May 14, 2024

Bhavana Tv

Its Your Channel

ಬಸ್ತಿಯಲ್ಲಿ ವಿದ್ಯಾರ್ಥಿಗಳಿಗೆ ಬಸ್ ತಂಗುದಾಣದ ವ್ಯವಸ್ಥೆ ಕಲ್ಪಿಸಬೇಕೆಂದು ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರಗೆ ಮನವಿ

ಭಟ್ಕಳ ತಾಲೂಕಿನ ಬಸ್ತಿಯಲ್ಲಿ ವಿದ್ಯಾರ್ಥಿಗಳಿಗೆ ಬಸ್ ತಂಗುದಾಣದ ವ್ಯವಸ್ಥೆ ಕಲ್ಪಿಸಬೇಕು ಎಂದು ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಎಸ್ ರವಿಚಂದ್ರ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಭಟ್ಕಳ ತಾಲೂಕಿನ ಕಾಯ್ಕಿಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ತಿ ಗ್ರಾಮದ ಮಧ್ಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯು ಹಾದು ಹೋಗಿದೆ. ಸುತ್ತಮುತ್ತಲಿನ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಸ್ಸು ಹಾಗೂ ಇತರೆ ಖಾಸಗಿ ವಾಹನದ ಪ್ರಯಾಣಕ್ಕಾಗಿ ಹೆದ್ದಾರಿ ಬದಿಯಲ್ಲಿ ನಿಲ್ಲಬೇಕಿದೆ..ಹೆದ್ದಾರಿಯ ಪಕ್ಕದಲ್ಲಿ ಯಾವುದೇ ಬಸ್ ತಂಗುದಾಣದ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ಮತ್ತು ಬಿಸಿಲಿಗೆ ಸಾರ್ವಜನಿಕರು ಪರಿತಪಿಸುವಂತಾಗಿದೆ. ಹೊಸದಾಗಿ ಹೆದ್ದಾರಿಯನ್ನು ನಿರ್ಮಿಸಿದವರು ಬಸ್ ತಂಗುದಾಣದ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ನಗರದ ಪ್ರಾರ್ಥಮಿಕ ಮತ್ತು ಹೈಸ್ಕೂಲ್ ಶಾಲೆಗೆ ಹೋಗುವ ಚಿಕ್ಕ ಚಿಕ್ಕ ಮಕ್ಕಳು ಹೆದ್ದಾರಿಯಲ್ಲಿಯೇ ಸರ್ಕಾರಿ ಬಸ್ಸಿಗಾಗಿ ಗಂಟೆಗಟ್ಟಲೆ ಕಾಯುತ್ತಾರೆ. ದೂರದ ಊರುಗಳಿಗೆ ಪ್ರಯಾಣಿಸುವವರು ಉರಿಬಿಸಿಲು ಅಥವಾ ಸುರಿವ ಮಳೆಗಾಳಿಯಲ್ಲಿ ಹೆದ್ದಾರಿಯ ಬದಿಯಲ್ಲಿ ನಿಲ್ಲುತ್ತಿದ್ದಾರೆ. ಇದರಿಂದಾಗಿ ಹೆದ್ದಾರಿ ಅಪಘಾತಗಳು ಸಂಭವಿಸುವ ಸಾದ್ಯತೆಗಳಿವೆ.
ಬಸ್ತಿಯ ಸುತ್ತಮುತ್ತಲಿನ ಹೆರಾಡಿ, ತೆರಮಕ್ಕಿ, ಸಭಾತಿ, ಉತ್ತರಕೊಪ್ಪ, ದೇವಿಖಾನ, ಗುಮ್ಮನಹಕ್ಲು, ಕಾಯ್ಕಿಣಿ ಗ್ರಾಮಸ್ಥರ ಮತ್ತು ವಿದ್ಯಾರ್ಥಿಗಳ ಮಾತ್ರ ಸಮಸ್ಯೆಯಾಗಿರದೆ ಇದೊಂದು ಸಾರ್ವಜನಿಕ ಸಮಸ್ಯೆಯೆಂದು ಪರಿಗಣಿಸಿ, ಜಿಲ್ಲಾಧಿಕಾರಿಗಳು ತತಕ್ಷಣದಲ್ಲಿ ಸಂಬಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ವ್ಯವಸ್ಥಿತವಾದ ಬಸ್ ತಂಗುದಾಣದ ವ್ಯವಸ್ಥೆಯನ್ನ ಕಲ್ಪಿಸಿಕೊಡಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ದಯಾನಂದ ನಾಯ್ಕ, ಬ್ಲಾಕ್ ಅಧ್ಯಕ್ಷ ಸಂತೋಷ ನಾಯ್ಕ, ಸದಸ್ಯರಾದ ಸತೀಶ ನಾಯ್ಕ, ಮಹೇಶ ನಾಯ್ಕ ರಾಜೇಶ ನಾಯ್ಕ, ವಿಷ್ಣು ದೇವಾಡಿಗ, ದೇವಿದಾಸ ಆಚಾರ್ಯ, ಶಿವಾನಂದ ನಾಯ್ಕ, ಸುಧಾ ನಾಯ್ಕ, ಹೃತಿಕ ನಾಯ್ಕ ಇತರರು ಇದ್ದರು

error: