May 17, 2024

Bhavana Tv

Its Your Channel

ಭಟ್ಕಳ ದಲಿತ ಸಂಘಟನೆಗಳ ಪ್ರಮುಖರು ನಡೆಸುತ್ತಿದ್ದ ಧರಣಿ ೩ನೇ ದಿನಕ್ಕೆ

ಭಟ್ಕಳ ತಾಲೂಕಿನ ಮೊಗೇರ ಹಾಗೂ ಗೊಂಡ ಸಮುದಾಯದವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ವಿರೋಧಿಸಿ ಭಟ್ಕಳ ದಲಿತ ಸಂಘಟನೆಗಳ ಪ್ರಮುಖರು ನಡೆಸುತ್ತಿದ್ದ ಧರಣಿ ೩ನೇ ದಿನಕ್ಕೆ ಕಾಲಿಟ್ಟಿದೆ.

ಜಾಲಿ ಪಟ್ಟಣ ಪಂಚಾಯತ ಚುನಾವಣೆ ಮೀಸಲು ಕ್ಷೇತ್ರದಲ್ಲಿ ಪರಿಶಿಷ್ಟರಲ್ಲದವರಿಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದಿರುವ ಧರಣಿನಿರತರು ಈ ಕುರಿತು ಆದೇಶ ಪ್ರಕಟಿಸುವಂತೆ ಆಗ್ರಹಿಸಿದರು. ದಲಿತ ಪ್ರಮುಖರ ಧರಣಿ ಮುಂದುವರೆಯುತ್ತಿದ್ದAತೆಯೇ ಸಂಜೆ ಸ್ಥಳಕ್ಕೆ ಸಿಬ್ಬಂದಿಗಳೊAದಿಗೆ ಬಂದ ಸಿಪಿಐ ದಿವಾಕರ, ವೈದ್ಯರ ಸೂಚನೆಯ ಮೇರೆಗೆ ದಲಿತ ಮುಖಂಡ ನಾರಾಯಣ ಶಿರೂರು ಅವರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆ ತಂದು ತಪಾಸಣೆ ನಡೆಸಿದರು. ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಶಿರೂರು ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಮತ್ತೆ ಧರಣಿ ಸ್ಥಳಕ್ಕೆ ತೆರಳುವುದಾಗಿ ನಾರಾಯಣ ಹಠ ಹಿಡಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜಾಲಿ ಪಟ್ಟಣ ಪಂಚಾಯತ ಅಭ್ಯರ್ಥಿ ಈಶ್ವರ ಮೊಗೇರ ಅವರ ಜಾತಿ ಪ್ರಮಾಣ ಪತ್ರ ರದ್ದುಪಡಿಸುವಂತೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಮಂಗಳವಾರ ಭಟ್ಕಳ ತಹಸೀಲ್ದಾರರಿಗೆ ಶಿಫಾರಸ್ಸು ಮಾಡಿದೆ. ಇದರ ವಿರುದ್ಧ ಈಶ್ವರ ಮೊಗೇರ ನ್ಯಾಯಾಲಯದ ಮೆಟ್ಟಿಲನ್ನು ಏರುವ ಸಾಧ್ಯತೆ ಇದೆ. ಆದರೆ ಜಾಲಿ ಪಟ್ಟಣ ಪಂಚಾಯತ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಾರ್ಯ ಈಗಾಗಲೇ ಮುಗಿದಿರುವುದರಿಂದ ಜಾತಿ ಪರಿಶೀಲನಾ ಸಮಿತಿಯ ಶಿಫಾರಸ್ಸಿನ ಮೇಲೆ ತಹಶೀಲ್ದಾರರು ಈಶ್ವರ ಮೊಗೇರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿದ್ದಾರೆ.

error: