March 12, 2025

Bhavana Tv

Its Your Channel

ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹಿಸಿ ಭಟ್ಕಳ ಹಿಂದೂ ಜಾಗರಣಾ ವೇದಿಕೆ ನೇತ್ರತ್ವದಲ್ಲಿ ಮನವಿ

ಭಟ್ಕಳ: ಶಿವಮೊಗ್ಗ ಜಿಲ್ಲೆಯ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಅವರನ್ನು ನಡುರಸ್ತೆಯಲ್ಲಿ ದಾರುಣವಾಗಿ ಕೊಲೆಗೈದ ಕೊಲೆಗಡುಕರ ಮೇಲೆ ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹಿಸಿ ಭಟ್ಕಳ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಭಟ್ಕಳ ಹಿಂದೂ ಜಾಗರಣಾ ವೇದಿಕೆ ನೇತ್ರತ್ವದಲ್ಲಿ, ಹಿಂದು ಪರಿಷತ್ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹಿಂದೂಪರ ಸಂಘಟನೆಯ ಕಾರ್ಯಕರ್ತನಾಗಿದ್ದು ಹಲವಾರು ಹಿಂದೂ ಪರ ಹೋರಾಟ ಹಾಗೂ ಗೋ ರಕ್ಷಣೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಬಂದಿರುವAತಹ ೨೬ ವರ್ಷದ ವಯಸ್ಸಿನ ಹರ್ಷ ಎನ್ನುವ ಹಿಂದೂ ಕಾರ್ಯಕರ್ತನನ್ನು ಫೆ. ೨೦ ರವಿವಾರ ರಾತ್ರಿ ೯ ೩೦ ಗಂಟೆಗೆ ಮುಸ್ಲಿಂ ಮತಾಂಧ ಗೂಂಡಾಗಳು ಗುಂಪಿನಲ್ಲಿ ಬಂದು ಮಾರಕಾಸ್ತ್ರಗಳಿಂದ ನಡುರಸ್ತೆಯಲ್ಲಿ ಬಹಿರಂಗವಾಗಿ ಕೊಲೆ ಮಾಡಿರುವುದು ನಿಜವಾಗಿಯು ನಾಗರಿಕ ಸಮಾಜವು ದಿಗ್ಬ್ರಮೆಗೊಳ್ಳುವಂತೆ ಮಾಡಿರುವದಲ್ಲದೇ ಈ ಘಟನೆಯನ್ನು ಹಿಂದು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಸಂಚನ್ನು ರೂಪಿಸಿ ಕೊಲೆಗೈಯುವ ಮೂಲಕ ವ್ಯವಸ್ಥಿತವಾಗಿ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಷಡ್ಯಂತ್ರವನ್ನು ಪಟ್ಟಬದ್ಧ ಮತಾಂಧ ಮುಸ್ಲಿಂ ಸಂಘಟನೆಗಳು ಮಾಡುತ್ತಾ ಬಂದಿದ್ದು ಹಲವು ಪ್ರಕರಣಗಳಲ್ಲಿ ಇದು ಸಾಬೀತಾಗಿದ್ದರೂ ಸಹ ಅವರ ಮೇಲೆ ಪರಿಣಾಮಕಾರಿಯಾದ ಕಠಿಣ ಕಾನೂನು ಕ್ರಮ ಜರುಗಿಸದೇ ಇರುವುದು ನಿರಂತರ ಹಿಂದೂ ಕಾರ್ಯಕರ್ತರ ಕಗ್ಗೊಲೆ ಕಾರಣವಾಗಿದೆ.

ಕೇರಳದಲ್ಲಿ ಎಸ್‌ಡಿಪಿಐ ಹಾಗೂ ಪಿಎಫ್‌ಐ ನಂತಹ ಮುಸ್ಲಿಂ ಮತಾಂಧ ದೇಶದ್ರೋಹಿ ಸಂಘಟನೆಗಳು ಹಿಂದೂ ಕಾರ್ಯಕರ್ತರ ಈ ರೀತಿಯ ಕೊಲೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಮುಂದುವರಿಸಿದ್ದು ಈಗಾಗಲೇ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಉದ್ದೇಶದಿಂದ ವ್ಯವಸ್ಥಿತವಾಗಿ ಹಲವು ಹಿಂದೂ ಕಾರ್ಯಕರ್ತರನ್ನು ಕರ್ನಾಟಕದ ಹಲವು ಭಾಗಗಳಲ್ಲಿ ದಾರುಣವಾಗಿ ಕೊಲೆಗೈದಿರುವುದು ಗಮನಕ್ಕಿದ್ದರೂ ಸಹ ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಅಂತಹ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವಲ್ಲಿ ವಿಫಲವಾಗುತ್ತಿರುವುದು ಇನ್ನಷ್ಟು ಹಿಂದೂ ಕಾರ್ಯಕರ್ತರ ಕಗ್ಗೊಲೆಗೆ ಕುಮ್ಮಕ್ಕು ನೀಡಿದಂತಾಗಿದೆ.

ಮುಸ್ಲಿA ಮತಾಂಧ ಕೊಲೆಗಡುಕರು ಹಾಗು ಗೂಂಡಾಗಳಿAದ ತುಂಬಿದ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದಾಗಿನಿAದ ಅವರ ದಕ್ಷ ಹಾಗೂ ನೇರ ಕ್ರಮದ ಆಡಳಿತದಿಂದಾಗಿ, ವಿರೋಧಿಗಳಿಗೆ ಯಾವುದೇ ಟೀಕೆ ಟಿಪ್ಪಣಿಗಳಿಗೆ ಜಗ್ಗದೇ ಮುಸ್ಲಿಂ ಮತಾಂಧ ಕೊಲೆಗಡುಕರು ಹಾಗೂ ಗೂಂಡಾಗಳ ಮೇಲೆ ನಿರ್ದಾಕ್ಷಿಣ್ಯ ನೇರ ಕಠಿಣ ಕ್ರಮ ಕೈಗೊಂಡು ಅವರನ್ನು ಹುಡುಕಿ ಬುಡಸಮೇತ ಕಿತ್ತು ಹಾಕಿದ್ದರ ಪರಿಣಾಮವಾಗಿ ಇಂತಹ ಗೂಂಡಾ ಹಾಗೂ ಮತಾಂಧ ಪ್ರವೃತ್ತಿಯ ಕೊಲೆಗಡುಕರು ಮಣ್ಣಲ್ಲಿ ಮಣ್ಣಾಗಿರುವುದು ಸುಶಾಸನ ಭರಿತ ಆಡಳಿತ ವ್ಯವಸ್ಥೆಯ ದಕ್ಷತೆಯನ್ನು ಎತ್ತಿತೋರಿಸುತ್ತಿದೆ. ನೇರ ಹಾಗೂ ಕಠಿಣ ಕ್ರಮದ ಪರಿಣಾಮವಾಗಿ ಇಂದಿನ ದಿನಗಳಲ್ಲಿ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತಾಂಧ ಶಕ್ತಿಗಳು ಹಾಗೂ ಕೊಲೆಗಡುಕರು ಹಾಗೂ ಹಿಂದೂ ಕಾರ್ಯಕರ್ತರನ್ನು ಹಾಗೂ ಅಮಾಯಕರನ್ನು ಕೊಲೆಗೈಯ್ಯಲು ಸಾವಿರ ಬಾರಿ ಯೋಚಿಸುವಂತೆ ಮಾಡಿದೆ.

ಆದ್ದರಿಂದ ಸರ್ಕಾರವು ಸಹ ಉತ್ತರ ಪ್ರದೇಶದ ಮಾದರಿಯಲ್ಲಿ ದುಷ್ಟ ಮತಾಂಧ ಶಕ್ತಿ ಹಾಗೂ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವುದರ ಜೊತೆಗೆ ಕೊಲೆಗಡುಕರನ್ನು ನೇರ ಹಾಗೂ ನಿರ್ದಾಕ್ಷಿಣ್ಯ ಕ್ರಮದ ಮೂಲಕ ಅವರನ್ನು ಹತ್ತಿಕ್ಕಿ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಹಿಂದೂ ಕಾರ್ಯಕರ್ತರ ಹಾಗೂ ಅಮಾಯಕರ ಕಗ್ಗೊಲೆ ಆಗದಂತೆ ನೋಡಿಕೊಳ್ಳುವಂತೆ ಭಟ್ಕಳದ ಎಲ್ಲ ಹಿಂದೂ ಸಂಘಟನೆಗಳ ಪರವಾಗಿ ಒಕ್ಕೊರಲಾಗಿ ಆಗ್ರಹಿಸಿದರು ಒಂದೊಮ್ಮೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಹಿಂದೂಪರ ಕಾರ್ಯಕರ್ತರಿಂದ ವ್ಯತಿರಿಕ್ತ ಪರಿಣಾಮ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಧರ್ಭದಲ್ಲಿ ಹಿಂದು ಜಾಗರಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಗವಾಳಿ, ತಾಲೂಕೂ ಅಧ್ಯಕ್ಷ ವಾಸು ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ವಿಶ್ವ ಹಿಂದು ಪರಿಷತ್ ಪ್ರಮುಖ ಶಂಕರ ಶೆಟ್ಟಿ, ರಾಮಕೃಷ್ಣ ನಾಯ್ಕ, ಬಿಜೆಪಿ ತಾಲುಕಾಧ್ಯಕ್ಷ ಸುಬ್ರಾಯ ದೇವಾಡಿಗ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶಿವಾನಿ ಶಾಂತಾರಾಮ, ತಾಲೂಕಾ ಬಿಜೆಪಿ ಪ್ರಮುಖವಾಗಿ ಕ್ರಷ್ಣ ನಾಯ್ಕ ಆಸರಕೇರಿ, ರವಿ ನಾಯ್ಕ ಜಾಲಿ, ಮೋಹನ ಕೆ. ನಾಯ್ಕ, ಭಾಸ್ಕರ ದೈಮನೆ, ಶ್ರೀಕಾಂತ ನಾಯ್ಕ ಮುಂತಾದವರು ಇದ್ದರು.

error: