March 13, 2025

Bhavana Tv

Its Your Channel

ನೀರಿನ ಸೆಳತಕ್ಕೆ ಸಿಲುಕಿ ಪ್ರವಾಸಿಗನೋರ್ವ ಸಾವು

ಭಟ್ಕಳ: ನೀರಿನ ಸೆಳತಕ್ಕೆ ಸಿಲುಕಿ ಪ್ರವಾಸಿಗನೊರ್ವ ಮೃತ ಪಟ್ಟ ಘಟನೆ ಭಟ್ಕಳ ತಾಲೂಕಿನಿ ಮುರ್ಡೇಶ್ವರ ಕಡಲ ತೀರದಲ್ಲಿ ಸೋಮವಾರ ನಡೆದಿದೆ.

ರಾಮನಗರದ ಕನಕಪುರ ನಿವಾಸಿ ರಘುನಂದನ (೨೨) ಮೃತ ಯುವಕ. ಇವರು ೧೦ ಸ್ನೇಹಿತರು ಕನಕಪುರದಿಂದ ಮುರ್ಡೇಶ್ವರ ಪ್ರವಾಸಕ್ಕೆಂದು ಸೋಮವಾರ ಬಂದಿದ್ದರು. ಮುರ್ಡೇಶ್ವರ ಸಮುದ್ರ ತೀರ ದಾಟಿ ಬೈಲೂರು ಬಳಿ ಸಮುದ್ರ ತೀರದಲ್ಲಿ ಸ್ನಾನಕ್ಕೆಂದು ತೆರಳಿದ್ದು ಅದರಲ್ಲಿ ರಘುನಂದನ ನೀರಿನ ಸೆಳತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ. ನಂತರ ಸ್ಥಳೀಯ ಮೀನುಗಾರರ ಸಹಾಯದಿಂದ ಶವ ಪತ್ತೆಯಾಗಿದ್ದು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: