
ಭಟ್ಕಳ: ಮನೆ ಒಳಗಡೆ ಆಟವಾಡುತ್ತಿದ್ದ ವೇಳೆ ಎರಡುವರೆ ವರ್ಷದ ಮಗುವಿಗೆ ಬೀದಿ ನಾಯಿಯೊಂದು ಮನೆಯ ಒಳಗೆ ನುಗ್ಗಿ ಮಗುವಿನ ಮೇಲೆ ಭೀಕರ ದಾಳಿ ನಡೆಸಿ ಕಚ್ಚಿದ ಘಟನೆ ಮಂಗಳವಾರದAದು ಮುರುಡೇಶ್ವರ ಮಾವಳ್ಳಿ-೧ರ ಸೋನಾರಕೇರಿಯಲ್ಲಿ ನಡೆದಿದೆ.
ನಾಯಿಯಿಂದ ದಾಳಿಗೊಳಗಾಗಿ ಗಾಯಗೊಂಡ ಮಗು ದ್ರವ್ಯಾ ಸಂತೋಷ ನಾಯ್ಕ ಮುರುಡೇಶ್ವರ ಮಾವಳ್ಳಿ-೧ ಸೋನಾರಕೇರಿ ನಿವಾಸಿ ಎಂದು ತಿಳಿದು ಬಂದಿದೆ.
ಈಕೆ ಮಕ್ಕಳೊಂದಿಗೆ ತನ್ನ ಮನೆಯೊಳಗೆ ಆಟವಾಡುತ್ತಿದ್ದ ವೇಳೆ ಹೊರಗಿನಿಂದ ಬಂದ ಬೀದಿ ನಾಯಿಯೊಂದು ಏಕಾಏಕಿ ಮನೆಯೊಳಗೆ ನುಗ್ಗಿ ಮಗು ಮೇಲೆ ದಾಳಿ ನಡೆಸಿದೆ. ನಾಯಿ ದಾಳಿಯಿಂದ ಎರಡೂವರೆ ವರ್ಷದ ಮಗುವಿನ ಮುಖದ ಭಾಗಕ್ಕೆ ಕಚ್ಚಿದ್ದು ಮಗುವಿನ ತುಟಿ ಹಾಗೂ ಕಣ್ಣಿನ ಕೆಳ ಭಾಗದಲ್ಲಿ ತೀವ್ರವಾಗಿ ಗಾಯಗಳಾಗಿದ್ದು, ದಾಳಿಯಿಂದ ಮಗುವಿನ ಪಾಲಕರು ತಪ್ಪಿಸಿ ತಕ್ಷಣ ಮಗುವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ