
ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ‘ವಿದ್ಯಾರ್ಥಿ ಪಾಲಕರ ಸಮಾಗಮ-೨೦೨೧’ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ನರಸಿಂಹಮೂರ್ತಿಯವರು ಕರ‍್ಯಕ್ರಮ ಉದ್ಘಾಟಿಸಿದರು
ನಂತರ ಮಾತನಾಡಿ”ಕಾಲೇಜು ವಿದ್ಯಾರ್ಥಿ ಪಾಲಕರ ಸಮಾಗಮ ವಿನೂತನವಾದದ್ದು, ಇಂತಹ ಹಲವು ಪ್ರಯೋಗಗಳಿಗೆ ಎಸ್.ಜಿ.ಎಸ್ ಕಾಲೇಜು ಹೆಸರುವಾಸಿಯಾಗಿದೆ”ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ ್ಟಅಧ್ಯಕ್ಷರಾದ ಡಾ ಸುರೇಶ್ ನಾಯಕ “ವಿದ್ಯಾರ್ಥಿಗಳು ಸಂವಹನ ಕೌಶಲ್ಯವನ್ನು ಮೈಗೂಡಿಸಿಕೊಂಡು, ಉದ್ಯೋಗರ್ಹ ವ್ಯಕ್ತಿಗಳಾಗಿ ಹೊರಹೊಮ್ಮಬೇಕು”ಎಂದು ಕರೆನೀಡಿದರು.
ಭಟ್ಕಳ ಎಜುಕೇಶನ್ ಟ್ರಸ್ಟ್ನ ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ ಮಾತನಾಡಿ “ಹೊಸ ರಾಷ್ಟಿçÃಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದೆ, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು” ಕಿವಿಮಾತು ಹೇಳಿದರು.
ಪ್ರಾಂಶುಪಾಲ ಶ್ರೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿ “ವಿದ್ಯಾರ್ಥಿ ಪಾಲಕರ ಸಮಾಗಮ ಕರ‍್ಯಕ್ರಮದ ಮಹತ್ವವನ್ನು ಪ್ರಸ್ತಾಪಿಸಿದರು”. ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜು ನಡೆದು ಬಂದ ಹಾದಿ, ಮುನ್ನೋಟದ ಕುರಿತು ಬಿ.ಕಾಂ ಉಪ ಪ್ರಾಂಶುಪಾಲರಾದ ಫಣಿಯಪ್ಪಯ್ಯ ಹೆಬ್ಬಾರ, ಹೊಸ ರಾಷ್ಟಿçÃಯ ಶಿಕ್ಷಣ ನೀತಿಯಕುರಿತು ಬಿ.ಎ, ಬಿ.ಬಿ.ಎ ಉಪ ಪ್ರಾಂಶುಪಾಲರಾದ ವಿಶ್ವನಾಥ ಭಟ್ ಹಾಗೂ ಅಂತರ್‌ಜಾಲದ ಸುಳ್ಳು ವದಂತಿಯ ಬಗ್ಗೆ ಅರಿವು ಕುರಿತು ಬಿ.ಸಿ.ಎ ಉಪ ಪ್ರಾಶುಂಪಾಲರಾದ ವಿಖ್ಯಾತ ಪ್ರಭು ಪ್ರಸ್ತುತಿಯನ್ನು ಸಾದರಪಡಿಸಿದರು. ಉಪನ್ಯಾಸಕ ವಿಘ್ನೇಶ್ ಪ್ರಭು ಸ್ವಾಗತಿಸಿದರು. ಉಪನ್ಯಾಸಕ ಆನಂದ ದೇವಡಿಗ ವಂದಿಸಿದರು. ಮುಖ್ಯ ಅತಿಥಿಗಳನ್ನು ಉಪನ್ಯಾಸಕ ಓಂಕಾರ ಮರಬಳ್ಳಿ ಪರಿಚಯಿಸಿದರು. ಉಪನ್ಯಾಸಕರಾದ ಶಾಂತರಾಯ ಜಿ ಮತ್ತು ಸತ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ