
ಭಟ್ಕಳ: ಭಯೋತ್ಪಾದರ ಪತ್ರಿಕೆ ವಾಯ್ಸ್ ಆಫ್ ಹಿಂದ್‌ನಲ್ಲಿ ಪ್ರಕಟವಾಗಿದೆ ಎನ್ನಲಾದ ವರದಿಯ ಹಿನ್ನಲೆಯಲ್ಲಿ ಮುರ್ಡೇಶ್ವರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು ಗುರುವಾರ ಕಾರವಾರದ ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ತಪಾಸಣೆ ನಡೆಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಮುರ್ಡೇಶ್ವರದ ವಿಷಯ ಪ್ರಸ್ತಾಪಗೊಳ್ಳುತ್ತಿದೆ. ಇದರಿಂದ ಮುರ್ಡೇಶ್ವರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇದನ್ನೆಲ್ಲಾ ಗಂಭಿರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಸುರಕ್ಷತೆಯ ದೃಷ್ಟಿಯಂದ ಮಹತ್ವದ ಹೆಜ್ಜೆ ಇಟ್ಟಿದೆ. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳಾದ ಅನಿಲ್ ನಾಯ್ಕ, ಜಗನ್ನಾಥ ನಾಯ್ಕ, ಪ್ರದೀಪ ನಾಯ್ಕ, ನಿತ್ಯಾನಂದ ಗೌಡ, ಗಣೇಶ ನಾಯ್ಕ, ಶೇಕು ಪೂಜಾರಿ,ಹಾಗೂ ಕಾರವಾರ ಡಿ.ಆರ್,ಪೊಲೀಸ್, ಸಿವಿಲ್ ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು
ದೇವಸ್ಥಾನಕ್ಕೆ ಬರುವ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ. ಆಯಾ ಕಟ್ಟಿನಲಿ ಪೊಲೀಸ ತುಕಡಿಗಳನ್ನು ನೇಮಿಸಲಾಗಿದ್ದು, ಹೋಗುಬರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ದೇವಸ್ಥಾನಕ್ಕೆ ಹಾಗೂ ಶಿವನ ಮೂರ್ತಿ ದರ್ಶನಕ್ಕೆ ಹೋಗುವ ಭಕ್ತಾದಿಗಳು ತೆಗೆದುಕೊಂಡು ಹೋಗುವ ಬ್ಯಾಗ ಹಾಗೂ ಇನ್ನಿತರ ವಸ್ತುಗಳನ್ನು ಒಯ್ಯಲು ನಿಷೇಧಿಸಲಾಗಿದೆ. ದೇವಸ್ಥಾನಕ್ಕೆ ಹಾಗೂ ಶಿವನ ಪ್ರತಿಮೆ ಬಳಿ ತೆರಳುವ ಯಾತ್ರಾರ್ಥಿಗಳನ್ನು ತಪಾಸಣೆ ನಡೆಸಿ ಕಳುಹಿಸಲಾಗುತ್ತಿದೆ. ದೇವಸ್ಥಾನದ ದ್ವಾರ, ಶಿವನ ಪ್ರತಿಮೆ ಬಳಿ ತೆರಳುವ ಮಾರ್ಗದಲ್ಲಿ ಒಟ್ಟು ಎರಡು ಮೆಟಲ್ ಡಿಟೆಕ್ಟರ್ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಎಂದು ಡಿವೈಎಸ್‌ಪಿ ಬೆಳ್ಳಿಯಪ್ಪ ಕೆ.ಯು., ತಿಳಿಸಿದ್ದಾರೆ

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ