May 19, 2024

Bhavana Tv

Its Your Channel

ಹೊಗೆವಡ್ಡಿಯ ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವ ಮಾರ್ಚ 10 ರಿಂದ 12 ರವರೆಗೆ

ಭಟ್ಕಳ: ತಾಲೂಕಿನ ಗಡಿ ಭಾಗದಲ್ಲಿರುವ ಹೊಗೆವಡ್ಡಿಯ ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವ ಮಾರ್ಚ 10 ರಿಂದ 12 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಅನಂತ ನಾಯ್ಕ ,ಉಗ್ರಾಣಿಮನೆ ಭಟ್ಕಳ ತಿಳಿಸಿದ್ದಾರೆ.

ಮಾರ್ಚ 10 ಗುರುವಾರದಂದು ಬೆಳಿಗ್ಗೆ 8 ಗಂಟೆಯಿAದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ 7 ಗಂಟೆಗೆ ದೀಪೋತ್ಸವ ಹಾಗೂ ರಾತ್ರಿ 8-30ಕ್ಕೆ ಸಾಂಸ್ಕçತಿಕ ಕಾರ್ಯಕ್ರಮ ನೆರವೇರಲಿದೆ. ಮಾರ್ಚ 11 ಶುಕ್ರವಾರದಂದು ಬೆಳಿಗ್ಗೆ 7 ಗಂಟೆಯಿAದ ಶ್ರೀ ದೇವರಿಗೆ ಸಾರ್ವತ್ರಿಕ ಅಭಿಷೇಕ ನಂತರ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ ನಂತರ ಮಧ್ಯಾಹ್ನ ಅನ್ನಸಂತರ್ಪಣೆ , ಮಧ್ಯಾಹ್ನ 3 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಸಂಜೆ 7 ಗಂಟೆಗೆ ದೀಪೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ 9-30 ರಿಂದ ಶ್ರೀ ಸಂತೋಷ ಡಿ.ಜೆ. ಇವರ ಸಾರಥ್ಯದಲ್ಲಿ ರಾಷ್ಟçಮಟ್ಟದ ಯೋಗ ಪಟುಗಳಿಂದ ಯೋಗ ಪ್ರದರ್ಶನ, ಗಾನ ಲಹರಿ ,ಹಾಗೂ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಮಾರ್ಚ 12 ಶನಿವಾರದಂದು ಬೆಳಿಗ್ಗೆ 8 ಗಂಟೆಯಿAದ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಹಾಪೂಜೆ ನಂತರ ಮಧ್ಯಾಹ್ನ ಅನ್ನಸಂತರ್ಪಣೆ
ಸಂಜೆ 4 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ದೀಪೋತ್ಸವ ರಾತ್ರಿ 7 ರಿಂದ ಗೋವರ್ಧನ ಭಟ್ಕಳ ಇವರ ಸಾರಥ್ಯದಲ್ಲಿ ಕರಾವಳಿಯ ನುರಿತ ಕಲಾವಿದರಿಂದ ಡಾನ್ಸ ಹಾಗೂ ರಸಮಂಜರಿ ಕಾರ್ಯಕ್ರಮ ರಾತ್ರಿ 10-30 ಕ್ಕೆ ಶ್ರೀ ಕೊಟೆ ವೀರಾಂಜನೇಯ ಯಕ್ಷ ಮಿತ್ರ ಬಳಗದವರಿಂದ ” ದೇವಿ ಮಹಾತ್ಮೆ ” ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಅನಂತ ನಾಯ್ಕ ,ಉಗ್ರಾಣಿಮನೆ ಭಟ್ಕಳ ಮಾಧ್ಯಮಕ್ಕೆ ತಿಳಿಸಿದ್ದಾರೆ.

error: