
ಭಟ್ಕಳ ರಂಜನ್ ಇಂಡಿಯನ್ ಏಜೆನ್ಸಿ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆಯೇ ಈ ವರ್ಷವೂ ಕೂಡ ಸತತ ೧೨ನೇ ವರ್ಷದ ಪಾದಯಾತ್ರೆಯೂ ಮಂಗಳವಾರದAದು ಸಹಸ್ರಾರು ಭಕ್ತರನ್ನೊಳಗೊಂಡAತೆ ನಡೆಯಿತು.
ನಸುಕಿನ ಜಾವ ೪ ಗಂಟೆಗೆ ಇಲ್ಲಿನ ಪಟ್ಟಣದ ಚೋಳೇಶ್ವರ ದೇವಸ್ಥಾನದಿಂದ ದೇವರ ದರ್ಶನ ಪಡೆದ ಪಾದಯಾತ್ರೆ ಕೈಗೊಳ್ಳುವ ಭಕ್ತರು ಅಲ್ಲಿಂದ ಮಾರಿಗುಡಿ ದೇವಸ್ಥಾನ, ಪೇಟೆ ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ ಹೆದ್ದಾರಿ ಮಾರ್ಗವಾಗಿ ಬಸ್ತಿಯ ಮೂಲಕ ಮುರ್ಡೇಶ್ವರದ ದೇವಸ್ಥಾನಕ್ಕೆ ತಲುಪಲಿದರು. ದೇವರ ದರ್ಶನಕ್ಕೂ ಪೂರ್ವದಲ್ಲಿ ಸಮುದ್ರ ಸ್ನಾನ ಕೈಗೊಂಡ ಭಕ್ತರು ಮುಂಜಾನೆ ನಸುಕಿನಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ದೇವರ ದರ್ಶನ ಪಡೆದುಕೊಂಡರು.
ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತಾದಿಗಳು ಬರಿ ಕಾಲಿನಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಶಿವ ನಾಮಸ್ಮರಣೆಗಳು, ಶಿವ ಸ್ತುತಿಯೊಂದಿಗೆ ಜಯಘೋಷ ಕೂಗುತ್ತಾ ಪುರುಷರು ಪಂಚೆ ಶಾಲು ಹಾಗೂ ಮಹಿಳೆಯರು ವಿಶೇಷ ಸೀರೆಯನ್ನು ಧರಿಸಿ ಯಾತ್ರೆಯಲ್ಲಿ ಸಾಗಿ ಬಂದಿದ್ದು ವಿಶೇಷವಾಗಿತ್ತು. ಹಾಗೂ ಪುಟಾಣಿ ಮಕ್ಕಳು ಕಂಡು ಬಂದಿರುದು ವಿಶೇಷವೆನಿಸಿತು.
ರಂಜನ್ ಇಂಡೇನ್ ಎಜೆನ್ಸಿ ಮಾಲಕರಾದ ಶಿವಾನಿ ಶಾಂತಾರಾಮ ಭಟ್ಕಳ, ಶಾಂತಾರಾಮ ಭಟ್ಕಳ ಇವರ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊAಡಿದ್ದು, ಯಾತ್ರೆಯಲ್ಲಿ ಪಾಲ್ಗೊಂಡ ಯಾತ್ರಿಗಳಿಗೆ ಪಾದಯಾತ್ರೆಯ ಬಳಿಕ ಲಘು ಉಪಹಾರ ಮತ್ತು ವಾಹನ ವ್ಯವಸ್ಥೆ ಮಾಡಲಾಗಿತ್ತು. ಸರಿ ಸುಮಾರು ೧೫-೧೮ ಕಿ.ಮೀ. ತನಕ ಭಟ್ಕಳದಿಂದ ಮುರ್ಡೇಶ್ವರದ ತನಕ ಪಾದಯಾತ್ರೆಯೂ ಪ್ರತಿ ವರ್ಷ ನಡೆಯುತ್ತಿರುವುದು ವಿಶೇಷವೇ ಸರಿ. ತಾಲೂಕಿನ ವಿವಿಧ ಗ್ರಾಮೀಣ ಹಾಗೂ ನಗರ ಭಾಗದ ಸಾರ್ವಜನಿಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿ ನಾಲ್ಕು ಕಿ.ಮೀ.ಗೆ ಕುಡಿಯುವ ನೀರು, ಹಣ್ಣು, ಹಂಪಲು, ಡ್ರೈ ಪ್ರೂಟ್ಸಗಳನ್ನು ಯಾತ್ರಿಗಳಿಗೆ ವಿತರಿಸಲಾಯಿತು. ದಾರಿಯೂದಕ್ಕೂ ಎರಡು ಪೊಲೀಸ ವಾಹನ ಹಾಗೂ ಒಂದು ಅಂಬುಲೆನ್ಸ ಸೇವೆಯನ್ನು ಯಾತ್ರಿಗಳಿಗಾಗಿ ತುರ್ತು ವ್ಯವಸ್ಥೆಗೆ ನಿಯೋಜಿಸಲಾಗಿತ್ತು.
ವಿಶೇಷವೆನೆಂದರೆ ಪ್ರತಿ ವರ್ಷಕ್ಕಿಂತ ಈ ವರ್ಷದ ಪಾದಯಾತ್ರೆಗೆ ಬರುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದ್ದು ಈ ಬಾರಿ ಸರಿ ಸುಮಾರು ೩೫೦೦ ರಿಂದ ೪೦೦೦ ಕ್ಕೂ ಅಧಿಕ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಸಿ.ಪಿ.ಐ ದಿವಾಕರ ನೇತೃತ್ವದ ಪಿ.ಎಸ್.ಐ ಕುಡಗುಂಟಿ, ಮುರ್ಡೇಶ್ವರ ಹಾಗು ಸಿಬ್ಬಂದಿಗಳು ಯಾತ್ರಿಯುದ್ದಕ್ಕೂ ಸೂಕ್ತ ಭದ್ರತೆ ಒದಗಿಸಿದ್ದು
ಸಿ.ಪಿ.ಐ ದಿವಾಕರ ಹಾಗೂ ಪಿ.ಎಸ್.ಐ ಕುಡಗುಂಟಿ ಸೇರಿ ದಂತೆ ಪೊಲೀಸ ಇಲಾಖೆ ಸಿಬ್ಬಂದಿಗಳು ಕೂಡ ಭಟ್ಕಳದಿಂದ ಮುರುಡೇಶ್ವ ತನಕ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು
ಇದೆ ವೇಳೆ ಪಾದಯಾತ್ರೆಯಲ್ಲಿ ಪಾಲ್ಗೊಂಡ ಯಾತ್ರಿಗಳಿಗೆ ಪುನಃ ಮರಳಿ ಭಟ್ಕಳಕ್ಕೆ ಬರಲು ಬಸ್ ವ್ಯವಸ್ಥೆ ಮಾಡಲಾಗಿತ್ತು.ಹಾಗೂ ಇದಕ್ಕೂ ಪೂರ್ವದಲ್ಲಿ ಆಸರಕೇರಿಯ ಕ್ರಿಯಾಶೀಲ ಗೆಳಯರ ಬಳಗದಿಂದ ಯಾತ್ರಿಗಳಿಗೆ ಶಿರಾಳಿಯಲ್ಲಿ ತಂಪು ಪಾನೀಯ ಗಳನ್ನು ವಿತರಿಸಿದರು
ನಂತರ ಮಾತನಾಡಿದ ರಂಜನ್ ಇಂಡೇನ್ ಎಜೆನ್ಸಿ ಮಾಲಕಿ. ಶಿವಾನಿ ಶಾಂತಾರಾಮ ಸತತ ೧೨ವರ್ಷದಿಂದ ಪಾದಯಾತ್ರೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಎಲ್ಲರ ಸಹಕಾರದಿಂದ ೧೨ನೇ ವರ್ಷ ಪೂರೈಸಿದ ನಾವು ದೈವ ನಂಬಿಕೆಯ ಜೊತೆಗೆ ಹಬ್ಬದ ಸಂಭ್ರಮವನ್ನು ಎಲ್ಲರು ಸೇರಿ ಆಚರಿಸಬೇಕೆಂಬುವುದು ನಮ್ಮದಾಗಿದೆ. ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದ ಎಲ್ಲಾ ಯಾತ್ರಿಗಳಿಗೂ, ಪೊಲೀಸ ಇಲಾಖೆಗೂ, ಆರೋಗ್ಯ ಇಲಾಖೆಗೂ ಧನ್ಯವಾದ ತಿಳಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ