May 3, 2024

Bhavana Tv

Its Your Channel

ಫೆಬ್ರವರಿ 6 ರವಿವಾರದಂದು ಭಟ್ಕಳದ ಶ್ರೀ ಶ್ರೀಧರ ಪದ್ಮಾವತಿ ದೇವಿಯ ಪಲ್ಲಕ್ಕಿ ಉತ್ಸವ.

ಭಟ್ಕಳ ತಾಲೂಕಿನ ದೇವಿ ದೇವಸ್ಥಾನಗಳೊಂದಾದ ಶ್ರೀ ತಿಮ್ಮಯ್ಯದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಶ್ರೀ ಶ್ರೀಧರ ಪದ್ಮಾವತಿ ದೇವಿ ದೇವಸ್ಥಾನದಲ್ಲಿ ಫೆಬ್ರವರಿ 6ನೇ ತಾರೀಖಿನ ರವಿವಾರದಂದು ಶ್ರಿ ಶ್ರೀಧರ ಪದ್ಮಾವತಿದೇವಿಯ ಪಲ್ಲಕ್ಕಿ ಉತ್ಸವವು ನಡಯಲಿದೆ. ಆ ದಿನ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಮಧ್ಯಾಹ್ನ ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ಪದ್ಮಾವತಿದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ನಡೆಯಲಿದೆ. ಮೆರವಣಿಗೆಯು ದೇವಾಲಯದಿಂದ ಹೊರಟು, ರಘುನಾಥರಸ್ತೆಯ ಮಾರ್ಗವಾಗಿ ಪುಷ್ಪಾಂಜಲಿ ಚಿತ್ರಮಂದಿರದವರೆಗೆ ಹೋಗಿ ಅಲ್ಲಿಂದ ಹಿಂದಿರುಗಿ, ವೀರವಿಠ್ಠಲ ರಸ್ತೆಯ ಮಾರ್ಗವಾಗಿ ವಡೇರಮಠದ ಮೂಲಕ ನೆಹರುರಸ್ತೆ ಅಲ್ಲಿಂದ ಹೂವಿನ ಚೌಕ, ಮುಖ್ಯರಸ್ತೆಯ ಮೂಲಕ ಮಾರಿಗುಡಿಯ ಬಳಿಯ ಜೈನ ಬಸದಿಯ ಎದುರಿನರಸ್ತೆಯ ಮೂಲಕ ಆಸರಕೇರಿಯನ್ನು ಪ್ರವೇಶಿಸಿ, ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಾಲಯತಲುಪಿ ಅಲ್ಲಿಂದ ಸೊನಾರಕೇರಿಯ ಮೂಲಕ ಶಹರ ಪೋಲೀಶ ಠಾಣೆಯಲ್ಲಿ ಪೂಜೆ ಸ್ವೀಕರಿಸಿ ಮುಖ್ಯರಸ್ತೆಯ ಮೂಲಕ ಹಳೆಬಸ್ ನಿಲ್ದಾಣ ಅಲ್ಲಿಂದ ಕಳಿ ಹನುಮಂತರಸ್ತೆಯ ಮೂಲಕ ದೇವಾಲಯವನ್ನು ತಲುಪಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಎಲ್ಲ ಭಕ್ತಾದಿಗಳು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಬೇಕಾಗಿ ದೇವಾಲಯದ ಧರ್ಮದರ್ಶಿಗಳು ಕೋರಿದ್ದಾರೆ.

error: