May 4, 2024

Bhavana Tv

Its Your Channel

“ಹೂನ್ ಸಿತ ತೀಕ ಆಂಬಟ್” ಜಿಎಸ್‌ಬಿ ಸಮಾಜದವರಿಗಾಗಿ ನಡೆದ ವಿಶಿಷ್ಟ ಕಾರ್ಯಕ್ರಮ

ಭಟ್ಕಳ: ಸಮಾಜದ ಎಲ್ಲರಲ್ಲೂ ಒಂದೆ ಎನ್ನುವ ಭಾವನೆ ಇರಬೇಕು. ದುಬಾರಿ ಖಾದ್ಯಗಳನ್ನು ಎಲ್ಲರೊಂದಿಗೆ ಹಂಚಿಕೊAಡು ತಿನ್ನಬೇಕು ಎನ್ನುವ ಉದ್ದೇಶದಿಂದ “ಹೂನ ಸೀತ ತೀಕ ಆಂಬಟ್” ಎನ್ನುವ ಕಲ್ಪನೆಯನ್ನು ಕೆಲವು ವರ್ಷದ ಹಿಂದೆ ಸಮಾಜದ ಹಿರಿಯ ಕೃಷ್ಣ ಮೂರ್ತಿ ನಾಯಕ ತಂದಿದ್ದು, ಇಂದು ಒಂದೇ ಸಮಾರಂಭದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟಮಾಡುವಂತಾಗಿದೆ ಎಂದು ಜಿಎಸ್‌ಬಿ ಸಮಾಜದ ಪ್ರಮುಖ ಅಚ್ಯುತ್ ಕಾಮತ ಹೇಳಿದರು.


ಅವರು ಭಾನುವಾರ ಭಟ್ಕಳದಲ್ಲಿ ಸಮಾಜದವರಿಗಾಗಿ ನಡೆದ “ಹೂನ್ ಸಿತ ತೀಕ ಆಂಬಟ್” ಎನ್ನುವ ವಿಶಿಷ್ಟ ಕಾರ್ಯಕ್ರಮ ಉತ್ತರಕನ್ನಡ ಜಿಲ್ಲೆಯಲ್ಲಿಯೆ ಮೊದಲ ಪ್ರಯತ್ನ. ಭಟ್ಕಳದಲ್ಲಿ ಅಂದು ಸಮಾಜದ ಪ್ರಮುಖ ಕೃಷ್ಣಮೂರ್ತಿ ನಾಯಕ ಮತ್ತು ಉದಯ ಪೈ ನೇತೃತ್ವದಲ್ಲಿ ಆರಂಭವಾಗಿತ್ತು. ಇಂದು ಅದೊಂದು ಸಮಾಜದ ಜನರನ್ನು ಬೆಸೆಯುವ ಸಂತೋಷಕೂಟವಾಗಿ ಮಾರ್ಪಟ್ಟಿದೆ. ಶುದ್ದ ಶಾಖಾಹಾರ ಸೇವಿಸುವವರಿಗೂ ವಿವಿಧ ಬಗೆಯ ಔತಣಕೂಟದ ವ್ಯವಸ್ಥೆ ಎರ್ಪಡಿಸಲಾಗಿದೆ. ಅಷ್ಟೆ ಅಲ್ಲದೆ ಸಂಜೆಯ ಸಮಯದಲ್ಲಿ ವಿವಿಧ ಬಗೆಯ ಸ್ಪರ್ಧಾ ಕಾರ್ಯಕ್ರಮಗಳು ಸೇರಿದಂತೆ ಸಾಂಸ್ಕçತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಸಮಾಜದ ಎಲ್ಲರೂ ದುಬಾರಿ ಖಾದ್ಯಗಳನ್ನು ಖರೀದಿಸಿ ಮನೆಯ ಎಲ್ಲಾ ಸದಸ್ಯರು ಒಟ್ಟಿಗೆ ತಿನ್ನುವದು ಬಹಳ ವಿರಳ. ಕೆಲವರಿಗೆ ಇದು ಸಾಧ್ಯವಾಗಬಹುದು. ಎಲ್ಲರೊಂದಿಗೆ ನಮ್ಮೊಂದಿಗೆ ಒಂದು ಸಂಜೆ ಎಂಬ ಕಲ್ಪನೆಯಿಂದ ಈ ಸಮಾರಂಭವನ್ನು ಎರ್ಪಡಿಸಿ, ಸಂತಸದ ಸಮಯವನ್ನು ಕಳೆಯುವ ಉದ್ದೇಶದಿಂದ, ಸಮಾಜದ ಎಲ್ಲಾ ಪ್ರಮುಖರ ಸಹಾಯದಿಂದ ಈ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಮಾಜದ ಮುಖಂಡ ನರೇಂದ್ರ ನಾಯಕ ಹೇಳಿದರು. ಸುಮಾರು 150 ಕೆಜಿ ಕಿಂಗ್ ಫಿಶ್, 20ಕೆಜಿ ಪಾಂಪ್ಲೆಟ್, 15ಕೆಜಿ ಗಾಬಿ ಸೇರಿದಂತೆ ಇತರ ಮೀನುಗಳ ಖಾದ್ಯಗಳನ್ನು ಸಮಾಜದ ಮಹಿಳಾ ಮಂಡಳಿಯ ಸದಸ್ಯರು ತಯಾರಿಸಿದ್ದಾರೆ. ಇದರೊಟ್ಟಿಗೆ ಘಮಘಮಿಸುವ ತರಕಾರಿ ಬಿರಿಯಾನಿ, ಬದನೆಕಾಯಿ ಫ್ರೆöÊ ಸೇರಿದಂತೆ ಇತರ ತರಕಾರಿ ಖಾದ್ಯಗಳು ಇದ್ದವು. ತಾಲೂಕಾ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ, ಪುರಸಭೆ ಸದಸ್ಯೆ ರಜನಿ ಪ್ರಭು, ಸಂದ್ಯಾ ಪೈ, ಆಶಾ ಪೈ ಸೇರಿದಂತೆ ಸಮಾಜದ ಮಹಿಳೆಯರು ಸಹಕರಿಸಿದ್ದಾರೆ. ನಾಗೇಶ ಪೈ, ಸುಬ್ರಾಯ ಕಾಮತ, ನಾಗೇಶ ಕಾಮತ ಸೇರಿದಂತೆ ಇತರರು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕಾರ ನೀಡಿದ್ದಾರೆ

error: