March 12, 2025

Bhavana Tv

Its Your Channel

ನೇತ್ರಾಣಿ ಗುಡ್ಡದ ಸಮೀಪ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಭಟ್ಕಳ: ಅರಬ್ಬೀ ಸಮುದ್ರದಲ್ಲಿ ಭಟ್ಕಳದಿಂದ ಸುಮಾರು 22 ನಾಟಿಕಲ್ ದೂರದ ನೇತ್ರಾಣಿ ಗುಡ್ಡದ ಸಮೀಪ ಪುರುಷನ ಶವವೊಂದು ತೇಲುತ್ತಿರುವುದನ್ನು ಕಂಡ ಮೀನುಗಾರರು ಮುರ್ಡೇಶ್ವರ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದು ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ ಎನ್ನಲಾಗಿದೆ.

ಸುಮಾರು 30 ರಿಂದ 40 ವರ್ಷದ ಗಂಡಸಿನ ಶವ ಎಂದು ಅಂದಾಜಿಸಲಾಗಿದ್ದು ಮೃತ ಪಟ್ಟು ಸುಮಾರು 3-4 ದಿನಗಳಾಗಿರಬಹುದು ಎಂದು ತಿಳಿಯಲಾಗಿದೆ. ಕೊಳೆತ ಸ್ಥಿತಿಯಲ್ಲಿರುವ ಶವವನ್ನು ಜಲಚರಗಳು ತಿಂದು ಹಾಕಿದ್ದು ಗುರುತು ಪತ್ತೆಯಾಗದ ಸ್ಥಿತಿ ತಲುಪಿತ್ತು. ಯಾವುದೋ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುತ್ತಿರುವಾತ ನೀರಿಗೆ ಬಿದ್ದು ಮೃತ ಪಟ್ಟಿರಬೇಕೆಂದು ಶಂಕಿಸಲಾಗಿದ್ದರೂ ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ. ವ್ಯಕ್ತಿಯು ಯಾವುದೋ ಬೋಟಿನಲ್ಲಿ ಹೋಗಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ, ಮೀನುಗಾರಿಕಾ ಬೋಟಿನಲ್ಲಿ ರಾತ್ರಿ ಹೊತ್ತು ಬಿದ್ದು ಮೃತ ಪಟ್ಟಿದ್ದು ಬೋಟಿನವರಿಗೆ ತಿಳಿಯಲಿಲ್ಲವೇ ಎನ್ನುವುದನ್ನು ತನಿಖೆಯಿಂದ ಪತ್ತೆ ಮಾಡಬೇಕಾಗಿದೆ.

error: