ಪುಷ್ಪ, ವಸ್ತ್ರ, ವಿವಿಧ ದ್ರವ್ಯಗಳ ಅಲಂಕಾರ ನೆರವೇರಿಸಲಾಗುತ್ತಿದೆ. ಬೆಳಿಗ್ಗೆ ಪಂಚಾಮೃತ ಅಭಿಷೇಕ, ಫಲ ಅಲಂಕಾರ, ಮಂಗಳಾರತಿ, ನೈವೇದ್ಯ ಇರುತ್ತದೆ. ರಾತ್ರಿ ಭಜನೆ ಪೂಜಾಕಾರ್ಯ ನಿರಂತರವಾಗಿ ನಡೆಯಿತ್ತಿದೆ.

ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಪ್ರತಿದಿನ ಅನ್ನಸಂತರ್ಪಣೆಯೂ ನಡೆಯುತ್ತವೆ.

error: