May 19, 2024

Bhavana Tv

Its Your Channel

ಮುದ್ದೆಬೆಲ್ಲ ಮತ್ತು ಜಗಬೆಲ್ಲಗಳ ನೇರ ಮಾರುಕಟ್ಟೆ ಸಂಪರ್ಕ ಕಾರ್ಯಕ್ರಮ

ಭಟ್ಕಳ: ಕರ್ನಾಟಕ ಸರ್ಕಾರ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಉತ್ತರ ಕನ್ನಡ ಹಾಗೂ ಸ್ಕೊಡ್‌ವೆಸ್ ಸಂಸ್ಥೆ, ಶಿರಸಿ ಸಹಯೋಗದಲ್ಲಿ ರಚಿತವಾದ ಭಟ್ಕಳ ತಾಲೂಕಿನ ಮಾವಳ್ಳಿ ರೈತ ಉತ್ಪಾದಕ ಕಂಪನಿ, ವತಿಯಿಂದ ಮುದ್ದೆಬೆಲ್ಲ ಮತ್ತು ಜಗಬೆಲ್ಲಗಳ ನೇರ ಮಾರುಕಟ್ಟೆ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಸಾಯನಿಕ ರಹಿತ, ತೇವಾಂಶ ರಹಿತ ಹಾಗೂ ವಾಣಿಜ್ಯ ಬೆಳೆ ಮತ್ತು ಆಹಾರ ಬೆಳೆಯಾದ ಮುದ್ದೆಬೆಲ್ಲದ ತಯಾರಿಕೆ ಕುರಿತಂತೆ ತರಬೇತಿ ನಡೆಸಲಾಯಿತು. ಅನುಭವಿಗಳು, ವನವಾಸಿ ಕಲ್ಯಾಣ ಸಂಘ(ರಿ)ದ ಅಧ್ಯಕ್ಷರಾದ ರಾಮಚಂದ್ರರವರು ಮಾತನಾಡುತ್ತಾ ವಿವಿಧ ವಿಧಾನಗಳ ಮೂಲಕ ಪಾಕ ತಯಾರಿಸುವಿಕೆ, ಹದ ಗೊಳಿಸುವುದರ ಬಗ್ಗೆ ಮಾಹಿತಿ ನೀಡಿದರು. ಕಬ್ಬಿನ ಉತ್ಪನ್ನಗಳಿಗೆ ಮೌಲ್ಯ ವರ್ಧಿಸುವುದರ ಮೂಲಕ ನೇರ ಮಾರುಕಟ್ಟೆ ಸಂಪರ್ಕ ಸಾಧಿಸಿ ಹೆಚ್ಚಿನ ಬೆಲೆಯನ್ನು ಕಂಪನಿ ಮೂಲಕ ರೈತರಿಗೆ ನೀಡಲು ಮಾವಳ್ಳಿ ರೈತ ಉತ್ಪನ್ನ ಕಂಪನಿಯಲ್ಲಿ ವಿನಂತಿಸಿಕೊAಡರು.
ಮಾವಳ್ಳಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ವಿಷ್ಣುಮೂರ್ತಿ ಹೆಗಡೆಯವರು ಮಾತನಾಡುತ್ತಾ ಕಂಪನಿ ರಚನೆಯ ಗುರಿ ಮತ್ತು ಉದ್ದೇಶಗಳನ್ನು ತಿಳಿಸಿ ಹೆಚ್ಚು ಹೆಚ್ಚು ರೈತ ಸದಸ್ಯರು ಕಂಪನಿಯ ಷೇರು ಹೊಂದುವುದರ ಮೂಲಕ ಯೋಜನೆಯ ಪ್ರಯೋಜನವನ್ನು ಪಡೆದು ಕೃಷಿಯಲ್ಲಿ ತಂತ್ರಜ್ಞಾನದ ಅಳವಡಿಕೆ, ಮಾರುಕಟ್ಟೆ ಸಂಪರ್ಕ ಹಾಗೂ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಸಿ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ವಿವರಿಸಿದರು.
ಈ ಸಭೆಯಲ್ಲಿ ನಿರ್ದೇಶಕರುಗಳಾದ ಕೃಷ್ಣ ನಾಯ್ಕ, ನಾರಾಯಣ ಭಟ್, ವಿಷ್ಣು ದೇವಾಡಿಗ, ಈರಪ್ಪಾ ನಾಯ್ಕ, ಗಣಪತಿ ಮರಾಠಿ, ಗಿರೀಶ್ ಗೊಂಡ, ಗಣಪತಿ ದೇವಾಡಿಗ, ನಬಾರ್ಡ್ ಪ್ರತಿನಿಧಿಗಳು, ಸ್ಕೊಡ್‌ವೆಸ್ ಸಂಸ್ಥೆಯ ಯೋಜನಾ ಸಂಯೋಜಕರು, ಕ್ಷೇತ್ರಾಧಿಕಾರಿ, ಸ್ಕೊಡ್‌ವೆಸ್ ಸಂಸ್ಥೆಯ ಸಿಬ್ಬಂಧಿಗಳು ಹಾಗೂ ಸ್ಥಳಿಯ ನಾಗರಿಕರು ಉಪಸ್ಥಿತರಿದ್ದರು.

error: