March 12, 2025

Bhavana Tv

Its Your Channel

ಭಟ್ಕಳ ನೂತನ ಪ್ರಭಾರ ತಹಶೀಲ್ದಾರರಾಗಿ ಅಶೋಕ ಭಟ್ ನೇಮಕ

ಭಟ್ಕಳ: ನೂತನ ತಹಸೀಲ್ದಾರರಾಗಿ ಕುಮಟಾ ಎಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ ಭಟ್ ಫೆ.25ರಂದು ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ತಹಸೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್ ರವಿಚಂದ್ರ ಅವರನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಅಶೋಕ ಭಟ್ ಅವರನ್ನು ಪ್ರಭಾರ ತಹಸೀಲ್ದಾರರನ್ನಾಗಿ ಜಿಲ್ಲಾಧಿಕಾರಿಗಳು ನಿಯೋಜಿಸಿದ್ದಾರೆ. ಅಶೋಕ ಭಟ್ ಹತ್ತು ವರ್ಷಗಳ ಹಿಂದೆ ಭಟ್ಕಳ ಎಸಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಪ್ರಾಮಾಣಿಕ ಕಾರ್ಯಗಳಿಂದ ಜನಮನ್ನಣೆ ಪಡೆದಿದ್ದರು. 4ನೇ ಶನಿವಾರದ ಹಿನ್ನಲೆಯಲ್ಲಿ ಕಚೇರಿಗೆ ರಜೆ ಇದ್ದರೂ ಸಿಬ್ಬಂದಿಯನ್ನು ಕಚೇರಿಗೆ ಕರೆಯಿಸಿ ಶನಿವಾರ ಪಹಣಿ ಪತ್ರಿಕೆಯ ಕಾರ್ಯಗಾರ ನಡೆಸಿದ್ದಾರೆ.

error: