
ಭಟ್ಕಳ : ಉತ್ತರಕನ್ನಡ ಜಿಲ್ಲೆಯಲ್ಲಿರುವ ಮೊಗೇರ ಸಮಾಜದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಪಿತೂರಿ ಖಂಡಿಸಿ ಭಟ್ಕಳ ಲಕ್ಷ್ಮೀಸರಸ್ವತಿ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ನಾಗರಿಕರು ಸಾಂಕೇತಿಕ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಮೊಗೇರ ಸಮಾಜದ ಜನರ ವಿರುದ್ಧ ಜರುಗಿಸುತ್ತಿರುವ ಕ್ರಮದ ವಿರುದ್ಧ ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ೧೯೭೮ ರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶ, ನಿರ್ದೇಶನಗಳ, ಅನುಗುಣವಾಗಿ ಉತ್ತರಕನ್ನಡ ಜಿಲ್ಲೆಯ ಮೊಗೇರ ಸಮುದಾಯದವರು ಪರಿಶಿಷ್ಟ ಜಾತಿಯ ಮೀಸಲಾತಿ ಪಡೆಯುತ್ತಿದ್ದಾರೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಸಲ್ಲದ ದೂರನ್ನು ಸಲ್ಲಿಸಿ ಸಮಾಜದ ಜನರಿಗೆ ವಿನಾಕಾರಣ ತೊಂದರೆ ತೊಡಕುಗಳನ್ನು ನೀಡುತ್ತಿದ್ದಾರೆಂದು ಸಮಾಜದ ಮುಖಂಡರು ಆಪಾದಿಸಿದ್ದಾರೆ.
ವಿರೋಧಿಗಳ ಕಿರುಕುಳದಿಂದ ಬೇಸತ್ತ ನಾವು ಈಗಾಗಲೇ ಕರ್ನಾಟಕದ ಗೌರವಾನ್ವಿತ ಉಚ್ಚನ್ಯಾಯಾಲಯ ಹಾಗೂ ಗೌರವಾನ್ವಿತ ಭಾರತದ ಸರ್ವೋಚ್ಛ ನ್ಯಾಯಾಲಯ, ಭಾರತಸರ್ಕಾರದ ಪರಿಶಿಷ್ಟಜಾತಿ ಹಾಗು ಪರಿಶಿಷ್ಟ ಪಂಗಡಗಳ ಆಯೋಗದಿಂದ ಸೂಕ್ತ ಆದೇಶ, ಹಾಗೂ ನಿರ್ದೇಶನಗಳು ನಮ್ಮ ಸಮಾಜದ ಪರವಾಗಿದೆ. ಹೀಗಿದ್ದಾಗಲೂ ನಮ್ಮ ಜನರಿಗೆ ಪುನಃ ಪುನಃ ಅನ್ಯಾಯವಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಸದ್ಯ ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿಗೆ ನಡೆಯುತ್ತಿರುವ ಚುನಾವಣೆಗೆ ಪರಿಶಿಷ್ಟ ಜಾತಿ ಮೀಸಲಾತಿಯಡಿಯಲ್ಲಿ ‘ಉಮೇದುವಾರಿಕೆಗೆ ಸಲ್ಲಿಸಿದ ನಮ್ಮ ಸಮಾಜದವರಿಗೆ ವಿನಾಕಾರಣ ತೊಂದರೆಯಾಗುವ ಹಾಗೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ತಪ್ಪು ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ. ನ್ಯಾಯಾಲಯದ ಅಂಶಗಳನ್ನು ಪರಿಗಣಿಸದೆ, ನಮ್ಮ ಸಮಾಜದ ಸದಸ್ಯರ ಜಾತಿ ಪ್ರಮಾಣ ಪತ್ರ ರದ್ದುಗೊಳಿಸುವ ತೀರ್ಮಾನ ತೆಗೆದುಕೊಳ್ಳಬಾರದು. ಜಿಲ್ಲಾಧಿಕಾರಿಗಳಾದ ತಾವು ಹಂಸಕ್ಷೀರ ನ್ಯಾಯದಂತೆ ಈ ತಕ್ಷಣದಿಂದಲೇ ಜಾರಿಗೆ ಬರುವಂತ, ನಮ್ಮ ಸಮಾಜದ ಅಭ್ಯರ್ಥಿಯ ಕುರಿತು ತೆಗೆದುಕೊಂಡಿರುವ ಜಾತಿ ಪ್ರಮಾಣಪತ್ರ ರದ್ದತಿ ತೀರ್ಮಾನವನ್ನು ಹಿಂಪಡೆಯುವoತೆ ವಿನಂತಿಸಿಕೊAಡಿದ್ದಾರೆ.
ಮೊಗೇರ ಸಮಾಜದ ಜನರಿಗಾದ ಅನ್ಯಾಯ ಹಾಗೂ ಅವಮಾನವನ್ನು ಪ್ರತಿಭಟಿಸಿ ಮುಂದಿನ ದಿನಗಳಲ್ಲಿ ಬೃಹತ್ ಪ್ರಮಾಣದಲ್ಲಿ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ