
ಭಟ್ಕಳ :- ಬೀನಾ ವೈದ್ಯ ಇಂಟರ್ ನ್ಯಾಶನಲ್ ಪಬ್ಲೀಕ್ ಸ್ಕೂಲಿನಲ್ಲಿ ಮಕ್ಕಳ ಮತ್ತು ಪಾಲಕರ ಸಮಾಲೋಚನಾ ಸಭೆ ನಡೆಯಿತು. ಸಭೆಯನ್ನು ಪುಷ್ಪಲತಾ ವೈದ್ಯ ಅವರು ಉದ್ಘಾಟಿಸಿದರು.
ಡಾ|| ಹರೀಶ್ ಮೊಗೇರ್, ಸವಿತಾ ಕಾಮತ್ ಮತ್ತು ಶಿಕ್ಷಕ ವೃಂದವು ಉಪಸ್ಥಿತರಿದ್ದರು. ಮಕ್ಕಳಿಗೆ ಎಷ್ಟನ್ನು ಬೋಧಿಸಬೇಕು ಮತ್ತು ಏನನ್ನು ಭೋಧಿಸಬೇಕು ಎನ್ನುವುದನ್ನು ಶ್ರೀಮತಿ ಸವಿತಾ ಕಾಮತ್ ಅವರು ಮಾರ್ಗದರ್ಶನ ಮಾಡಿದರು. ವಿಷಯ ಹೇಗೆ ನಿರ್ವಹಣೆ ಮಾಡುವುದು, ಪಠ್ಯಕ್ರಮ ಒಳನೋಟ ಸೆಳೆಯುವ ವಿಧಾನ, ಕಲಿಕಾ ವಿಷಯ ಮತ್ತು ಅದಕ್ಕೆ ನೀಡಬೇಕಾದ ಸಮಯ ಇದರ ಜೊತೆಗೆ ಏಕಾಗ್ರತೆ, ಒತ್ತಡ ನಿರ್ವಹಣೆ, ಸ್ಥಳೀಯ ಸಂಸ್ಕೃತಿಯ ಅಳಿವು ಉಳಿವಿನ ಬಗ್ಗೆ ಮಕ್ಕಳಿಗೆ ದಿಕ್ಸೂಚಿಯಂತೆ ಮಾರ್ಗದರ್ಶನ ಮಾಡಲಾಯಿತು. ವಿಶೇಷವಾಗಿ ಪರಿಣಿತರಾದ ಡಾ|| ಹರೀಶ್ ಮೊಗೇರ್ ಅವರು ಸಂಪನ್ಮೂಲಗಳ ಏಕೀಕರಣ, ಭಯ, ಅಸೂಹೆ, ನಿರಾಶಕ್ತಿ, ನಡವಳಿಕೆಯಲ್ಲಿ ಬದಲಾವಣೆ, ಹದಿಹರಯದ ಸಮಸ್ಯೆಗಳು, ಸೃಜನಶೀಲತೆ, ಅಪನಂಬಿಕೆ ಇವುಗಳ ಕುರಿತು ಅರಿವನ್ನು ಮೂಡಿಸುವುದರ ಜೊತೆಗೆ ಇದನ್ನು ಹೇಗೆ ಎದುರಿಸಬೇಕು ಎಂದು ಮಾರ್ಗದರ್ಶನ ನೀಡಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ