March 13, 2025

Bhavana Tv

Its Your Channel

ಭಟ್ಕಳ ತಾಲೂಕಿನ ನೂತನ ತಹಶೀಲ್ದಾರರಾಗಿ ಡಾ. ಸುಮಂತ ಅಧಿಕಾರ ಸ್ವೀಕಾರ

ಭಟ್ಕಳ: ತಾಲೂಕಿನ ನೂತನ ತಹಶೀಲ್ದಾರರಾಗಿ ಡಾ. ಸುಮಂತ ಅಧಿಕಾರ ಸ್ವೀಕರಿಸಿದರು.
ಪ್ರಭಾರ ತಹಶೀಲ್ದಾರರಾಗಿದ್ದ ಆಶೋಕ ಭಟ್, ಡಾ. ಸುಮಂತ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ಶಿವಮೊಗ್ಗ ಜಿಲ್ಲೆ ಸಾಗರ ಮೂಲದವರಾದ ಸುಮಂತ್, ಶಿವಮೊಗ್ಗ ಆಹಾರ ಮತ್ತು ಸರಬರಾಜು ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು, ಇತ್ತೀಚಿಗಷ್ಟೇ ಭಟ್ಕಳ ತಹಶೀಲ್ದಾರ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ರಾಮನಗರ ಚೆನ್ನಪಟ್ಟಣದಲ್ಲಿ ವೈದ್ಯಾಧಿಕಾರಿಯಾಗಿರುವಾಗಲೇ ಕೆಎಎಸ್ ಪರೀಕ್ಷೆ ಪಾಸಾಗಿದ್ದರು.
ಆಶೋಕ ಭಟ್ ಅವರಿಗೆ ನೂತನ ತಹಶೀಲ್ದಾರ ಡಾ. ಸುಮಂತ ಹಾಗೂ ಕಛೇರಿ ಸಿಬ್ಬಂದಿಗಳು
ಸನ್ಮಾನಿಸಿ ಗೌರವಿಸಿ ಬೀಳ್ಕೊಡುಗೆ ನೀಡಿದರು

error: