
ಭಟ್ಕಳ ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ನ್ಯಾಯಾಲಯ ಸಂಕೀರ್ಣದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಜಗದೀಶ ಶಿವಪೂಜಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸಂವಿಧಾನದ ಆಶಯದಂತೆ ನಾವೆಲ್ಲರೂ ಕೆಲಸ ಮಾಡಬೇಕು. ಸಂವಿಧಾನದ ಸಂಪೂರ್ಣ ಅಡಕ ಅದರ ಪೀಠಿಕೆಯಲ್ಲಿದ್ದು ನಾವು ಸಂವಿದಾನದ ಪೀಠಿಕೆಯನ್ನು ಅಂಗೀಕರಿಸಿದ್ದು ಅದಕ್ಕೆ ಬದ್ಧರಾಗಿರತಕ್ಕದ್ದು ಎಂದರು. ದೇಶದಲ್ಲಿ ಉಳಿದ ಎಲ್ಲಾ ಕಾನೂನುಗಳು ಕೂಡಾ ಸಂವಿದಾನದ ಅಡಿಯಲ್ಲಿ ರಚಿಸಲಾಗಿದೆ. ಸಂವಿದಾನದ ಆಶಯದಂತೆ ನಿಯಮ, ಕಾನೂನು ಪಾಲಿಸಲು ಎಲ್ಲರೂ ಬದ್ಧರಾಗಿ ಉತ್ತಮ ಕೆಲಸಗಳನ್ನು ಮಾಡಬೇಕು ಎಂದೂ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಂ. ಎಲ್. ನಾಯ್ಕ ವಹಿಸಿದ್ದರು.
ಕಾರ್ಯಕ್ರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಹಿರಿಯ ನ್ಯಾಯವಾದಿ ಆರ್. ಆರ್. ಶ್ರೇಷ್ಟಿಯವರು ಸಂವಿಧಾನದ ಪೀಠಿಕೆಯೊಂದೇ ಪ್ರತಿಯೋರ್ವರೂ ಕೂಡಾ ಸಂವಿಧಾನಕ್ಕೆ ತಲೆಬಾಗಬೇಕು. ಸಂವಿಧಾನದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಳ ಕಾರ್ಯ ನಿರ್ವಹಣೆಯನ್ನು ಅತ್ಯಂತ ಉತ್ತಮವಾಗಿ ಮಾಡುವಂತೆ ರಚಿಸಲಾಗಿದ್ದು, ಒಂದಕ್ಕೊAದು ಎಲ್ಲಿಯೂ ಕೂಡಾ ಸಂಘರ್ಷಕ್ಕೆಡೆ ಮಾಡಿಕೊಡದಂತೆಯೂ ಕೂಡಾ ಮಾಡಲಾಗಿದೆ. ದೇಶದಲ್ಲಿ ಯಾವುದೇ ರೀತಿಯ ಬಿಕ್ಕಟ್ಟು ಸೃಷ್ಟಿಯಾಗಬಾರದು ಎನ್ನುವುದೇ ಸಂವಿದಾನದ ಆಶಯವಾಗಿದೆ ಎಂದ ಅವರು ಸಂವಿದಾನದ ಅನೇಕ ಆಶಯಗಳು ಇಂದು ನ್ಯಾಯಾಂಗದ ಕ್ರೀಯಾಶೀಲತೆಯಿಂದ ಜನ ಸಾಮಾನ್ಯರಿಗೆ ದೊರೆಯುತ್ತಿರುವುದು ಸಂತಸದ ವಿಷಯ ಎಂದೂ ಹೇಳಿದರು. ಜನ ಸಾಮಾನ್ಯರು ಇಂದು ನ್ಯಾಯಾಂಗದ ಮೇಲೆ ವಿಶ್ವಾಸವಿಡಲಿಕ್ಕೂ ಕೂಡಾ ನ್ಯಾಯಾಂಗದ ಕ್ರೀಯಾಶೀಲತೆಯೇ ಕಾರಣ ಎಂದೂ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಧಾನ ಸಿವಿಲ್ ನ್ಯಾಯಾಲಯದ ಸರಕಾರಿ ಅಭಿಯೋಜಕ ವಿವೇಕ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶಂಕರ ನಾಯ್ಕ ಉಪಸ್ಥಿತರಿದ್ದರು.
ವಕೀಲರ ಸಂಘದ ಸಹ ಕಾರ್ಯದರ್ಶಿ ನಾಗರಾಜ ಎಸ್. ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ಜೆ.ಡಿ. ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಜೆ. ನಾಯ್ಕ ವಂದಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ