May 18, 2024

Bhavana Tv

Its Your Channel

ಶ್ರೀ ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆಗೆ ತೆರಳುವ ಮುಖ್ಯ ರಸ್ತೆಯನ್ನು ಮರು ಕಾಮಗಾರಿ ಮಾಡಬೇಕೆಂದು ಗ್ರಾಮಸ್ಥರ ಒತ್ತಾಯ

ಭಟ್ಕಳ ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿ ಯ ಅನುದಾನಿತ ಪ್ರೌಢಶಾಲೆಯಾದ
ಶ್ರೀ ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆಗೆ ತೆರಳುವ ಮುಖ್ಯ ರಸ್ತೆ ಯು ಸಾಕಷ್ಟು ರ‍್ಷಗಳಿಂದ ಮೂಲಭೂತವಾಗಿ ಇರದಂತಿರದೇ ಡಾಂಬರೀಕರಣ ಕಾಣದೇ ಕಿತ್ತು ಹೋಗಿದ್ದು ಈ ರಸ್ತೆಯ ಮರು ಕಾಮಗಾರಿ ಆಗಬೇಕೆಂಬ ಬೇಡಿಕೆಯನ್ನು ಅಲ್ಲಿನ ಗ್ರಾಮಸ್ಥರ ಒತ್ತಾಯವಾಗಿದೆ.

ಈ ಶಾಲೆಗೆ ತೆರಳುವ ರಸ್ತೆಯು ದುರಸ್ತಿಯನ್ನು ಕಂಡಿಲ್ಲ. ಕಾರಣ ಈ ಭಾಗದಲ್ಲಿ ಕೇವಲ ಶಾಲಾ ವಿದ್ಯರ‍್ಥಿಗಳು, ಶಿಕ್ಷಕರು ಮಾತ್ರ ಓಡಾಡುತ್ತಾರೆಂಬ ಹಿನ್ನೆಲೆ ದಿವ್ಯ ನರ‍್ಲಕ್ಷಕ್ಕೊಳಗಾಗಿದೆ ಎನ್ನಬಹುದು. ಇಲ್ಲಿನ ಶ್ರೀ ವಿಷ್ಣುಮರ‍್ತಿ ಗಣಪತಿ ಸಂಸ್ಕೃತ ಪಾಠಶಾಲಾ ಟ್ರಸ್ಟಿನ ಈ ಶಾಲೆಗೆ ಐವತ್ತು ರ‍್ಷ ಗತಿಸಿದೆ. ಇಲ್ಲಿನ ಉತ್ತಮ ಶಿಕ್ಷಣದಿಂದ ಈ ಪ್ರೌಢಶಾಲೆ ವಿದ್ಯರ‍್ಥಿಗಳು ಪ್ರತಿ ರ‍್ಷವೂ ತಾಲೂಕು ಜಿಲ್ಲೆಯಲ್ಲಿ ಗುರುತಿಸಲ್ಪಡುತ್ತಿದೆ. ಆದರೆ ಇಂತಹ ಶಾಲೆಗೆ ಬರುವ ರಸ್ತೆಯಲ್ಲಿ ಮಕ್ಕಳು ಮಾತ್ರ ನಿತ್ಯವೂ ನರಕ ಅನುಭವಿಸಿಯೇ ಬರಬೇಕಾಗಿದೆ.

ಒಟ್ಟು ೮೫ ವಿದ್ಯರ‍್ಥಿಗಳು ೧-೧೦ ನೇ ತರಗತಿ ತನಕ ವಿದ್ಯಾಭ್ಯಾಸ ಮಾಡುತ್ತಿದ್ದು ೧೦ ಮಂದಿ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಬೋಧಿಸುವ ಕರ‍್ಯ ಮಾಡುತ್ತಿದ್ದಾರೆ. ಮಕ್ಕಳಿಗೆ ಈ ರಸ್ತೆಯ ಅಸರ‍್ಪಕದಿಂದಾಗಿ ವಿಧ್ಯಾಭ್ಯಾಸದ ಮೇಲೆ ಅವರ ಶಿಕ್ಷಣದ ಮೇಲು ಪರಿಣಾಮ ಬೀರಲಿದ್ದು ಈ ರಸ್ತೆ ಸರ‍್ಪಕ ಮಾಡಲು ಪಂಚಾಯತ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಅಗತ್ಯವಿದೆ.

ಅಕ್ಕ ಪಕ್ಕ ಮರಗಿಡಗಳ ಮಧ್ಯೆ ಎತ್ತರದ ಪ್ರದೇಶದಲ್ಲಿರುವ ಶಾಲೆಗೆ ಮಾರುಕೇರಿ ಪಂಚಾಯತನಿಂದ ಕೇವಲ ೨ ಕಿ.ಮೀ. ಇದ್ದು, ಅಲ್ಲಿನ ತಿರುವಿನಿಂದ ಶಾಲೆಯ ದ್ವಾರದ ತನಕ ಕಿತ್ತು ಹೋದ ಡಾಂಬರಿನ ರಸ್ತೆಯೇ ಹೊರತು ಮತ್ತೆನು ಕಾಣ ಸಿಗುವುದಿಲ್ಲ. ಕಾರಣ ರಸ್ತೆ ದುರಸ್ತಿಯ ನೆಪದಲ್ಲಿ ಇಲ್ಲಿನ ಕಾಮಗಾರಿ ಮಾಡುವ ಗುತ್ತಿಗೆದಾರ ಗ್ರಾಮೀಣ ಪ್ರದೇಶವೆಂಬ ಅಸಡ್ಡೆಯಲ್ಲಿ ಅತಿ ಕೆಟ್ಟದಾಗಿ ರಸ್ತೆಗೆ ಡಾಂಬರು ಹಾಕಿ ನಂತರ ಅದರ ನರ‍್ವಹಣೆಯನ್ನು ಮರೆತು ತೆರಳುತ್ತಾರೆ.

ಇತ್ತೀಚಿನ ದಿನದಲ್ಲಿ ಈ ಶಾಲೆಯ ಮಕ್ಕಳು ನಡೆದುಕೊಂಡು ಬರುವಾಗ, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಬಿಡುವ ವೇಳೆ ವಾಹನದಲ್ಲಿ ಬಿದ್ದು ಪೆಟ್ಟಾಗಿರುವ ಉದಾಹರಣೆ ಸಹ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ಇದೇ ಶಾಲೆಯ ಮುಖ್ಯಾಧ್ಯಾಪಕರು ಸಹ ತಮ್ಮ ಬೈಕನಲ್ಲಿ ಬರುವಾಗ ಬಿದ್ದು ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಬಂದಿರುವದಿದೆ ಎನ್ನುತ್ತಾರೆ ಕುದ್ದು ಶಾಲಾ ಮುಖ್ಯಾಧ್ಯಾಪಕ ಪಿ.ಟಿ. ಚೌಹಾಣ್ ಅವರು.

ಈ ಹಿಂದೆ ಚಿಕ್ಕ ಸಮಸ್ಯೆಯಾಗಿದ್ದ ಈ ರಸ್ತೆಯು ಈಗ ಅತೀ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಏರಿಳಿತದ ರಸ್ತೆಯಾಗಿದ್ದ ಹಿನ್ನೆಲೆ ಶಾಲೆಗೆ ತೆರಳುವುದು ವಿದ್ಯರ‍್ಥಿಗಳಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಆಡಳಿತ ಟ್ರಸ್ಟ್ ಹಾಗೂ ಶಿಕ್ಷಕರೆಲ್ಲರು ಸೇರಿ ಉಚಿನ ಶಾಲಾ ಬಸ್ ವ್ಯವಸ್ಥೆ ಸಹ ಮಾಡಿದ್ದು ಈ ಕಲ್ಲು ಮಣ್ಣುಗಳ ರಸ್ತೆಯಿಂದ ಈ ವಾಹನದಲ್ಲಿ ತೆರಳುವುದು ಇನ್ಜು ಅಪಾಯಕಾರಿಯಾಗಿದೆ. ಮಕ್ಕಳ ಹಾಜರಾತಿ ಹಾಗೂ ಅವರ ಶಿಕ್ಷಣ ಉತ್ತಮವಾಗಿರಲು ಎಂಬ ಉದ್ದೇಶದೊಂದಿಗೆ ಶಾಲಾ ಶಿಕ್ಷಕರು ಶ್ರಮಿಸುತ್ತಿದ್ದರೆ ಪಂಚಾಯತ ಜನಪ್ರತಿನಿಧಿಗಳು ಶಾಲೆಗೆ ಸಿಗಬೇಕಾದ ಮೂಲಭೂತ ರಸ್ತೆಯನ್ನು ಸರಿಪಡಿಸಲು ಇನ್ನು ಮೀನಾಮೇಷ ಎಣಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂಬುದು ಆ ಭಾಗದ ಪ್ರಜ್ಞಾವಂತ ಜನರ ಅಭಿಪ್ರಾಯವಾಗಿದೆ.

ಇನ್ನು ಈ ಶಾಲೆಗೆ ಸಂರ‍್ಕ ಕಲ್ಪಿಸುವ ಹೂತ್ಕಳ ಹಾಗೂ ಮಾರುಕೇರಿ ಗ್ರಾಮ ಪಂಚಾಯತಗೆ ತೆರಳಲು ಎರಡು ರಸ್ತೆಯ ಡಾಂಬರು ಕಿತ್ತು ಹೋಗಿದ್ದರಿಂದಲೇ ಮಕ್ಕಳು ನಡೆದುಕೊಂಡು ಹೋಗುವುದು ದುಸ್ಥರವಾಗಿದೆ. ಗುಡ್ಡ ಪ್ರದೇಶವಾದ ಈ ರಸ್ತೆಯಲ್ಲಿ ಮಳೆಗಾಲದ ವೇಳೆ ನೀರು ಇಳಿಜಾರಿನಲ್ಲಿ ಹರಿಯುವುದರಿಂದ ಈ ಹದಗೆಟ್ಟ ಡಾಂಬರ ರಸ್ತೆಯು ಇನ್ನಷ್ಟು ಹಾಳಾಗಿದೆ ಮುಂದೆಯು ಸಹ ಹಾಳಾಗುವುದು ಖಂಡಿತವಾಗಿದೆ.

‘ಒಂದು ಗ್ರಾಮದ ಅಭಿವೃದ್ಧಿಯಲ್ಲಿ ಶಾಲಾ ವಿದ್ಯರ‍್ಥಿಗಳ ಸಂಚಾರಕ್ಕಿರುವ ರಸ್ತೆಯು ಬರಲಿದೆ. ಆದರೆ ನಮ್ಮ ಗ್ರಾಮದಲ್ಲಿ ಶಾಲೆಯ ರಸ್ತೆಯು ಸತತವಾಗಿ ಡಾಂಬರು ಕಿತ್ತು ಹೋಗಿ ಹಾಳಾಗುತ್ತಲಿದೆ. ಈ ಹಿಂದೆ ನಾನು ಶಾಲೆಗೆ ಬರುವ ವೇಳೆ ಬಿದ್ದು ಪೆಟ್ಟಿದ್ದು ಅದಾಗ ಬಳಿಕ ಸಾಕಷ್ಟು ಚಿಕ್ಕ ಪುಟ್ಟ ಅವಗಢ ನಡೆದಿದೆ. ಇವೆಲ್ಲವನ್ನೂ ಸದ್ಯ ನಡೆದ ಗ್ರಾಮಸಭೆಯಲ್ಲಿ ಪಂಚಾಯತ ಅಧ್ಯಕ್ಷರಿಗೆ ಹಾಗೂ ಶಾಸಕರಿಗೆ ಮನವಿ ನೀಡಿದ್ದೇನೆ. ಶೀಘ್ರವಾಗಿ ಈ ರಸ್ತೆ ಸರಿಯಾಗುವ ನಂಬಿಕೆ ಇದೆ.ಎಂದು ಪಿ.ಟಿ. ಚೌಹಾಣ್ – ಶಾಲಾ ಮುಖ್ಯಾಧ್ಯಾಪಕ ಹೇಳುತ್ತಾರೆ.

‘ಸರಕಾರವೇ ಹೇಳುವಂತೆ ಮಕ್ಕಳಿಗೆ ಸಿಗಬೇಕಾದ ಮೂಲಭೂತ ಸೌರ‍್ಯಗಳಾದ ರಸ್ತೆ ಸಂರ‍್ಕ ವಾಗಿದ್ದರು ಪಂಚಾಯತಿ ಹಾಗೂ ಸಂಬಂದಪಟ್ಟ ಇಲಾಖೆ ಮಾತ್ರ ಯಾವುದೇ ಕರ‍್ಯ ಮಾಡುತ್ತಿಲ್ಲ. ಉತ್ತಮ ಗ್ರಾಮವನ್ನ ಕುಗ್ರಾಮವನ್ನಾಗಿ ಮಾಡುವಂತಹ ಕೆಲಸವನ್ನು ಅಧಿಕಾರಿಗಳು ಜನಪ್ರತಿನಿಧಿಗಳು ಮಾಡುತ್ತಿದ್ದು ಈ ಬಗ್ಗೆ ಶಾಸಕರು ಹೆಚ್ಚಿನ ಗಮನ ಹರಿಸಬೇಕೆಂಬ ಒತ್ತಾಯ.ಎಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸೋಮಶೇಖರ ನಾಯ್ಕ ಹೇಳಿದ್ದಾರೆ

error: