March 13, 2025

Bhavana Tv

Its Your Channel

ಬಿ.ಜೆ.ಪಿ. ಸರಕಾರದ ಮನೆ ಬಾಗಿಲಿಗೆ ಕಂದಾಯ ದಾಖಲೆಗಳ ಕಾರ್ಯಕ್ರಮ

ಭಟ್ಕಳ: ಬಿ.ಜೆ.ಪಿ. ಸರಕಾರದ ಮನೆ ಬಾಗಿಲಿಗೆ ಕಂದಾಯ ದಾಖಲೆಗಳು ಕಾರ್ಯಕ್ರಮವನ್ನು ಶಿರಾಲಿಯ ಚಿತ್ರಾಪುರದಲ್ಲಿ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಇಂದು ರೈತರು ಕಚೇರಿಗಳಿಗೆ ಹೋಗಿ ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು ಎನ್ನುವ ಕಾರಣಕ್ಕೆ ಸರಕಾರವೇ ರೈತರ ಮನೆ ಬಾಗಿಲಿಗೆ ಜಾತಿ ಪ್ರಮಾಣ ಪತ್ರ, ಪಹಣಿ ಪತ್ರಿಕೆ, ಕುಟುಂಬದ ಆದಾಯ ಪ್ರಮಾಣ ಪತ್ರ ಸೇರಿದಂತೆ ದಾಖಲೆಗಳನ್ನು ತಲುಪಿಸುತ್ತಿದೆ. ನಮ್ಮ ತಾಲೂಕಿಗೂ ಕೂಡಾ ಸರಕಾರದಿಂದಲೇ ಪ್ರತಿಯೊಂದು ಕೂಡಾ ಮುದ್ರಿತವಾಗಿ ಬಂದಿದ್ದು ಪ್ರತಿಯೊರ್ವರ ಮನೆ ಬಾಗಿಲಿಗೆ ತಲುಪಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ: ಸುಮಂತ, ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಶಿರಾಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭಾಸ್ಕರ ದೈಮನೆ ಮುಂತಾದವರು ಉಪಸ್ಥಿತರಿದ್ದರು.
ತಹಶಿಲ್ದಾರರ ಕಚೇರಿ ಸಿರಸ್ತೆದಾರ ವಿಜಯಲಕ್ಷ್ಮಿ ಮಣಿ, ಮಾವಳ್ಳಿ ಹೋಬಳಿಯ ಕಂದಾಯ ನಿರೀಕ್ಷಕ ಶ್ರೀನಿವಾಸ ಮಾಸ್ತಿ, ಗ್ರಾಮಲೆಕ್ಕಾಧಿಕಾರಿ ಹೇಮ ನಾಯ್ಕ, ಗ್ರಾಮಸಹಾಯಕರ ಮಂಜುನಾಥ ನಾಯ್ಕ,ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮ ಸಂಘಟಿಸಿದ್ದರು.

error: