May 3, 2024

Bhavana Tv

Its Your Channel

ಭಟ್ಕಳದಲ್ಲಿ ಅರಣ್ಯವಾಸಿಗಳನ್ನ ಉಳಿಸಿ ಬೃಹತ್- ಜಾಥ ; ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದನೆಗೆ ಅಗ್ರಹ.

ಭಟ್ಕಳ: ತಾಲೂಕಾದ್ಯಂತ ಆಗಮಿಸಿದ ಸಹಸ್ರಾರು ಸಂಖ್ಯೆಯ ಅರಣ್ಯವಾಸಿಗಳು ಜಾಥಕ್ಕೆ ಪಾಲ್ಗೋಳ್ಳುವಿಕೆಯಿಂದ ಅರಣ್ಯ ಭೂಮಿ ಹಕ್ಕಿಗೆ ಸಂಬoಧಿಸಿ ವ್ಯಾಪಕ ಜಾಗೃತ ಮೂಡಿಸುವ ಹಾಗೂ ಸರಕಾರ ಅರಣ್ಯವಾಸಿ ಸಮಸ್ಯೆಗೆ ಸ್ಪಂದಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳನ್ನ ಉಳಿಸಿ- ಜಾಥವು ಭಟ್ಕಳ ತಾಲೂಕಿನಲ್ಲಿ ಯಶಸ್ವಿಯಾಗಿ ಜರುಗಿತು.

ಅರಣ್ಯ ಭೂಮಿ ಹಕ್ಕು ಹೋರಾಟದ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಇಂದು ಭಟ್ಕಳ ತಾಲೂಕಿನ ಪ್ರವಾಸಿ ಮಂದಿರದ ಪ್ರವೇಶ ದ್ವಾರದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಜಾಥವು ಹೋರಾಟದ ಬಾವುಟ, ವಾದ್ಯ, ಘೋಷಣೆಗಳೊಂದಿಗೆ ಉತ್ಸಾಹದಿಂದ ಅರಣ್ಯವಾಸಿಗಳು ಪಾಲ್ಗೊಂಡಿದ್ದರು.

ರಾಜ್ಯ ಮಟ್ಟದ ಕಾರ್ಯಕ್ರಮದ ಅಂಗವಾಗಿ ಪ್ರಥಮ ಹಂತದಲ್ಲಿ ಜಿಲ್ಲೆಯಲ್ಲಿ ಹತ್ತುಸಾವಿರ ಕೀ.ಮೀ ಸಂಚರಿಸುವ ಹೋರಾಟ ವಾಹಿನಿ 500 ಹಳ್ಳಿಗಳಿಗೆ 30 ದಿನಗಳಲ್ಲಿ ತಿರುಗಾಟಮಾಡಲಿದ್ದು, ಅರಣ್ಯವಾಸಿಗಳ ಹಳ್ಳಿಗಳಲ್ಲಿ ಹೋರಾಟ ವಾಹಿನಿ ಮೂಲಕ ಕಾನೂನು ಜಾಗೃತೆ ಮೂಡಿಸುವ ಕಾರ್ಯಕ್ರಮವು ಇಂದು ಭಟ್ಕಳ ತಾಲೂಕಿನಾದ್ಯಂತ ಅರಣ್ಯವಾಸಿಗಳಲ್ಲಿ ಸಂಚಲನ ಮೂಡಿಸಲು ಯಶಸ್ವಿಯಾಗಿದೆ.

ಜಾಥದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಪಾಂಡುರAಗ ನಾಯ್ಕ ಬೆಳಕೆ, ಹಿರಿಯ ಧುರೀಣರಾದ ಇನಾಯತ ಸಾಬಂದ್ರಿ, ರಿಜವಾನ, ಕಯುಂ, ಚಂದ್ರು ನಾಯ್ಕ, ತಂಜೀಮ್ ಅಧ್ಯಕ್ಷ ಫರವೇಜ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್, ಜಾಸೀಬ್ ಬ್ಯಾರಿ, ಕಯುಂ ಕೋಲೋ, ನಜೀರ್ ಖಾಶಿಮ್‌ಜಿ, ಶಿವು ಮರಾಠಿ, ರುಕ್ಯ ಮರಾಠಿ, ಸೋಮ್ಯ ಗೊಂಡ, ಫರಿದಾ ಬಾನು, ಲಕ್ಷಿö್ಮÃ, ಶಾಂತಿ ಮೋಗೇರ್, ಸುಬ್ಬಯ್ಯ ಗೊಂಡ ಮುಂತಾದವರು ನೇತ್ರತ್ವ ವಹಿಸಿದ್ದರು.

ಜಾಥಕ್ಕೆ ಚಾಲನೆ:
ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯವಾಸಿಗಳನ್ನ ಉಳಿಸಿ-ಜಾಥಕ್ಕೆ ಸಂಘನೆಯ ಬಾವುಟವನ್ನ ಪ್ರದರ್ಶಿಸುತ್ತಾ ಚಾಲನೆ ನೀಡಿದರು.

error: