March 13, 2025

Bhavana Tv

Its Your Channel

ತನ್ನ ಬಳಿ ತಿಮಿಂಗಲ ವಾಂತಿಯಿದೆ ಎಂದು ಹೇಳಿದ ಮುರ್ಡೇಶ್ವರದ ವ್ಯಕ್ತಿಯ ಬಂಧಿಸಿದ ಹುಬ್ಬಳ್ಳಿ ಪೊಲೀಸರು

ಭಟ್ಕಳ: ತನ್ನ ಬಳಿ ತಿಮಿಂಗಲ ವಾಂತಿಯಿದೆ. ಎಷ್ಟು ರೇಟ್‌ಗೆ ಪಡೆಯುತ್ತೀರಿ ಎಂದು ಮೊಬೈಲ್ ಮೂಲಕ ಕರೆ ಮಾಡಿದ ವ್ಯಕ್ತಿಯನ್ನು ಹುಬ್ಬಳ್ಳಿಯ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಮುರ್ಡೇಶ್ವರ ಸೋನಾರಕೇರಿ ಸಮೀಪದ ಗಣಪತಿ ಹರಿಕಂತ್ರ ಬಂಧಿತನಾದವ. ಈತ ಹುಬ್ಬಳ್ಳಿ ಮತ್ತು ವಿಜಯಪುರದ ಕೆಲವರಿಗೆ ಮೊಬೈಲ್‌ನಲ್ಲಿ ಸಂಪರ್ಕಿಸಿ ತನ್ನ ಬಳಿ ತಿಮಿಂಗಲವಾAತಿಯಿದೆ. ನೀವು ಖರೀದಿಸುವುದಾದರೆ ಹೇಳಿ, ಎಷ್ಟು ರೇಟು ನೀಡುತ್ತೀರಿ ಎಂದು ವಿಚಾರಿಸಿದ್ದಾನೆ. ಆದರೆ ಹುಬ್ಬಳ್ಳಿಯ ವ್ಯಕ್ತಿ ಈತ ಕರೆ ಮಾಡಿರುವ ಸಂಗತಿಯನ್ನು ಪೊಲೀಸರಿಗೆ ತಿಳಿಸಿದ್ದ ಹಿನ್ನಲೆಯಲ್ಲಿ ಬೆನ್ನತ್ತಿ ಬಂದ ಪೊಲೀಸರು ಗಣಪತಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಆತನ ಬಳಿ ೨-೩ ಕೇಜಿಯಷ್ಟು ತಿಮಿಂಗಲ ವಾಂತಿ ಇತ್ತೆಂದು ಹೇಳಲಾಗುತ್ತಿದೆ.
ತಿಮಿಂಗಲ ವಾಂತಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಸುಗಂಧ ದ್ರವ್ಯಕ್ಕೆ ಬಳಸಲಾಗುತ್ತಿರುವುದರಿಂದ ಇದನ್ನು ಕಳ್ಳ ಮಾರ್ಗದಲ್ಲಿ ಮಾರಾಟ ಮಾಡಲಾಗುತ್ತದೆ.

error: